ಅಹಮದಾಬಾದ್ : 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನವು ವೈದ್ಯಕೀಯ ಕಾಲೇಜೊಂದರ ಮೇಲೆ ಮತ್ತು ವಿದ್ಯಾರ್ಥಿಗಳ ಹಾಸ್ಟೆಲ್ ಮೇಲೆ ಅಪ್ಪಳಿಸಿತ್ತು. ಈ ಸಮಯದಲ್ಲಿ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿಗಳು ಜೀವ ಉಳಿಸಿಕೊಳ್ಳಲು ಬಾಲ್ಕನಿಯಿಂದ ಇಳಿಯಲು ಪ್ರಯತ್ನಿಸಿದ್ದು, ಇದರ ವಿಡಿಯೋ ಸದ್ಯ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಈ ವಿಡಿಯೋದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳು ಬಟ್ಟೆಗಳನ್ನು ಒಟ್ಟಿಗೆ ಕಟ್ಟುವ ಮೂಲಕ ಎರಡನೇ ಮತ್ತು ಮೂರನೇ ಮಹಡಿಯಿಂದ ಕೆಳಗಿಳಿಯಲು ಪ್ರಯತ್ನಿಸಿರುವುದು ಕಾಣಿಸುತ್ತಿದ್ದು, ಅದರಲ್ಲಿಯೇ ಹಾಸ್ಟೆಲ್ ಮುಂದೆ ಬೆಂಕಿ ಹೊತ್ತಿ ಉರಿಯುತ್ತಿರುವುದು ಸಹ ಕಾಣಿಸುತ್ತದೆ.ಇನ್ನೂ ಕೆಲ ವಿದ್ಯಾರ್ಥಿಗಳು ಕಟ್ಟಡದ