ಜೇನುತುಪ್ಪ

ಜೇನುತುಪ್ಪ ಆರೋಗ್ಯಕರ.. ಶಿಶುಗಳಿಂದ ಇಡಿ ದೂರ..
ಜೇನುತುಪ್ಪದಿಂದಾಗಿ ಮಾನವನ ಆರೋಗ್ಯದ ಮೇಲಾಗುವ ಪರಿಣಾಮಗಳು, ಉಪಯೋಗ ಹಾಗೂ ತೊಂದರೆಗಳನ್ನು ಓದಿ:
ಹೂವಿನ ಮಕರಂದವನ್ನು ಎಷ್ಟೋ ಕಾಲ ಹೀರಿ ತಮ್ಮ ಮೇಣದ ಗೂಡುಗಳಲ್ಲಿ ಕೋಣೆ ಕೊನೆಯಲ್ಲಿಯೂ ಶೇಖರಿಸಿ ಇಟ್ಟು, ತಮ್ಮ ಪ್ರಾಥಮಿಕ ಆಹಾರವನ್ನಾಗಿ ಜೇನು ತಮಗಾಗಿ ಮಾಡಿಟ್ಟ ಆಹಾರವೇ ಜೇನುತುಪ್ಪ. ಆ ಆರೋಗ್ಯಕರ ಜೇನುತುಪ್ಪವನ್ನು ಮನುಷ್ಯ ತಂದು ತನ್ನ ಬೇರೆ ಬೇರೆ ಇಷ್ಟಾರ್ಥಗಳಿಗೆ ಬಳಸಿಕೊಳ್ಳುತ್ತಾನೆ. ಜೇನುತುಪ್ಪದಿಂದ ನಮಗೆ ಹಲವು ಪ್ರಯೋಜನಗಳಿವೆ.
ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಜೇನುತುಪ್ಪವು ಕೆಮ್ಮಿಗೆ ಒಂದು ನೈಸರ್ಗಿಕ ಔಷಧವಾಗಿದೆ. ಮಕ್ಕಳಲ್ಲಿ ರಾತ್ರಿ ಹೊತ್ತು ಕಾಣಿಸಿಕೊಳ್ಳುವ ಕೆಮ್ಮಿಗೆ ಜೇನುತುಪ್ಪವು ರಾಮಬಾಣವಾಗಿದೆ ಹಾಗೂ ಮಕ್ಕಳ ನಿದ್ರೆಯನ್ನು ಸುಧಾರಿಸುತ್ತದೆ.
ಇದು ಇತರ ಔಷಧಕ್ಕಿಂತಲೂ ವೇಗವಾಗಿ ಕೆಲಸ ಮಾಡುವ, ಚಿಕಿತ್ಸೆಯಿಲ್ಲದ ಮದ್ದಾಗಿದೆ. ಜೇನುತುಪ್ಪದಿಂದ ಎದೆಯ ಉರಿಯನ್ನು ತಡೆಗಟ್ಟಬಹುದು. ಜೇನುತುಪ್ಪ ಡಿಫೆನ್ಸಿನ್ - 1 ಎಂಬ ಒಂದು ಬಗೆಯ ಪ್ರೋಟಿನ್ ಅಂಶವನ್ನು ಹೊಂದಿದ್ದು, ಬ್ಯಾಕ್ಟೀರಿಯಾಗಳ ವಿರುದ್ಧ ಹೊರಡುತ್ತದೆ.
ಗಾಯದ ಮೇಲೆ ಕಚ್ಛಾ ಜೇನುತುಪ್ಪವನ್ನು ಹಚ್ಚಿದರೆ ಬ್ಯಾಕ್ಟೀರಿಯಾಗಳನ್ನು ಕೊಂದು ಗಾಯ ಗುಣಮುಖವಾಗಲು ಸಹಾಯ ಮಾಡುತ್ತದೆ.

ಹಾಗೆಯೇ ಜೇನುತುಪ್ಪದಿಂದ ಕೆಲವು ದುಷ್ಪರಿಣಾಮಗಳು ಕೂಡ ಇವೆ. ಜೇನುತುಪ್ಪವು ಒಂದು ರೀತಿಯ ಸಕ್ಕರೆಯ ಅಂಶವಾಗಿದ್ದು, ಅದನ್ನು ಮಿತಿಯಲ್ಲಿ ಸೇವಿಸಬೇಕು. ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಶಿಫಾರಸ್ಸು ಮಾಡುವ ಪ್ರಕಾರ ಮಹಿಳೆಯರು 2 ಚಮಚ ಹಾಗೂ ಪುರುಷರು 3 ಚಮಚಕ್ಕಿಂತ ಹೆಚ್ಚು ಜೇನುತುಪ್ಪವನ್ನು ಸೇವಿಸಬಾರದು.
ಹೆಚ್ಚು ಜೇನುತುಪ್ಪದ ಸೇವನೆ ಪಾರ್ಶ್ವ ವಾಯುವಿಗೆ ಕಾರಣವಾಗಬಹುದು. 1 ವರ್ಷದೊಳಗಿನ ಮಕ್ಕಳಿಗೆ ಜೇನುತುಪ್ಪವನ್ನು ಸೇವಿಸಲು ಬಿಡಬಾರದು ಎಂದು ಹೇಳಲಾಗುತ್ತದೆ. ಹೀಗೆ ಮಿತವಾಗಿ ಜೇನುತುಪ್ಪವನ್ನು ಸೇವಿಸಿದರೆ ನಮ್ಮ ಆರೋಗ್ಯವೂ ಹಿತವಾಗಿರುತ್ತದೆ.
***
