ಅಂತರಾಷ್ಟ್ರೀಯ ಮಾತೃ ಭಾಷಾ ದಿನವು ಪ್ರಾರಂಭವಾದದ್ದು ಎಲ್ಲಿ.? ಏಕೆ ಈ ದಿನವನ್ನೇ ಅಂತರಾಷ್ಟ್ರೀಯ ಮಾತೃ ಭಾಷಾ ದಿನವಾಗಿ ಆಚರಿಸಲಾಗುತ್ತದೆ.?ಏನಿದರ ಮಹತ್ವ.?

ಎಲ್ಲರಿಗೂ ಅವರವರ ಮಾತೃಭಾಷೆ ಹೆಚ್ಚು ಪ್ರಿಯ ಹಾಗೂ ಪ್ರಮುಖವಾದುದು. ನಮ್ಮ ಕನ್ನಡ ರಾಜ್ಯೋತ್ಸವದ ಮೂಲಕ ನಾವು ನಮ್ಮ ಭಾಷೆಯ ಮೇಲಿರುವ ಪ್ರೀತಿ ಹಾಗೂ ಅಭಿಮಾನವನ್ನು ಪ್ಯಕ್ತಪಡಿಸುತ್ತೇವೆ. ಒಬ್ಬ ವ್ಯಕ್ತಿ ತಾನು ಹುಟ್ಟಿನಿಂದ ಮಾತನಾಡಿಕೊಂಡು ಬಂದ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡುವುದರಿಂದ ಪ್ರತಿಯೊಬ್ಬರ ಮಾತೃ ಭಾಷೆಯನ್ನು ಗೌರವಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಮಾತೃ ಭಾಷಾ ದಿನದ ಆಚರಣೆ ಮೊದಲು ಶುರು ಆಗಿದ್ದು ಬಾಂಗ್ಲಾದೇಶದಲ್ಲಿ. 1952 ರಲ್ಲಿ ಪೂರ್ವ ಬಂಗಾಳದಲ್ಲಿ ಬಂಗಾಳಿ ಭಾಷಾ ಚಳುವಳಿ ಆರಂಭವಾದಾಗ ಈ ದಿನವನ್ನು ಆಚರಿಸುವ ಪ್ರಸ್ತಾಪ ಮೊದಲ ಬಾರಿಗೆ ಬಂದಿತು.

ಇಡೀ ಪ್ರಪಂಚದಲ್ಲಿ 7,100 ಕ್ಕೂ ಹೆಚ್ಚು ಭಾಷೆಗಳು ಇವೆ. ನಮ್ಮ ದೇಶದಲ್ಲಿ ಪ್ರತಿ 15 - 20 ಕಿ.ಮೀ. ಗೆ ಒಂದು ಭಾಷೆ ಬದಲಾಗುತ್ತದೆ. ಈ ಎಲ್ಲಾ ಭಾಷೆಗಳನ್ನು ಗೌರವಿಸುವ ಉದ್ದೇಶದಿಂದ ಯುನೆಸ್ಕೋ 1992 ರಲ್ಲಿ ಫೆಬ್ರವರಿ 21 ಅನ್ನು ವಿಶ್ವ ಮಾತೃ ಭಾಷಾ ದಿನವಾಗಿ ಆಚರಿಸುವುದಾಗಿ ಘೋಷಿಸಿತು. ವಿಶ್ವ ಸಂಸ್ಥೆಯೂ ಈ ದಿನವನ್ನು ಅಂಗೀಕರಿಸಿತು.
ವಿಶ್ವ ಮಾತೃ ಭಾಷಾ ದಿನವಾದ ಇಂದು ನಮ್ಮ ಮಾತೃಭಾಷೆಯ ಮಹತ್ವವನ್ನು ತಿಳಿಯೋಣ, ಬೇರೆ ಭಾಷೆಗಳನ್ನೂ ಗೌರವಿಸೋಣ, ನಮ್ಮ ಭಾಷೆಯನ್ನು ಬಳಸೋಣ. ಸರ್ವರಿಗೂ ವಿಶ್ವ ಮಾತೃ ಭಾಷಾ ದಿನದ ಶುಭಾಶಯಗಳು.
