Skip to main content
ವಿಡಿಯೋ
cinema

ಆತುರದಿಂದ ಕಾರ್ಯಕ್ರಮ ಮಾಡೋದು ಬೇಡವಾಗಿತ್ತು - ಚಂದನ್‌ ಶೆಟ್ಟಿ

By ನಂದಿನಿ .ಜೆ
ಆತುರದಿಂದ ಕಾರ್ಯಕ್ರಮ ಮಾಡೋದು ಬೇಡವಾಗಿತ್ತು - ಚಂದನ್‌ ಶೆಟ್ಟಿ

RCB ಕಪ್ ಗೆದ್ದಿದ್ದು ಎಂತಹ ಸಂಭ್ರಮಾಚರಣೆ ನಡೆಯಬೇಕಿತ್ತು.

ಬೆಂಗಳೂರು : RCB ಕಪ್ ಗೆದ್ದಿದ್ದು ಎಂತಹ ಸಂಭ್ರಮಾಚರಣೆ ನಡೆಯಬೇಕಿತ್ತು . ಆದರೆ ಕಪ್ ಗೆದ್ದ ಸಂಭ್ರಮಕ್ಕಿಂತ ದುರಂತ ಸಾವುಗಳು ಕಾಡುತ್ತಿವೆ ಎಂದು ನಟ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹೇಳಿದ್ದಾರೆ .

ಇಡೀ ತಿಂಗಳು ಆರ್ ಸಿಬಿ ಕಪ್ ಗೆದ್ದ ಸಂಭ್ರಮ ಇರಬೇಕಿತ್ತು . ಕಾರಲ್ಲಿ ಸಾಧ್ಯವಿಲ್ಲ ಅಂತ ಸುಮಾರು 3 ಕಿಮೀ ನಡೆದು ಸ್ಟೇಡಿಯಂ ಬಳಿ ಹೋದೆ .ನಡೆದು ಹೋಗಲೂ ಸಹ ಸಾಧ್ಯವಾಗಿಲ್ಲ ಎಂದು ತಮ್ಮ ಅನುಭವವನ್ನ ಹೇಳಿಕೊಂಡಿದ್ದಾರೆ.

ಇನ್ನೂ ಕಣ್ಣಾರೆ ಫ್ಯಾನ್ಸ್ ಉಸಿರುಗಟ್ಟಿ ನಿಂತಿದ್ದನ್ನ‌ ನೋಡ್ದೇ . 35 ಸಾವಿರ ಕೆಪಾಸಿಟಿಗೆ ಎರಡೂವರೆ ಲಕ್ಷದಷ್ಟು ಜನ ಸೇರಿದ್ರು .ಹಲವರು‌ ಅಸ್ವಸ್ಥರಾಗಿ ಬಿದ್ದಿದ್ರು .ಲಕ್ಷಾಂತರ ಫ್ಯಾನ್ಸ್ ಇದ್ರೂ ಎಲ್ಲೂ ಪೊಲೀಸರು ಕಂಡಿಲ್ಲ .18 ವರ್ಷಗಳ ನಂತರ RCB ಕಪ್‌ ಹಿಡಿದಿತ್ತು .ಆದರೆ ಅದರ ಸಂಭ್ರಮಾಚರಣೆ ಮಾಡೋಕ್ ಆಗಿಲ್ಲ ಎಂದು ಬೇಸರ ಹೊರಹಾಕಿದರು.

ಫ್ಯಾನ್ಸ್ ಹಾಗೂ ಸರ್ಕಾರ ಸ್ವಲ್ಪ ಕಾಮನ್ ಸೆನ್ಸ್ ಇಂದ ವರ್ತಿಸಬೇಕಿತ್ತು . ಇಲ್ಲಿ ಯಾರನ್ನ ದೂಷಿಸಬೇಕು ಗೊತ್ತಾಗ್ತಿಲ್ಲ .ದುರಂತವನ್ನ ಹತ್ತಿರದಿಂದ ಕಂಡಿದ್ದ ಚಂದನ್ ಶೆಟ್ಟಿ , ಫ್ಯಾನ್ಸ್ ಮಕ್ಕಳನ್ನೂ ಎತ್ತಿಕೊಂಡು ನಿಂತಿದರು.

ಕುಡಿಯೋಕೆ ನೀರಿಗೂ ಪರದಾಟ ಇತ್ತು .ಒಳ್ಳೆ ಪ್ಲಾನ್ ಮಾಡಿ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಬಹುದಿತ್ತು .ಇಷ್ಟು ಆತುರದಿಂದ ಕಾರ್ಯಕ್ರಮ ಮಾಡೋದು ಬೇಡವಾಗಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.