Skip to main content
ವಿಡಿಯೋ
food

ಕಾಟನ್ ಕ್ಯಾಂಡಿ

By Vinutha U
ಕಾಟನ್ ಕ್ಯಾಂಡಿ

ಕಾಟನ್ ಕ್ಯಾಂಡಿಯಿಂದ ನಿಮ್ಮ ಮಕ್ಕಳನ್ನು ದೂರ ಇಡಿ. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ದೇಶದ ಎಲ್ಲ ಜಾತ್ರೆ, ಸಂತೆಗಳು, ಸಿನೆಮಾಗಳಲ್ಲಿ, ಮಾಲ್ ಗಳಲ್ಲಿ ಮಕ್ಕಳಿಗಾಗಿ ವಿಶೇಷವಾಗಿ ಮಾಡಿ ಕೊಡುವ ಕಾಟನ್ ಕ್ಯಾಂಡಿ ನಿಮ್ಮ ಮಕ್ಕಳನ್ನು ಅನಾರೋಗ್ಯದ ಕಡೆಗೆ ತಳ್ಳುತ್ತದೆ. ಕಾಟನ್ ಕ್ಯಾಂಡಿ ಮಕ್ಕಳ ಆರೋಗ್ಯದ ಮೇಲೆ ಯಾವ ದುಷ್ಪರಿಣಾಮ ಬೀರುತ್ತದೆ ತಿಳಿಯೋಣ

ಕಾಟನ್ ಕ್ಯಾಂಡಿ

ಕಾಟನ್ ಕ್ಯಾಂಡಿಯಿಂದ ನಿಮ್ಮ ಮಕ್ಕಳನ್ನು ದೂರ ಇಡಿ. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ದೇಶದ ಎಲ್ಲ ಜಾತ್ರೆ, ಸಂತೆಗಳು, ಸಿನೆಮಾಗಳಲ್ಲಿ, ಮಾಲ್ ಗಳಲ್ಲಿ ಮಕ್ಕಳಿಗಾಗಿ ವಿಶೇಷವಾಗಿ ಮಾಡಿ ಕೊಡುವ ಕಾಟನ್ ಕ್ಯಾಂಡಿ ನಿಮ್ಮ ಮಕ್ಕಳನ್ನು ಅನಾರೋಗ್ಯದ ಕಡೆಗೆ ತಳ್ಳುತ್ತದೆ. ಕಾಟನ್ ಕ್ಯಾಂಡಿ ಮಕ್ಕಳ ಆರೋಗ್ಯದ ಮೇಲೆ ಯಾವ ದುಷ್ಪರಿಣಾಮ ಬೀರುತ್ತದೆ ತಿಳಿಯೋಣ:

ಕಾಟನ್ ಕ್ಯಾಂಡಿ ತನ್ನಲ್ಲಿ 99 % ಸಕ್ಕರೆ ಅಂಶವನ್ನು ಹೊಂದಿರುವ ಕಾರಣ ನಿಮ್ಮ ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಇದನ್ನು ಸೇವಿಸುವುದರಿಂದ ದಂತ ಕ್ಷಯ, ಹಲ್ಲಿನ ಕುಳಿ, ಹಲ್ಲು ನೋವಿನಂತಹ ಅನಾರೋಗ್ಯ ಸಮಸ್ಯೆ ಕಾಡುತ್ತವೆ.

ಕಾಟನ್ ಕ್ಯಾಂಡಿಯಲ್ಲಿ ಕೇವಲ ಕ್ಯಾಲೋರಿ ತುಂಬಿರುವುದರಿಂದ ಅದರಲ್ಲಿ ಯ ಇದೆ ಪೋಷಕಾಂಶಗಳು ಇರುವುದಿಲ್ಲ. ಇದನ್ನು ತಿನ್ನುವುದರಿಂದ ರಕ್ತದಲ್ಲಿ ಗ್ಲೂಕೋಸ್ ಅಂಶ ಹೆಚ್ಚುತ್ತದೆ. ಹಾಗಾಗಿ ಮಧುಮೇಹ ಸಮಯೇ ಬೇಗನೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಮಕ್ಕಳಿಗೆ ಇದನ್ನು ತಿನ್ನಿಸುವುದರಿಂದ ಬೇಗನೆ ತೂಕ ಹೆಚ್ಚಾಗುವುದು ಹಾಗೂ ಹಾರ್ಮೋನು ತೊಂದರೆಗಳು ಉಂಟಾಗುತ್ತವೆ. ಅದನ್ನು ತಿಂದ ಸ್ವಲ್ಪ ಸಮಯದಲ್ಲಿ ದೇಹದ ಶಕ್ತಿಯು ಕಡಿಮೆಯಾದಂತೆ ಭಾಸವಾಗುತ್ತದೆ.

ಹಾಗಾಗಿ ನಿಮ್ಮ ಮಕ್ಕಳಿಗೆ ಈ ಕಾಟನ್ ಕ್ಯಾಂಡಿ ಕೊಡಿಸುವ ಮುನ್ನ ಅವರ ಆರೋಗ್ಯದ ಬಗ್ಗೆ ಯೋಚಿಸುವುದು ಉತ್ತಮ.