ತರಕಾರಿ ಉತ್ತಮ ಆರೊಗ್ಯಕ್ಕೆ ರಹದಾರಿ.!

ಕ್ಯಾರೆಟ್, ಹಾಗಲಕಾಯಿ, ಟೊಮೊಟೊ, ನುಗ್ಗೆಕಾಯಿ, ಬೆಂಡೆಕಾಯಿ, ಹೀಗೆ ಅನೇಕ ತರಕಾರಿಗಳು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.
ಆನಾರೋಗ್ಯ, ಅಶಕ್ತತೆಯೆಂದು ವೈದ್ಯ ರಲ್ಲಿಗೆ ಹೋದರೆ ಅವರು ಪ್ರಪ್ರಥಮವಾಗಿ ಹೇಳುವುದು ’ತರಕಾರಿ ಚೆನ್ನಾಗಿ ತಿನ್ನಿ’ ಎಂದು. ಹಸಿರು ತರಕಾರಿಗಳಲ್ಲಿ ರೋಗ ನಿರೋಧಕ ಶಕ್ತಿ, ಎ,ಬಿ,ಸಿ ಜೀವಸತ್ವಗಳು, ಖನಿಜಾಂಶ, ನಾರಿನಾಂಶ ವಿಫುಲವಾಗಿದ್ದು, ಇವು ನಮ್ಮ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಇಂದಿಗೂ ಆಯುರ್ವೆದದ ಔಷಧಿಗಳಲ್ಲಿ ತರಕಾರಿಗಳ ಬಳಕೆಯಾಗುತ್ತದೆ. ನಾವು ನಮ್ಮ ಆರೋಗ್ಯಕ್ಕೆ ಆದಷ್ಟೂ ಹಸಿ ತರಕಾರಿಗಳನ್ನೇ ಉಪಯೋಗಿಸಬೇಕು. ಮನೆಯ ತೋಟದಲ್ಲಿ ತರಕಾರಿ ಬೆಳೆಯುವವರು ಅಡುಗೆಗೆ ಮುನ್ನವೇ ಅದನ್ನು ಗಿಡದಿಂದ ತೆಗೆದು ಬಳಸಬೇಕು. ಹಸಿರು ಗಿಡದಿಂದ ಹಸಿರು ಸೊಪ್ಪುಗಳ ಸೇವನೆಯು ಆರೋಗ್ಯಕರ ಶರೀರವನ್ನು ನೀಡುತ್ತದೆ. ಕೆಲವು ತರಕಾರಿಗಳ ಶರಿರವನ್ನು ನೀಡುತ್ತದೆ.
ಹಾಗಲಕಾಯಿ:

ಹಾಗಲಕಯಿ, ಇತರ ತರಕಾರಿಗಳಿಗೆ ಹೋಲಿಸಿದರೆ ತುಂಬಾ ಕಹಿ ಎಂದು ಹೇಳಬಹುದು. ಆದರೆ ಸರಿಯಾಗಿ ನೋಡಿದರೆ ನಾವು ಯಾವುದಾದರೂ ಆರೋಗ್ಯ ಸಮಸ್ಯೆ ಗಳಿಗೆ ತೆಗೆದುಕೊಳ್ಳುವ ಔಷಧಿ ಕೂಡ ಕಹಿ ಇರುತ್ತದೆ.
ಹಾಗೆಂದು ಔಷಧಿ ಸೇವನೆಯನ್ನು ಬಿಟ್ಟುಬಿಡುತ್ತೇವೆಯೇ? ಹಾಗಿದ್ದ ಮೇಲೆ ಹಾಗಲಕಾಯಿ ಕಂಡರೆ ಹಿಂದೆ ಸರಿಯುವವರಿಗೆ ಒಂದು ಪ್ರಶ್ನೆ ಖೆಳಬೇಕು ಎನಿಸುತ್ತದೆ. ಹಾಗಲಕಾಯಿ ತನ್ನ ರುಚಿಯಲ್ಲಿ ಮಾತ್ರ ಕಹಿಯಿದ್ದರೂ, ಅದರಿಂದ ನಿಮ್ಮ ಆರೋಗ್ಯಕ್ಕೆ ಏನಾದರು ತೊಂದರೆ ಉಂಟಾಗುವುದೇ ಎಂದು . ಇದು ಹೊಟ್ಟೆಲ್ಲಿರುವ ಹುಳುಗಳನ್ನು ನಾಶಪಡಿಸುತ್ತದೆ ಮತ್ತು ಸಕ್ಕರೆ ಕಾಯಿಲೆಯನ್ನು ತಹಬಮದಿಗೆ ತರುತ್ತದೆ.
ಕ್ಯಾರೆಟ್:
ರೋಗಾಣುಗಳನ್ನು ಮೊದಲಾದ ಜೀರ್ಣ ಅಂಗಗಳನ್ನು ಶುಚಿಗೊಳಿಸುತ್ತದೆ. ಇದರ ಸೇವನೆಯಿಂದ ಮಿದುಳಿನ ಆಋಒಗ್ಯ ಹೆಚ್ಚುತ್ತದೆ ಮತ್ತು ಪುರುಷರ ಪಲವಂತಿಕೆ ಜಾಸ್ತಿಯಾಗುತ್ತದೆ.
ಹುರುಳಿಕಾಯಿ.
ಎಳೆ ಹುರುಳಿಕಾಯಿಯನ್ನು ತಿನ್ನುವುದರಿಂದ ಲಿವರ್ ನಲ್ಲಿ ಉದ್ಭವಿಸುವ ಅಧಿಕ ಉಷ್ನತೆಯನ್ನ ಕರಗಿಸಿ ಮೂಳೆ ಮತ್ತು ನರಗಳನ್ನು ಉನ್ನತವಾಗಿಡಲು ಸಹಾಯ ಮಾಡುತ್ತದೆ..
