Skip to main content
ವಿಡಿಯೋ
food

ವಾರದಲ್ಲಿ ಒಮ್ಮೆಯಾದರೂ ಮಶ್ರೂಮ್ ಸೇವಿಸಬೇಕು.

By ವಿನುತ ಯು
ವಾರದಲ್ಲಿ ಒಮ್ಮೆಯಾದರೂ ಮಶ್ರೂಮ್ ಸೇವಿಸಬೇಕು.

ಅಣಬೆಗಳಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.

ಮಶ್ರೂಮ್ ಪ್ರಯೋಜನಗಳು: ಅಣಬೆಗಳು ನಮ್ಮ ಆರೋಗ್ಯವನ್ನು ಹಲವು ರೀತಿಯಲ್ಲಿ ಸೂದಾರಿಸುತ್ತವೆ. ಅದಕ್ಕಾಗಿಯೇ ಇವುಗಳನ್ನು ಪ್ರತಿನಿತ್ಯವೂ ಸೇವನೆ ಮಾಡಬೇಕು ಎನ್ನಲಾಗಿವೆ. ಪ್ರತಿದಿನ ತಿನ್ನಲು ಸಾಧ್ಯವಾಗದಿದ್ದರೆ ಕನಿಷ್ಟ ಪಕ್ಷ ವಾರಕೊಮ್ಮೆಯಾದರೂ ಅಣಬೆಯನ್ನು ನಿಮ್ಮ ಆಹಾರದ ಜೊತೆ ಬಳಸಿಕೊಳ್ಳಿ. ಇದರಿಂದ ಕ್ಯಾನ್ಸರ್ ಬರುವುದನ್ನು ಕೂಡ ತಡೆಯಬಹುದು.


ಮಶ್ರೂಮ್ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನ:


ಅಣಬೆಗಳಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.

  • ಅಣಬೆಗಳಲ್ಲಿ ಕಂಡುಬರುವ ನೈಸರ್ಗಿಕ ಪೋಷಕಾಂಶಗಳು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

  • ಅಣಬೆಗಳು ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

  • ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಅಣಬೆಗಳು ತುಂಬಾ ಒಳ್ಳೆಯದು. ಅವುಗಳಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದರಿಂದ, ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಬೇಗನೆ ಹಸಿವಾಗುವುದಿಲ್ಲ. ಇದು ಕ್ರಮೇಣವಾಗಿ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.

  • ಅಣಬೆಗಳಲ್ಲಿ ವಿಟಮಿನ್ ಡಿ ಅಧಿಕವಾಗಿದ್ದು ಇದು ಮೂಳೆಯ ಆರೋಗ್ಯಕ್ಕೆ ಬಹಳ ಅವಶ್ಯಕ. ಅಣಬೆಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.


  • ಕೆಟ್ಟ ಪದಾರ್ಥಗಳನ್ನು ವೇಗವಾಗಿ ಹೊರಹಾಕುವ ಕೆಲಸವನ್ನು ಮಾಡುತ್ತದೆ.
    ಅಣಬೆಗಳಲ್ಲಿರುವ ವಿಟಮಿನ್‌, ಮಿನರಲ್ಸ್‌ನಿಂದ ಚರ್ಮವು ಆರೋಗ್ಯವಾಗಿ ಕಾಣುತ್ತದೆ, ಕೂದಲು ಸುಂದರವಾಗಿ ಬೆಳೆಯುತ್ತದೆ.


  • ಮಶ್ರೂಮ್ ಅಥವಾ ಅಣಬೆಗಳುಗಳಲ್ಲಿ ಇರುವ ಎರ್ಗೋಥಿಯೋನಿನ್ ಎಂಬ ಆಂಟಿಆಕ್ಸಿಡೆಂಟ್ ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿತ್ಯ 18 ಗ್ರಾಂ ಅಣಬೆ ಸೇವಿಸುವುದರಿಂದ ಕ್ಯಾನ್ಸರ್‌ನ ಅಪಾಯ 45% ವರೆಗೆ ಕಡಿಮೆಯಾಗುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.