Skip to main content
ವಿಡಿಯೋ
sports

ರಿಶಭ್ ಪಂತ್ ಸೃಷ್ಟಿಸಿದ್ರು ಹೊಸ ಇತಿಹಾಸ

By ರಂಜಿತ್ ಡಿ ಶೆಟ್ಟಿ
ರಿಶಭ್ ಪಂತ್ ಸೃಷ್ಟಿಸಿದ್ರು ಹೊಸ ಇತಿಹಾಸ

ರಿಶಬ್ ಪಂತ್ ಅವ್ರನ್ನ ಮುಂದಿನ ಸೀಸನ್ ನಲ್ಲೂ ಕೂಡ ಲಕ್ನೋ ತಂಡ ಇಟ್ಟುಕೊಳ್ಳುತ್ತಾ.?

ರಿಷಬ್ ಪಂತ್ ಭಾರತ ಕ್ರಿಕೆಟ್ ತಂಡದ ಪರ ಉತ್ತಮ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಪ್ರದರ್ಶನದ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸಿದ ಆಟಗಾರ..


ಐಪಿಎಲ್ ನಲ್ಲಿ ಇವರು ಈಗ ಲಕ್ನೋ ಸೂಪರ್ ಗೈನ್ಟ್ಸ್ ತಂಡದ ನಾಯಕನಾಗಿದ್ದಾರೆ.. ಐಪಿಎಲ್ ನಲ್ಲಿ ಇವರು ಯಾವೆಲ್ಲ ತಂಡದ ಪರ ಆಡಿದ್ದಾರೆ ಹಾಗೇ ಇವರ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ರೀಶಬ್ ಪಂತ್ ಅವ್ರು ತಮ್ಮ ಮೊದಲ ಐಪಿಎಲ್ ಪಂದ್ಯ ಆಡಿದ್ದು 2016 ರಲ್ಲಿ..

2016 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ರಿಶಭ್ ಪಂತ್ ಅವರನ್ನ 1.9 ಕೋಟಿ ಕೊಡೋದರ ಮೂಲಕ ತಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತೆ..


2017 ರಲ್ಲಿ ಕೂಡ ರಿಶಭ್ ಪಂತ್ ಅದೇ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಅದೇ 1.9 ಕೋಟಿ ಮೊತ್ತಕ್ಕೆ ಆಡ್ತಾರೆ..

2018 ರಲ್ಲಿ 8 ಕೋಟಿ ಕೊಟ್ಟು ಡೆಲ್ಲಿ ಡೇರ್ ಡೆವಿಲ್ಸ್ ರಿಶಬ್ ಪಂತ್ ಅವರನ್ನ ತಂಡ ತಂಡದಲ್ಲೇ ಇಟ್ಟುಕೊಳ್ಳುತ್ತೆ..


2019 ಕ್ಕೆ ಆಗೋವಾಗ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಹೆಸರು ಡೆಲ್ಲಿ ಕ್ಯಾಪಿಟಲ್ ಅಂತ ಚೇಂಜ್ ಆಗುತ್ತೆ..

ಇನ್ನು 2019, 2020 ಮತ್ತೆ 2021 ಈ ಮೂರೂ ವರ್ಷವೂ ಕೂಡ ಡೆಲ್ಲಿ ಕ್ಯಾಪಿಟಲ್ ತಂಡ ರಿಶಭ್ ಪಂತ್ ಅವರನ್ನ ಪ್ರತಿ ಸೀಸನ್ ಗೆ 8 ಕೋಟಿ ಕೊಡೋದರ ಮೂಲಕ ತನ್ನ ತಂಡದ ಪರಾನೆ ಆಡಿಸುತ್ತೆ..

2021, 2022, 2023 ಈ ಮೂರೂ ವರ್ಷವೂ ರಿಷಬ್ ಪಂತ್ ಅವ್ರು ಸೀಸನ್ ಗೆ 16 ಕೋಟಿಯಂತೆ ಡೆಲ್ಲಿ ಕ್ಯಾಪಿಟಲ್ ತಂಡದ ಪರ ಆಡ್ತಾರೆ..


2025 ಈ ಐಪಿಎಲ್ ಸೀಸನ್ ನಲ್ಲಿ ಲಕ್ನೋ ಸೂಪರ್ ಗೇಂಟ್ಸ್ ತಂಡ ರಿಶಬ್ ಪಂತ್ ಅವ್ರನ್ನ ಬರೋಬ್ಬರಿ 27 ಕೋಟಿ ರೂಪಾಯಿಗೆ ತನ್ನ ತಂಡಕ್ಕೆ ಸ್ವಾಗತ ಮಾಡಿದೆ..

ಇಡೀ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಒಂದು ತಂಡದ ಪಾಲಾದ ವ್ಯಕ್ತಿ ಅಂದ್ರೆ ಅದು ರಿಶಭ್ ಪಂತ್..

ರಿಶಬ್ ಪಂತ್ ಅವ್ರನ್ನ ಮುಂದಿನ ಸೀಸನ್ ನಲ್ಲೂ ಕೂಡ ಲಕ್ನೋ ತಂಡ ಇಟ್ಟುಕೊಳ್ಳುತ್ತಾ.? ಇಲ್ಲಾ ಪುನಃ ಡೆಲ್ಲಿ ಕ್ಯಾಪಿಟಲ್ ತಂಡ ಅವ್ರನ್ನ ಸ್ವಾಗತ ಮಾಡುತ್ತಾ..?

ಮುಂದಿನ ವರ್ಷ ಕಾದು ನೋಡೋಣ.