Skip to main content
ವಿಡಿಯೋ
general

ತನ್ನ ರೀಲ್ಸ್ ನೋಡಿ ಇಷ್ಟಪಟ್ಟ ಯುವಕನನ್ನು ಮದುವೆಯಾದ ಯುವತಿ, ಈಗ ಆ ಯುವಕನಿಗಾಗಿ ಹುಡುಕಾಟ ನಡೆಸಿದ್ದಾಳೆ.

By ವಿನುತ ಯು
ತನ್ನ ರೀಲ್ಸ್ ನೋಡಿ  ಇಷ್ಟಪಟ್ಟ ಯುವಕನನ್ನು ಮದುವೆಯಾದ ಯುವತಿ, ಈಗ ಆ ಯುವಕನಿಗಾಗಿ ಹುಡುಕಾಟ ನಡೆಸಿದ್ದಾಳೆ.

ಯುವತಿ ಹೇಳುತ್ತಿರೋದೆಲ್ಲ ನಿಜವಾದರೆ ಕೆಎಸ್​ಆರ್​​ಟಿಸಿಯಲ್ಲಿ (KSRTC) ಡ್ರೈವರೋ ಅಥವಾ ಕಂಡಕ್ಟರೋ ಆಗಿ ಕೆಲಸ ಮಾಡುವ ಭಂಡ ಪ್ರತಾಪ್​ನಿಂದ ಈಕೆಗೆ ಭಾರೀ ಮೋಸವಾಗಿದೆ, ಅನ್ಯಾಯವಾಗಿದೆ.

ರೀಲ್ಸ್ ಮಾಡಿಕೊಂಡಿದ್ದ ರಕ್ಷಿತಾಗೆ ಅದರ ಮೂಲಕವೇ ಪ್ರತಾಪನ ಪರಿಚಯವಾಗಿದೆ.

ಪರಿಚಯ ಸ್ನೇಹಕ್ಕೆ ತಿರುಗಿ, ನಂತರ ಅದು ಪ್ರಣಯದಲ್ಲಿ ಮಾರ್ಪಟ್ಟು ಇಬ್ಬರು ಮದುವೆ ಕೂಡ ಆಗಿದ್ದಾರೆ.

ಸಮಸ್ಯೆಯೇನೆಂದರೆ ಯುವತಿ ಎಸ್​ಸಿ ಸಮುದಾಯಕ್ಕೆ ಸೇರಿದವರು ಮತ್ತು ಪ್ರತಾಪ್ ಒಕ್ಕಲಿಗ ಗೌಡ.

ಪ್ರತಾಪ್ ಅಮ್ಮನಿಗೆ ರಕ್ಷಿತಾ ಬೇಕಿಲ್ಲ, ತಮ್ಮ ಸಮುದಾಯದ ಯುವತಿಯನ್ನು ಮದುವೆಯಾಗು, ಮನೆ ತುಂಬಿಸಿಕೊಳ್ತೀನಿ ಅಂತಾರಂತೆ. ಪ್ರತಾಪ್ ಒಂದು ವರ್ಷ ಕಾಲ ರಕ್ಷಿತಾಳೊಂದಿಗೆ ಸಂಸಾರ ಮಾಡಿ ಈಗ ನಾಪತ್ತೆಯಾಗಿದ್ದಾನೆ.

ರಕ್ಷಿತಾ ಪ್ರತಿದಿನ ಅವನನ್ನು ಹುಡುಕಿಕೊಂಡು ತಿರಗಾಡುತ್ತಿದ್ದಾರೆ ಮತ್ತು ನ್ಯಾಯ ಕೊಡಿಸಿ ಅನ್ನುತ್ತಿದ್ದಾರೆ.