Skip to main content
ವಿಡಿಯೋ
sports

ಪೂರ್ವಸಿದ್ಧತೆ ಇಲ್ಲದೇ ಆರ್‌ಸಿಬಿ ಪ್ರೋಗ್ರಾಂ ಮಾಡಿದ್ಯಾರು ?

By ನಂದಿನಿ .ಜೆ
ಪೂರ್ವಸಿದ್ಧತೆ ಇಲ್ಲದೇ ಆರ್‌ಸಿಬಿ ಪ್ರೋಗ್ರಾಂ ಮಾಡಿದ್ಯಾರು ?

ಆರ್‌ಸಿಬಿ ಸಂಭ್ರಮಾಚರಣೆ ವೇಳೆ 11 ಮಂದಿ ಸಾವನ್ನಪ್ಪಿರುವ ಪ್ರಕರಣ ಹೇಗಾಯಿತು.

ಬೆಂಗಳೂರು : ಆರ್‌ಸಿಬಿ ಸಂಭ್ರಮಾಚರಣೆ ವೇಳೆ 11 ಮಂದಿ ಸಾವನ್ನಪ್ಪಿರುವ ಪ್ರಕರಣ ಹೇಗಾಯಿತು. ನಿಜಕ್ಕೂ ಈ ಕಾರ್ಯಕ್ರಮವಾದ್ರೂ ಬೇಕಿತ್ತಾ ಎಂಬ ಪ್ರಶ್ನೆಗಳು ಕೇಳಿ ಬರುತ್ತಿದೆ. ಹಾಗಾದ್ರೇ ಪೊಲೀಸ್ ಇಲಾಖೆ ಈ ಕಾರ್ಯಕ್ರಮ ನಡೆಸಲು ಏನು ನಿಲುವು ತಾಳಿತು ಅಂತಾ ತಿಳಿಯಬೇಕಿದೆ. ಪೊಲೀಸ್ ಇಲಾಖೆ ಉನ್ನತ ಮೂಲಗಳ ಪ್ರಕಾರ ಬಂದಿರುವ ಮಾಹಿತಿ ಹೀಗಿದೆ.

ಪೊಲೀಸ್ ಹಿರಿಯ ಅಧಿಕಾರಿಗಳ ಸಲಹೆ ಧಿಕ್ಕರಿಸಿದೇ ದುರಂತಕ್ಕೆ ಕಾರಣ ?

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣ ರಾಜಕಾರಣೆಗಳ ಪ್ರತಿಷ್ಠಿಗಾಗಿ 11 ಅಮಾಯಕರ ಬಲಿಯಾಗಿದು , ಆರ್ ಸಿಬಿ ಕ್ರೇಜ್ ಗಾಗಿ ಜನ ಜೀವ ಕಳೆದುಕೊಂಡ್ರಾ ..? ಎಂಬ ಪ್ರಶ್ನೆ ಉದ್ಭವಿಸಿದೆ. ಅದರಲ್ಲೂ

ಹಿರಿಯ ಅಧಿಕಾರಿಗಳು ಕಾರ್ಯಕ್ರಮ ಬೇಡ ಅಂದ್ರು ಕೇಳದ ರಾಜಕಾರಣೆಗಳು ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡರು.

ಒಂದು ಕಡೆ 18 ವರ್ಷಗಳ ಬಳಿಕ ಆರ್ ಸಿಬಿ ಕಪ್ ಗೆದ್ದಿದೆ. ಈ ಕ್ರೇಜ್ ಜಾಸ್ತಿ ಇದೆ. ಇಡೀ ದೇಶಾದಾದ್ಯಂತ ಅಭಿಮಾನಿಗಳು ಇದ್ದಾರೆ. ಕರ್ನಾಟಕದಲ್ಲೂ ಅಭಿಮಾನಿಗಳ ಸಾಗರವೇ ಜೋರಾಗಿದೆ. ಅಭಿಮಾನಿಗಳು ರೋಚಿಗೆದ್ದವರಂತೆ ಚಿನ್ನಸ್ವಾಮಿ ಸ್ಟೇಡಿಯಂ ಕಡೆ ಬರುತ್ತಾರೆ. ಮೂರು ದಿನ ಕಳೆದು ಸ್ವಲ್ಪ ಕ್ರೇಜ್ ಕಡಿಮೆಯಾದ ಮೇಲೆ ಕಾರ್ಯಕ್ರಮ ಮಾಡೋಣ ಎಂಬ ಸಲಹೆ ಬಂದಿತು.

ಆದರೆ , ತರಾತುರಿಯಲ್ಲಿ ತಯಾರಿ ನಡೆಸಿ ಕಾರ್ಯಕ್ರಮ ಮಾಡೋಣ ಎಂದು ಬೆಂಗಳೂರು ಕಮಿಷನರೇಟ್ ಅಧಿಕಾರಿಗಳು ಮಾಹಿತಿ ನೀಡಿದರು. ಟ್ರಾಫಿಕ್ ಜಾಮ್ ಸೇರಿ ಹಲವು ಸಮಸ್ಯೆಯಾಗುತ್ತೆ ಎಂದು ಹೇಳಿದ್ದ ಪೊಲೀಸರು ಕಾರ್ಯಕ್ರಮ ಮಾಡೋದು ಬೇಡ ದುರಂತ ಸಂಭವಿಸುತ್ತೆ ಎಂದು ಎಚ್ಚರಿಸಿದರು.ಕಾರ್ಯಕ್ರಮ ನಡೆದರೆ ದುರಂತ ಗ್ಯಾರಂಟಿ ಎಂದಿದ್ದರು.

ಆದರೆ ಅಧಿಕಾರಿಗಳ ಮಾತನ್ನೇ ಧಿಕ್ಕರಿಸಿದ್ದ ಸರ್ಕಾರದ ಮಟ್ಟದ ಮಿನಿಸ್ಟರ್ ಹಾಗೂ ಮುಖಂಡರು ನಾವು ಆರ್ ಸಿಬಿ ಕ್ರೇಜ್ ಜೋರಾಗಿದೆ .ಇದೇ ಬಿಸಿಯಲ್ಲಿ ಕಾರ್ಯಕ್ರಮ ಮಾಡಲೇ ಬೇಕು ಎಂದು ಹಠ ಹಿಡಿದರು. ಈ ಹಠಕ್ಕಾಗಿ 11 ಮಂದಿ ಅಮಾಯಕರು ಬಲಿ ,ಸುಮಾರು 47 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳ ಮೂಲಗಳಿಂದ ತಿಳಿದು ಬಂದಿದೆ.

ಬ್ಯಾರಿಕೇಡ್ ಹಾಕೋ ಕೆಲಸ ,ಪೂರ್ವ ಸಿದ್ಧತೆ ಏನು ಮಾಡಿರಲಿಲ್ಲ, ಎಲ್ಲಿಂದಲ್ಲೂ ಜನ ಸಾಗರವೇ ಹರಿದು ಬಂದಿತ್ತು. ಕ್ಷಣ ಮಾತ್ರದಲ್ಲಿ ಗೇಟ್ ಒಳಗೆ ನುಗ್ಗಲು ಹೋಗಿ ದುರಂತ ನಡೆದೇ ಹೋಯ್ತು. ಈ ಅನಾಹುತದಿಂದ ಕುಟುಂಬ ಸದಸ್ಯರನ್ನ ಕಳೆದುಕೊಂಡವರಿಗೆ ಮಾತ್ರ ನೋವು ಗೊತ್ತಾಗುತ್ತದೆ.