ಬೆಂಗಳೂರು: ತೂಗುದೀಪ ದರ್ಶನ್ ಒಂದು ಕಾಲದಲ್ಲಿ ಮುಟ್ಟಿದ್ದೆಲ್ಲವು ಚಿನ್ನವಾಗುತ್ತಿತ್ತು, ಆದರೆ ಕೆಲವು ವರ್ಷಗಳು ಅವರ ಚಿತ್ರಗಳು ಅಷ್ಟೇನು ಹೆಸರು ಮಾಡಲಿಲ್ಲ, ಅದಾದ ನಂತರ ಫಿನಿಕ್ಸ್ ಹಕ್ಕಿಯಂತೆ ದರ್ಶನ್ ಎದ್ದು ಬಂದಿದ್ದು ಎಲ್ಲರಿಗೂ ತಿಳಿದಿದೆ.
.png)
ನಂತರ ತುಮಕೂರಿನ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ದರ್ಶನ್ ಅವರ ಸಿನಿಕೆರಿಯರ್ ಅಂತ್ಯವಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು.
ಆದರೆ ಆ ಚರ್ಚೆಗಳಿಗೆ ಸೆಡ್ಡು ಹೊಡೆದಂತೆ ದರ್ಶನ್ ರವರ ಹೊಸ ಸಿನಿಮಾ ದಿ ಡೆವಿಲ್ ರಿಲೀಸ್ ಗೆ ಮುಂಚೆಯೇ ಅಬ್ಬರಿಸುತ್ತಿದೆ.
ದರ್ಶನ್ ಅಭಿನಯದ ಬಹು ನಿರೀಕ್ಷಿತ ಹೊಸ ಸಿನಿಮಾ "ದ ಡೆವಿಲ್ ಹೀರೋ" ದರ್ಶನ್‌ಗೆ ಸಂಬಂಧಿಸಿದಂತೆ OTT ಹಕ್ಕುಗಳ (ಡಿಜಿಟಲ್ ರಿಲೀಸ್ ಹಕ್ಕುಗಳ) ಕುರಿತಾಗಿ ಸಕ್ರಿಯ ಚರ್ಚೆಗಳು ನಡೆಯುತ್ತಿವೆ. ಹಲವಾರು ಪ್ರಮುಖ OTT ಪ್ಲಾಟ್ಫಾರ್ಮ್ಗಳು ಈ ಚಿತ್ರದ ಹಕ್ಕುಗಳನ್ನು ಪಡೆಯಲು ಆಸಕ್ತಿ ತೋರಿಸುತ್ತಿವೆ.
.png)
- ಓಟಿಟಿ ರೈಟ್ಸ್ ಗೆ ಹಾತೊರೆಯುತ್ತಿರುವ ಪ್ಲಾಟ್ಫಾರ್ಮ್ ಗಳು:
ಅಮೆಜಾನ್ ಪ್ರೈಮ್ ವಿಡಿಯೋ, ಹಾಟ್‌ಸ್ಟಾರ್ (ಡಿಸ್ನಿ+ ಹಾಟ್‌ಸ್ಟಾರ್), ಜಿಯೋ ಸಿನಿಮಾ,ಜೀ5, ಸೊನಿಲಿವ್.ಹೀಗೆ ಹಲವಾರು OTT ತಾಣಗಳು ಚಿತ್ರದ ಖರೀಧಿಗೆ ಕಾತುರವಾಗಿದೆ.
TRASE Block Heels Sandals For Women, Dusky Stylish & Comfortable Footwear
ಈಗಾಗಲೇ ಚಿತ್ರದ ಡಬ್ಬಿಂಗ್ ಕೆಲಸಗಳು ನಡೆಯುತ್ತಿವೆ ಮತ್ತು ಚಿತ್ರದ ಭಾರಿ ನಿರೀಕ್ಷೆ ಹಾಗೂ ಹೈಪ್ ಕಾರಣದಿಂದಾಗಿ ಡಿಜಿಟಲ್ ಹಕ್ಕುಗಳ ಮೇಲಿನ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಚಿತ್ರವನ್ನು ಕೊಂಡುಕೊಳ್ಳಲು ನಾಮುಂದು-ತಾಮುಂದು ಎಂದು OTT ಪ್ಲಾಟ್ಫಾರ್ಮ್ ಗಳು ಹಾತೊರೆಯುತ್ತಿವೆ..
ಚಿತ್ರದ ಪ್ರಮುಖ ಮಾಹಿತಿ:
-ನಿರ್ದೇಶಕ: ಪ್ರಕಾಶ್ ವೀರ್
-ನಾಯಕ: ದರ್ಶನ್
-ಧ್ವನಿ ಹಕ್ಕುಗಳು: ಸಾರಿಗಾಮ ಸೌತ್ ಸಂಸ್ಥೆಗೆ ಮುಂಚೆಯೇ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ.
-ಟೀಸರ್ ಬಿಡುಗಡೆ: 2024ರ ಫೆಬ್ರವರಿ 16 (ದರ್ಶನ್ ಅವರ ಹುಟ್ಟುಹಬ್ಬದಂದು)
-ಬಿಡುಗಡೆ ದಿನಾಂಕ: 2025ರ ಕ್ರಿಸ್ಮಸ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ.
ಚಿತ್ರದ ಶೂಟಿಂಗ್ ಹಂತ: ದರ್ಶನ್ ಅವರು ಕೊಲೆ ಕೇಸ್ನಲ್ಲಿ ಆರೋಪಿಯಾಗಿರುವ ಕಾರಣದಿಂದ ಚಿತ್ರದ ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು, ಮಾರ್ಚ್ 2025ರಿಂದ ಮತ್ತೆ ಆರಂಭವಾಗಿದೆ.
ಹೀಗಾಗಿ ದರ್ಶನ್ ಅವರನ್ನು ಟೀಕೆ ಮಾಡುತ್ತಿದ್ದ ಅವರ ವಿರೋಧಿಗಳಿಗೆ ದರ್ಶನ್ ಅವರ ದಿ ಡೆವಿಲ್ ಚಿತ್ರದ ಓಟಿಟಿ ರೈಟ್ಸ್ ಚರ್ಚೆಯ ವಿಷಯದ ಬಗ್ಗೆ ಆಶ್ಚರ್ಯವಾಗಿರುವುದಂತೂ ಸುಳ್ಳಲ್ಲ.
.png&w=3840&q=75)