Skip to main content
food

ಬಾಳೆ ಎಲೆಯ ವಿಶೇಷತೆ.

By Vinutha u
ಬಾಳೆ ಎಲೆಯ ವಿಶೇಷತೆ.

ಬಾಳೆ ಎಲೆಯಲ್ಲಿ ಊಟ, ಕಾಯಿಲೆಗಳಿಗೆ ಹೇಳಿ ಟಾಟಾ ಬಾಳೆ ಎಲೆಯನ್ನು ದಿನನಿತ್ಯದ ಜೀವನದಲ್ಲಿ ಬಳಸುವುದರಿಂದ ಆಗುವ ಪ್ರಯೋಜನಗಳು ಇಲ್ಲಿವೆ. ಬಾಳೆ ಎಲೆ ಭಾರತದ ಸಾಂಪ್ರದಾಯಿಕ ಭೋಜನದ ಒಂದು ಭಾಗ. ಅದರಲ್ಲೂ ದಕ್ಷಿಣ ಭಾರತದಲ್ಲಿ ಊಟಕ್ಕೆ ಬಾಳೆ ಎಲೆ ಇಲ್ಲ ಅಂದರೆ ಊಟಕ್ಕೆ ಉಪ್ಪಿನಕಾಯಿ ಇಲ್ಲದ ಅನುಭವ. ಬಾಳೆ ಎಲೆಯು ನೈಸರ್ಗಿಕವಾಗಿ ನಮ್ಮ ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ.

2. ಬಾಳೆ ಎಲೆಯ ವಿಶೇಷತೆ.

ಬಾಳೆ ಎಲೆಯಲ್ಲಿ ಊಟ, ಕಾಯಿಲೆಗಳಿಗೆ ಹೇಳಿ ಟಾಟಾ

ಬಾಳೆ ಎಲೆಯನ್ನು ದಿನನಿತ್ಯದ ಜೀವನದಲ್ಲಿ ಬಳಸುವುದರಿಂದ ಆಗುವ ಪ್ರಯೋಜನಗಳು ಇಲ್ಲಿವೆ.

ಬಾಳೆ ಎಲೆ ಭಾರತದ ಸಾಂಪ್ರದಾಯಿಕ ಭೋಜನದ ಒಂದು ಭಾಗ. ಅದರಲ್ಲೂ ದಕ್ಷಿಣ ಭಾರತದಲ್ಲಿ ಊಟಕ್ಕೆ ಬಾಳೆ ಎಲೆ ಇಲ್ಲ ಅಂದರೆ ಊಟಕ್ಕೆ ಉಪ್ಪಿನಕಾಯಿ ಇಲ್ಲದ ಅನುಭವ. ಬಾಳೆ ಎಲೆಯು ನೈಸರ್ಗಿಕವಾಗಿ ನಮ್ಮ ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ.

ಬಾಳೆ ಎಲೆಯಲ್ಲಿ ಪಾಲಿಫಿನಾಲ್ ಎಂಬ ಪೋಷಕಾಂಶವಿದೆ. ಈ ಪಾಲಿಫಿನಾಲ್ ಸಸ್ಯವರ್ಗಗಳಲ್ಲಿ ಕಂಡು ಬರುವ ಒಂದು ಬಗೆಯ ಪೋಷಕಾಂಶ. ಬಾಳೆ ಎಲೆಯಲ್ಲಿ ಊಟ ಮಾಡಿದಾಗ ಅದರಲ್ಲಿನ ಪಾಲಿಫಿನಾಲ್ ಪೋಷಕಾಂಶವು ನಾವು ತಿನ್ನುವ ಆಹಾರದೊಂದಿಗೆ ಸೇರಿ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದು ನೈಸರ್ಗಿಕವಾಗಿ ಆಂಟಿಮೈಕ್ರೋಬಿಯಲ್ ಅಂಶವನ್ನು ಹೊಂದಿದ್ದು, ಅವುಗಳು ಆಹಾರದಲ್ಲಿರುವ ಬ್ಯಾಕ್ಟೀರಿಯಗಳನ್ನು ಕೊಲ್ಲುತ್ತದೆ. ಬಾಳೆ ಎಲೆಯು ಆಹಾರದಿಂದ ಹರಡುವ ಕಾಯಿಲೆಗಳನ್ನು ತಡೆಯುತ್ತದೆ. ಬಾಳೆ ಎಲೆಯಲ್ಲಿ ಪಾಲಿಫಿನಾಲ್ ಗಳು, ವಿಟಮಿನ್ ಸಿ ಹಾಗೂ ವಿಟಮಿನ್ ಎ ಪೋಷಕಾಂಶಗಳು ಇವೆ. ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಜೀರ್ಣ ಕ್ರಿಯೆ ಉತ್ತಮವಾಗುತ್ತದೆ


ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಆಹಾರದ ರುಚಿ ಹೆಚ್ಚಾಗುತ್ತದೆ. ಬಾಳೆ ಎಲೆ ಜೈವಿಕ ವಿಘಟನೆಗೆ ಒಳಗಾಗುವುದರಿಂದ ಪರಿಸರ ಸ್ನೇಹಿಯಾಗಿದೆ.

ಯಾವುದೇ ರಾಸಾಯನಿಕಗಳು ಇಲ್ಲದ ಕಾರಣ ಬಾಳೆ ಎಲೆ ಮಾನವ ಆರೋಗ್ಯಕ್ಕೆ ಉತ್ತಮ. ಹಾಗಾಗಿ ನಮ್ಮ ಸಂಪ್ರದಾಯ ಹಾಗೂ ಆರೋಗ್ಯ ಎರಡನ್ನೂ ಕಾಪಾಡುವ ನಿಟ್ಟಿನಲ್ಲಿ ನಮ್ಮ ದಿನನಿತ್ಯದ ಬದುಕಿನಲ್ಲಿ ಬಾಳೆ ಎಲೆಯನ್ನು ಉಪಯೋಗಿಸೋಣ, ಆರೋಗ್ಯವಂತರಾಗಿ ಇರೋಣ.