ಬೆಂಗಳೂರು - ಕಪ್ ನಮ್ದೆ. ಆದರೇ ತಪ್ಪು ಯಾರದು.? ರಾಜ್ಯದ ಏಳು ಕೋಟಿ ಜನರು ಕೇಳುತ್ತಿದ್ದಾರೆ . ಯಾರೊ ಮಾಡಿದ ಸಾಧನೆ , ಯಾರೊ ಕೋಚ್, ಯಾರೊ ಆಡಿದ್ದು,ಆದರೆ ಇವರು ತಮ್ಮ ದುರ್ಲಾಭಕ್ಕೆ, ಪ್ರಚಾರಕ್ಕೆ ಬಳಕೆ ಮಾಡಿದ್ದಕ್ಕೆ ಅವಘಡ ಆಗಿದೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿ , 13 ಗೇಟ್ ಇದೆ. ನಾಲ್ಕು ಗೇಟ್ ಒಪನ್ ಮಾಡಿದ್ದಾರೆ. ಪೊಲೀಸ್ ಗೆ ಸೂಚನೆಯೆ ಇಲ್ಲ ಎಷ್ಟೊತ್ತಿಗೆ ಗೇಟ್ ಓಪನ್ ಮಾಡಬೇಕು . ಈ ಕಾರ್ಯಕ್ರಮದ ಆಯೋಜನೆ ಯಾರದ್ದು ಎಂದರೆ ಗೊತ್ತಿಲ್ಲ. IPL ಚೆರ್ಮನ್ ಹೇಳಿದ್ದಾರೆ ನಮಗೆ ಇದು ಗೊತ್ತಿಲ್ಲ ಎಂದು. ಅವರು ಸ್ಪಷ್ಟನೆ ನೀಡಿದ್ದಾರೆ.
Kca ಕೂಡ ಹೇಳಿದೆ, ಸರ್ಕಾರ ಮೈದಾನ ಕೇಳಿತು, ನಾವು ನೀಡಿದ್ದೇವೆ. Rcb ಹೇಳಿದೆ, ನಾವು ಮೈದಾನ ಕೇಳಿಲ್ಲ. ಎರಡು ಕಿಮೀ ಮೆರವಣಿಗೆ ಕೇಳಿದೆ. ಪೊಲೀಸ್ ಸಹ ಕಾರ್ಯಕ್ರಮ ಬೇಡ ಎಂದಿದೆ. ಪೊಲೀಸ್ ಮುಂಚಿನ ದಿನ ಬೆಳಗಿನ ಜಾವ ೫ ಗಂಟೆ ತನಕ ಕೆಲಸ ಮಾಡಿದ್ದಾರೆ . ಅವರನ್ನೆ ಮತ್ತೆ ನಿನ್ನೆ 4 ಗಂಟೆ ಅವಧಿಯಲ್ಲಿ ಕೆಲಸಕ್ಕೆ ಹಾಕಿದ್ದಾರೆ. ಪೊಲೀಸ್ ಮನುಷ್ಯ ಅಲ್ವಾ? ಅವರಿಗೆ ಜೀವ ಇಲ್ವಾ? ದೇಶದ ಎಲ್ಲಾ ಕಡೆ ಐಪಿಎಲ್ ಮ್ಯಾಚ್ ಆಗಿದೆ. ಅಲ್ಲೂ ಸಹ ಗೆದ್ದ ಮೇಲೆ ಮೆರವಣಿಗೆ ಆಗಿದೆ . ಮುಂಬೈ, ಕೋಲ್ಕತ್ತಾ ಎಲ್ಲಾ ಕಡೆ ಆಗಿದೆ . ಎಲ್ಲೂ ಆಗದ ಅನಾಹುತ ಇಲ್ಯಾಕೆ ? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.
