Skip to main content
ವಿಡಿಯೋ
crime

ಹೈ ಕೋರ್ಟ್‌ ಮೆಟ್ಟಿಲೇರಿದ ಆರ್‌ಸಿಬಿ ದುರಂತ

By ನಂದಿನಿ .ಜೆ.
ಹೈ ಕೋರ್ಟ್‌ ಮೆಟ್ಟಿಲೇರಿದ ಆರ್‌ಸಿಬಿ ದುರಂತ

ಜನರ ಸಾವುನೋವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಹೈಕೋರ್ಟ್ ಭದ್ರತಾ ಲೋಪದ ಬಗ್ಗೆ ಸರ್ಕಾರದ ವರದಿ ಕೇಳಿದ್ದೇವೆ ಎಂದು ಹೇಳಿ ವಿಚಾರಣೆ 2.30 ಕ್ಕೆ ನಿಗದಿ ಮಾಡಿದೆ.

ಬೆಂಗಳೂರು - ಆರ್‌ಸಿಬಿ ಸಂಭ್ರಮಾಚರಣೆಗೆ ಬಂದು ಕಾಲ್ತುಲಿತದಿಂದ 11 ಜನರ ಸಾವು ಪ್ರಕರಣ ಈಗ ಹೈಕೋರ್ಟ್ ಮೆಟ್ಟಿಲು ಹತ್ತಿದೆ. ವಕೀಲ ಹೇಮಂತ್ ರಾಜ್, ಜಿ.ಆರ್.ಮೋಹನ್ ಅವರಿಂದಲೂ ಮಾಹಿತಿ ಹೊರಬಿದ್ದಿದೆ. ಹೈಕೋರ್ಟ್ ಕಟ್ಟಡದ ಮೇಲೂ ಜನರು ನಿಂತಿದ್ದರು . ಭದ್ರತಾ ಲೋಪವಾಗಿದೆ ಎಂದು ವಕೀಲರಿಂದ ಕೋರ್ಟ್ ಗೆ ಮಾಹಿತಿ ನೀಡಲಾಗಿದೆ.

ಜನರ ಸಾವುನೋವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಹೈಕೋರ್ಟ್ ಭದ್ರತಾ ಲೋಪದ ಬಗ್ಗೆ ಸರ್ಕಾರದ ವರದಿ ಕೇಳಿದ್ದೇವೆ ಎಂದು ಹೇಳಿ ವಿಚಾರಣೆ 2.30 ಕ್ಕೆ ನಿಗದಿ ಮಾಡಿದೆ.

ಹಂಗಾಮಿ ಸಿಜೆ ವಿ.ಕಾಮೇಶ್ವರ ರಾವ್, ನ್ಯಾ.ಸಿ.ಎಂ. ಜೋಶಿ ಅವರಿದ್ದ ಪೀಠದಲ್ಲಿ ವಿಚಾರಣೆ ಕೈಗೆತ್ತಿ ಕೊಂಡಿದೆ.

ಪತ್ರಿಕೆಗಳಲ್ಲಿ ಬಂದ ವರದಿ ಆಧರಿಸಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಸಕ್ತಿ ಅರ್ಜಿ ದಾಖಲಿಸಿಕೊಂಡಿದೆ. ನಿನ್ನೆ ನಡೆದ ಘಟನೆ ತೀವ್ರ ಕಳವಳಕಾರಿಯಾಗಿದೆ .ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದ ನ್ಯಾಯಪೀಠವೂ ಸರ್ಕಾರ ಕೈಗೊಂಡಿದ್ದ ಭದ್ರತಾ ಕ್ರಮಗಳ ಮಾಹಿತಿ ನೀಡಲು ಸೂಚನೆ ನೀಡಿದೆ.

ವಿಚಾರಣೆ ವೇಳೆ ಹೈಕೋರ್ಟ್ ನಲ್ಲಿ ಎಜಿ ಶಶಿಕಿರಣ್ ಶೆಟ್ಟಿ ಉಪಸ್ಥಿತಿ ಇದ್ದರು . ಹೈಕೋರ್ಟ್ ನೀಡುವ ಸೂಚನೆಗಳನ್ನು ಪಾಲಿಸಲಾಗುವುದು. ನಡೆದ ಘಟನೆ ಸರ್ಕಾರದ ಕ್ರಮ ಎಲ್ಲದರ ಮಾಹಿತಿ ನೀಡಲಾಗುವುದು ಎಂದು ಹೈಕೋರ್ಟ್ ಗೆ ಎಜಿ ಶಶಿಕಿರಣ್ ಶೆಟ್ಟಿ ಮಾಹಿತಿ ನೀಡಿದರು. ಇದೇ ವೇಳೆ ಘಟನೆ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಲಾಗಿದೆ . ಎಲ್ಲಾ ವಿವರಗಳನ್ನು ಒದಗಿಸುವುದಾಗಿ ಎಜಿ ಶಶಿಕಿರಣ್ ಶೆಟ್ಟಿ ಪೀಠಕ್ಕೆ ಮಾಹಿತಿ ನೀಡಿದರು.