Skip to main content
ವಿಡಿಯೋ
others

ISRO ಕೆಲಸ ಬೇಕಾ - ಈ ಸ್ಟೋರಿ ನೋಡಿ !

By ನಂದಿನಿ .ಜೆ
ISRO ಕೆಲಸ ಬೇಕಾ - ಈ ಸ್ಟೋರಿ ನೋಡಿ !

ಗ್ರಂಥಾಲಯ ಸಹಾಯಕ ಹುದ್ದೆ , ತಾಂತ್ರಿಕ ಸಹಾಯಕ ಹಾಗೂ ವಿಜ್ಞಾನಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್‌ 18 ಆಗಿದೆ. ಎಲ್ಲ ಪರೀಕ್ಷೆ ಮುಗಿದ ಬಳಿಕ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 44,900 ರೂ ಹಾಗೂ 1,42,400 ರೂ ವರೆಗೂ ವೇತನ ಸಿಗಲಿದೆ.

ಬೆಂಗಳೂರು : ಹಲವು ಹುದ್ದೆಗಳ ನೇಮಕಾತಿಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅರ್ಜಿಗಳನ್ನ ಆಹ್ವಾನಿಸಿದೆ. ISRO ಅಧಿಕೃತ ವೆಬ್‌ಸೈಟ್‌ ಆಗಿರುವ isro.gov.in ಅಥವಾ vssc.gov.in ನಿಂದ ಹೆಚ್ಚಿನ ಮಾಹಿತಿಯನ್ನ ಪಡೆಯಬಹುದಾಗಿದೆ.

ಗ್ರಂಥಾಲಯ ಸಹಾಯಕ ಹುದ್ದೆ , ತಾಂತ್ರಿಕ ಸಹಾಯಕ ಹಾಗೂ ವಿಜ್ಞಾನಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್‌ 18 ಆಗಿದೆ. ಎಲ್ಲ ಪರೀಕ್ಷೆ ಮುಗಿದ ಬಳಿಕ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 44,900 ರೂ ಹಾಗೂ 1,42,400 ರೂ ವರೆಗೂ ವೇತನ ಸಿಗಲಿದೆ.

ಯಾವ ಯಾವ ಹುದ್ದೆಗಳು ಖಾಲಿ ಇದೆ?

  • ವೈಜ್ಞಾನಿಕ ಸಹಾಯಕ (ರಸಾಯನಶಾಸ್ತ್ರ)

  • ತಾಂತ್ರಿಕ ಸಹಾಯಕ (ರೆಫ್ರಿಜರೇಷನ್ ಮತ್ತು ಎಸಿ)

  • ವೈಜ್ಞಾನಿಕ ಸಹಾಯಕ (ಭೌತಶಾಸ್ತ್ರ) 4 ಹುದ್ದೆಗಳು

  • ಗ್ರಂಥಾಲಯ ಸಹಾಯಕ-ಎ: 2 ಹುದ್ದೆಗಳು

ಅರ್ಜಿ ಹಾಕಲು ಅರ್ಹತೆಗಳು ಹೀಗಿದೆ ?

  • ತಾಂತ್ರಿಕ ಸಹಾಯಕ (ರಾಸಾಯನಿಕ): ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಪ್ರಥಮ ದರ್ಜೆ ಡಿಪ್ಲೊಮಾ

  • ವೈಜ್ಞಾನಿಕ ಸಹಾಯಕ (ಭೌತಶಾಸ್ತ್ರ): ಭೌತಶಾಸ್ತ್ರದಲ್ಲಿ ಪ್ರಥಮ ದರ್ಜೆ ಪದವಿ

  • ತಾಂತ್ರಿಕ ಸಹಾಯಕ (ಮೆಕ್ಯಾನಿಕಲ್): ಮೆಕ್ಯಾನಿಕಲ್ ಎಂಜಿನಿಯರಿಂಗ್ / ಪ್ರೊಡಕ್ಷನ್ ಎಂಜಿನಿಯರಿಂಗ್‌ನಲ್ಲಿ ಪ್ರಥಮ ದರ್ಜೆ ಡಿಪ್ಲೊಮಾ

ಈ ಮೇಲ್ಕಂಡ ಎಲ್ಲ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.