Skip to main content
ವಿಡಿಯೋ
food

ಮಯೋನೀಸ್

By Vinutha U
ಮಯೋನೀಸ್

ಮಯೋನೀಸ್ ಅನ್ನೋದು ಅತಿಯಾದ ಕ್ಯಾಲೋರಿ ಅಂಶವನ್ನು ಹೊಂದಿದ ಒಂದು ಮೊಟ್ಟೆ, ಉಪ್ಪು, ಸೋಡಿಯಂ ಹಾಗೂ ಎಣ್ಣೆಯ ಒಂದು ಮಿಶ್ರಣವಾಗಿದೆ.

ಮಯೋನೀಸ್


ಮಯೋನೀಸ್.. ಜಾಸ್ತಿ ಸೇವಿಸಿದರೆ ನೀವು ಫಿನಿಶ್..

ಮಯೋನೀಸ್ ಅಂದರೆ ಏನು.? ಅದರ ವಿಧಗಳು ಯಾವುವು.? ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ.

ಮಯೋನೀಸ್ ಎಂದರೇನು.?

ಮಯೋನೀಸ್ ಅನ್ನೋದು ಅತಿಯಾದ ಕ್ಯಾಲೋರಿ ಅಂಶವನ್ನು ಹೊಂದಿದ ಒಂದು ಮೊಟ್ಟೆ, ಉಪ್ಪು, ಸೋಡಿಯಂ ಹಾಗೂ ಎಣ್ಣೆಯ ಒಂದು ಮಿಶ್ರಣವಾಗಿದೆ.

ಮಯೋನೀಸ್ ನಲ್ಲಿ 2 ವಿಧಗಳಿವೆ. ವೆಜ್ ಮಯೋನೀಸ್ ಹಾಗೂ ಎಗ್ ಮಯೋನೀಸ್

ವೆಜ್ ಮಯೋನೀಸ್ ಸಾಮಾನ್ಯವಾಗಿ ಸೋಯಾ, ಹಾಲು ಹಾಗೂ ಎಣ್ಣೆಗಳಿಂದ ತಯಾರಿಸುತ್ತಾರೆ. ಅದನ್ನು ಎಗ್ ಲೆಸ್ ಮಯೋನೀಸ್ ಅಂತಲೂ ಕರೆಯುತ್ತಾರೆ. ಅದು ಬೆಣ್ಣೆ ಮತ್ತು ಎಣ್ಣೆಯ ಮಿಶ್ರಣ ಆಗಿರುವುದರಿಂದ ಕೊಬ್ಬಿನಂಶ ಹೆಚ್ಚಿರುತ್ತದೆ. ನಿಯಮಿತ ಪ್ರಮಾಣದಲ್ಲಿ ವೆಜ್ ಮಯೋನೀಸ್ ಸೇವಿಸಿದರೆ ಉತ್ತಮ.

ಇನ್ನು ಎಗ್ ಮಯೋನೀಸ್ ಅನ್ನು ಮೊಟ್ಟೆಯ ಹಳದಿ ಭಾಗದಿಂದ ತಯಾರಿಸಲಾಗುತ್ತದೆ. ಹೆಚ್ಚಿನ ಪ್ರೋಟಿನ್ ಹಾಗೂ ಎಣ್ಣೆ ಬಳಸಿರುವುದರಿಂದ ದೇಹದ ಕೊಬ್ಬಿನಂಶ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ವೆಜ್ ಮಯೋನೀಸ್ ಗೆ ಹೋಲಿಸಿದರೆ ಇದು ಆರೋಗ್ಯವನ್ನು ಬೇಗ ಹದಗೆಡಿಸುತ್ತದೆ.

ಮಯೋನೀಸ್ ಅನ್ನು ಹೆಚ್ಚಾಗಿ ಸೇವಿಸುವುದರಿಂದ ಅನೇಕ ರೀತಿಯ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ರುಚಿಕರವಾದ ಮಯೋನೀಸ್ ತೂಕದ ಹೆಚ್ಚಳ ಹಾಗೂ ದೈಹಿಕ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ಮಯೋನೀಸ್ ಅನ್ನು ಹೆಚ್ಚಾಗಿ ಸಸ್ಯಜನ್ಯ ಎಣ್ಣೆಗಳಿಂದ ತಯಾರು ಮಾಡುವುದರಿಂದ ಅದರಲ್ಲಿ ಇರುವ ಕೊಬ್ಬಿನಂಶಗಳು ರಕ್ತನಾಳಗಳನ್ನು ದಪ್ಪಗಾಗಿಸಿ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚು ಮಾಡಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಮಯೋನೀಸ್ ತಯಾರಿಸಲು ಹಸಿ ಮೊಟ್ಟೆಗಳನ್ನು ಉಪಯೋಗಿಸುವುದರಿಂದ ಆಹಾರದಲ್ಲಿ ರೋಗ ಹರಡುವ ಪ್ರಮಾಣ ಹೆಚ್ಚಿರುತ್ತದೆ.

ಗರ್ಭಿಣಿಯರು ಹಾಗೂ ಸಣ್ಣ ಮಕ್ಕಳು ಇದನ್ನು ಸೇವಿಸಿದರೆ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಹೆಚ್ಚಾಗಿ ಮಯೋನೀಸ್ ತಿಂದರೆ ಹೃದಯ ಸಂಬಂಧಿ ರೋಗಗಳು ಬೇಗನೆ ಕಾಣಿಸಿಕೊಳ್ಳುತ್ತವೆ.

ಮಯೋನೀಸ್ ಅನ್ನು ತಯಾರಿಸುವ ಸಂದರ್ಭದಲ್ಲಿ ಹಲವು ಕಡೆಗಳಲ್ಲಿ ಸುಗಂಧಕ್ಕಾಗಿ ರಾಸಾಯನಿಕಗಳು ಹಾಗೂ ಸಂರಕ್ಷಕಗಳನ್ನು ಬಳಸುತ್ತಾರೆ. ಅಲರ್ಜಿಯ ಸಮಸ್ಯೆ ಇರುವವರು ಮಯೋನೀಸ್ ಅನ್ನು ತಿಂದರೆ ಅಲರ್ಜಿ ಜಾಸ್ತಿ ಆಗುವ ಸಾಧ್ಯತೆಗಳು ಇವೆ.

***