IPL 2025 FINAL: ಆರ್ ಸಿ ಬಿ ಗೆದ್ರೆ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಹೋಳಿಗೆ ಊಟ ಆಫರ್ .!

ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್ ಸಿ ಬಿ ಗೆಲುವಿಗಾಗಿ ರಾಜ್ಯಾದ್ಯಂತ ಅಭಿಮಾನಿಗಳು ವಿಶೇಷ ಪ್ರಾರ್ಥನೆ. ಹೋಮ-ಹವನಗಳನ್ನು ನೆರವೇರಿಸಿದ್ದಾರೆ. ಗೆಲುವಿನ ಸಂಭ್ರಮಕ್ಕೆ ಉಚಿತ ಹೋಳಿಗೆ ಊಟ, ಆಟೋ ಪ್ರಯಾಣದಂತಹ ಭರವಸೆಗಳನ್ನು ಅಭಿಮಾನಿಗಳು ನೀಡಿದ್ದಾರೆ.
ಬೆಂಗಳೂರು (ಜೂ.೩): 18ನೇ ಐ ಪಿ ಎಲ್ ಫೈನಲ್ ಪಂದ್ಯಕ್ಕೆ ಅಹಮದಬಾದ್ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗಿದೆ. ಚೊಚ್ಚಲ ಐಪಿಎಲ್ ಟ್ರೋಫಿಗಾಗಿ ಪಂಜಾಬ್ ಮತ್ತು ಆರ್ ಸಿ ಬಿ ಸೆಣಸಾಡುತ್ತದೆ.

ಈ ಹಿನ್ನಲೆಯಲ್ಲಿ ಆರ್ ಸಿ ಬಿ ಅಭಿಮಾನಿಗಳು ದೆವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭ ಹರಿಸಲಾಗಿದೆ. ಜತೆಗೆ ಆರ್ ಸಿ ಬಿ ಗೆದ್ದರೆ ಮೈಸೂರಿನ ಎಲ್ಲಾ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಹೋಳಿಗೆ ಊಟ ಹಾಕಿಸುವುದಾಗಿ ಕೆ, ಆರ್ . ಬ್ಯಾಂಕ್ ಅಧ್ಯಕ್ಷ ಹಾಗೂ ಅಭಿಮಾನಿ ಬಸವರಾಜ್ ಘೋಷಿಸಿದ್ದಾರೆ. ನಗರದ ಗನ್ಹ್‌ಔಸ್ ಸಮೊಹದಲ್ಲಿ ಸಾಂಕೇತಿಕವಾಗಿ ಉಚಿತ ಹೋಳಿಗೆ ಊಟವನ್ನು ಸೋಮವಾರ ವಿತರಿಸಿ ಮಾತನಾಡಿದ ಅವರು, ಮೈಸೂರಿನ 16 ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಹೋಳಿಗೆ ಊಟ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಆರ್ ಸಿ ಬಿಗಾಗಿ ವಿಶೇಷ ಕಾರು ಸಿದ್ಧ:
ಮೈಸೂರಿನ ಆರ್ ಸಿ ಬಿ ಅಭಿಮಾನಿಗಳಾದ ದೀಪಕ್, ಶ್ರೇಯಸ್ ಮತ್ತು ಪ್ರಣೀತ್ ಎಮಬುವರು ಹೆಬ್ಬಾಳು ಕಾಮ್ರಿಕ ಪ್ರದೇಶದ ಕಾರ್ಮೆಡ್ ನಲ್ಲಿ ವಿಶೇಷ ಕಾರನ್ನು ಸಿದ್ದಪಡಿಸಿ, ಕಾರನ್ನು ಸಂಪೂರ್ಣವಾಗಿ ಆರ್ ಸಿ ಬಿ ಮಯ ಮಾಡಿದ್ದಾರೆ. ಕಾರಿನ ಮೊಂಭಾಗದಲ್ಲಿ ಕನ್ನಡದಲ್ಲಿ ರಾಯಲ್ ಚಾಲೆಂಜಸ್ ಬೆಂಗಳೂರು ಹೆಸರು, ಒಂದು ಬದಿಯಲ್ಲಿ ವಿರಾಟ್ ಕೊಹ್ಲಿಹಾಗೂ ಇತರ ಆಟಗಾರರು ಹಾಗೂ ಅಭಿಮಾನಿಗಳ ಸ್ಟಿಕ್ಕರ್, ಮತ್ತೊಂದು ಬದಿ ಐಪಿಎಲ್ ಗೆದ್ದ ಮಹಿಳಾ ತಂಡದ ಸ್ಟಿಕ್ಕರ್ ಅಂಟಿಸಿದ್ದಾರೆ.
