Skip to main content
ವಿಡಿಯೋ
general

ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯದ ಸೃಷ್ಟಿಗೆ(2027) ಭಾರತ ಸಜ್ಜು..!

By ಗಿರೀಶ್‌ ವಸಿಷ್ಟ ಬಿ.ಎಸ್‌
ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯದ ಸೃಷ್ಟಿಗೆ(2027) ಭಾರತ ಸಜ್ಜು..!

ಇಲ್ಲಿದೆ ಮಾನವ ಸಹಿತ ಗಗನಯಾನದ ಬಗ್ಗೆ ನೀವರಿಯದ ಮಾಹಿತಿ..!

ಭಾರತ: ಭಾರತ ಈಗಾಗಲೇ  ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದೆ, ಅದರಲ್ಲಿ ಪ್ರಮುಖವಾಗಿ , ಚಂದ್ರಯಾನ-1(2008), ಚಂದ್ರಯಾನ-2(2019), ಚಂದ್ರಯಾನ-3 (2023- ಚಂದಿರನ ಮೇಲೆ ವಿಕ್ರಂ ರೋವರ್ ಲ್ಯಾಂಡರ್ ಅನ್ನು ಕಳುಹಿಸಿದ್ದು), ಮಂಗಳಯಾನ (2014), ಸೂರ್ಯ ಮಿಷನ್ಆದಿತ್ಯ-L1 (2023), ಹೀಗೆ ಇನ್ನೂ ಹತ್ತು ಹಲವು ಸಾಧನೆಗಳನ್ನು ಭಾರತ ಮಾಡಿದೆ.




ಇದೆ ರೀತಿ ಭಾರತ ಮತ್ತೊಂದು ದೊಡ್ಡ ಹೆಜ್ಜೆಯನ್ನು ವಿಜ್ಞಾನದ ಕಡೆ ಇಡಲು ತಯಾರಿ ನಡೆಸಿದೆ ಅದೇಮಾನವ ಸಹಿತ ಬಾಹ್ಯಾಕಾಶ ಗಗನಯಾನ ಯೋಜನೆ”.            

ಮಾನವ ಬಾಹ್ಯಾಕಾಶ ಯಾನ – 2027ರಲ್ಲಿ ಆರಂಭವಾಗಲಿದೆ ಎಂದು ISRO ಹಿರಿಯ ವಿಜ್ಞಾನಿ ಎಸ್. ನಾರಾಯಣನ್ ಅವರು ತಿಳಿಸಿದ್ದಾರೆ.

-ಭಾರತದ ಮೊದಲ ಬಾರಿಗೆ ಭಾರತೀಯ ಅಂತರಿಕ್ಷಯಾನಿಗಳನ್ನು (astronauts) ಬಾಹ್ಯಾಕಾಶಕ್ಕೆ 2027 ಆರಂಭದಲ್ಲಿ ಕಳುಹಿಸಲಾಗುತ್ತದೆ.

-ಇದು ಭಾರತ ಮಾನವ ಬಾಹ್ಯಾಕಾಶ ಯಾನ ಸಾಮರ್ಥ್ಯದ ದಿಶೆಯಲ್ಲಿ ಬಹುಮಹತ್ವದ ಹೆಜ್ಜೆಯಾಗಿದೆ.

- ಯಶಸ್ವಿ ಪ್ರಯತ್ನದ ಮೊದಲು, ಮೂರು ಮಾನವರಹಿತ ಪರೀಕ್ಷಾ ಯಾನಗಳು ನಡೆಯಲಿವೆ. ಮೊದಲ ಯಾನವನ್ನು ವರ್ಷ 2025 ಕೊನೆಗೆ ಕೈಗೊಳ್ಳಲು ಯೋಜಿಸಲಾಗಿದೆ.

🚀 ಗಗನಯಾನ ಯೋಜನೆಯ ಹಂತಗಳು:

2023–2026: ಮಾನವರಹಿತ ಪರೀಕ್ಷಾ ಯಾನಗಳು:

-ಗಗನಯಾನ-1 (ಟಿವಿ-ಡಿ1 – Test Vehicle Demonstration-1)

-ಅಕ್ಟೋಬರ್ 2023ರಲ್ಲಿ ಯಶಸ್ವಿಯಾಗಿ ನಡೆಯಿತು.

-ಕ್ರೂ ಎಸ್ಕೇಪ್ ಸಿಸ್ಟಮ್ (CES) ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿತು.

-ಗಗನಯಾನ-2 ಮತ್ತು ಗಗನಯಾನ-3 (2025–2026)

ಯಾನಗಳಲ್ಲಿ ವ್ಯೋಮಮಿತ್ರ (Vyommitra) ಎಂಬ ಹೆಣ್ಣು ರೂಪದ ಹ್ಯೂಮನಾಯ್ಡ್ ರೋಬೋಟ್ ಭಾಗವಹಿಸುತ್ತದೆ.

ಮಾನವರ ಬದಲಿಗೆ ಬಾಹ್ಯಾಕಾಶ ಪರಿಸ್ಥಿತಿಯಲ್ಲಿನ ಸಂಶೋಧನೆ ನಡೆಸುತ್ತದೆ.

ಗಗನಯಾನ-4 (2027):

-ಭಾರತದಿಂದ ಮೊದಲ ಬಾರಿಗೆ ಮಾನವಸಹಿತ ಬಾಹ್ಯಾಕಾಶ ಯಾನ.

-3 ಭಾರತೀಯ ಅಂತರಿಕ್ಷಯಾನಿಗಳು 400 ಕಿ.ಮೀ ಎತ್ತರದ ಕಕ್ಷೆಗೆ ತೆರಳಿ 7 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇರುತ್ತಾರೆ.

🛰️ ತಂತ್ರಜ್ಞಾನ ಮತ್ತು ಅಂತಾರಾಷ್ಟ್ರೀಯ ಸಹಕಾರ:

ರಾಕೆಟ್: ಮಾನವ-ಹೊಂದಿಕೆಯಾಗಿರುವ ಎಲ್ವಿಎಂ3 (LVM3)

ಭೂಮಿಯ ಸಂಪರ್ಕ: ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA) ಸಹಕಾರದಲ್ಲಿ.

ಪ್ಯಾರಾಚೂಟ್ ವ್ಯವಸ್ಥೆ: DRDO ಸಹಕಾರದಿಂದ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ.

🛸 ಭವಿಷ್ಯದ ಯೋಜನೆಗಳು:

-ಭಾರತೀಯ ಬಾಹ್ಯಾಕಾಶ ನಿಲಯ (Bharatiya Antariksh Station),2035 ರೊಳಗೆ ಸ್ಥಾಪಿಸಲು ISRO ಗುರಿಯಿಟ್ಟಿದೆ.

- ಬಾಹ್ಯಾಕಾಶ ವಿಮಾನಗಳ ಡಾಕಿಂಗ್ ಟೆಕ್ನಾಲಜಿ, ಇಂಟರ್ನ್ಯಾಷನಲ್ ಸಹಯೋಗಗಳು ಮುಂದಿನ ಹಂತಗಳಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿವೆ.




ಇದು ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯದ ಆರಂಭವಾಗಿದ್ದು, ಭವಿಷ್ಯದ ತಲೆಮಾರಿಗೆ ಪ್ರೇರಣೆಯಾದಂತಿದೆ.