Skip to main content
ವಿಡಿಯೋ
1/2
food

ಹಲಸಿನ ಹಣ್ಣಿಗಿಂತ ಅದರ ಬೀಜ ಈ ಮಾರಕ ರೋಗಗಳಿಗೆ ಮದ್ದು..!

By ಸುಶ್ಮಿತ ಆರ್‌
ಹಲಸಿನ ಹಣ್ಣಿಗಿಂತ ಅದರ ಬೀಜ ಈ ಮಾರಕ ರೋಗಗಳಿಗೆ ಮದ್ದು..!

ಹಲಸಿನ ಹಣ್ಣು ಅನೇಕ ಜನರ ನೆಚ್ಚಿನ ಹಣ್ಣು. ಇದರ ಹೆಸರು ಹೇಳಿದ್ರೆ ಸಾಕು ಕೆಲವರ ಬಾಯಲ್ಲಿ ನೀರು ಬರುತ್ತೆ.

ಹಲಸಿನ ಹಣ್ಣು ಅನೇಕ ಜನರ ನೆಚ್ಚಿನ ಹಣ್ಣು. ಇದರ ಹೆಸರು ಹೇಳಿದ್ರೆ ಸಾಕು ಕೆಲವರ ಬಾಯಲ್ಲಿ ನೀರು ಬರುತ್ತೆ. ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಎಲ್ಲಾ ಮನೆಗಳಲ್ಲಿ ಹಲಸಿನ ಮರಗಳು ಕಂಡುಬರುತ್ತವೆ. ಬೇಸಿಗೆ ಆರಂಭವಾದ ತಕ್ಷಣ ಹಣ್ಣಾಗಲು ಪ್ರಾರಂಭಿಸುತ್ತವೆ.



ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ವಿಶೇಷ ಪ್ರಾಮುಖ್ಯತೆ ಇದೆ. ಹಣ್ಣಷ್ಟೇ ಅಲ್ಲ, ಹಲಸಿನ ಬೀಜಗಳು ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅನೇಕ ಜನರು ಹಲಸಿನ ಬೀಜಗಳನ್ನು ಹೆಚ್ಚಾಗಿ ತಿನ್ನಲು ಇಷ್ಟಪಡುತ್ತಾರೆ.


Arvind AD Men Regular Fit Formal Shirt


ಈ ಬೀಜಗಳು ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ ನಂತಹ ಖನಿಜಗಳಿಂದ ಸಮೃದ್ಧವಾಗಿವೆ. ಅವು ನಮ್ಮ ಮೂಳೆಗಳನ್ನು ಬಲ ಪಡಿಸುತ್ತವೆ.. ಸ್ನಾಯುಗಳಿಗೆ ಶಕ್ತಿಯನ್ನು ನೀಡುತ್ತವೆ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತವೆ.


ಹಲಸಿನ ಬೀಜಗಳಲ್ಲಿ ನಾರಿನ ಅಂಶ ಇರುವುದರಿಂದ, ಅವು ಅಜೀರ್ಣ, ಮಲಬದ್ಧತೆ ಮತ್ತು ಮೂಲವ್ಯಾಧಿ ಮುಂತಾದ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ. ಈ ಬೀಜಗಳಲ್ಲಿ ವಿಟಮಿನ್ ಎ ಇರುವಿಕೆಯು ದೃಷ್ಟಿ ಸುಧಾರಿಸುತ್ತದೆ. ಇದು ಕಣ್ಣಿನ ಪೊರೆ ಮುಂತಾದ ಕಣ್ಣಿನ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.



ಸೌತೆಕಾಯಿ ಬೀಜಗಳು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ವಿಶೇಷವಾಗಿ ಪರಿಹಾರ ನೀಡುತ್ತವೆ. ವಯಸ್ಸಾದ ಲಕ್ಷಣಗಳು ಮತ್ತು ಒಣ ಚರ್ಮದ ಸಮಸ್ಯೆಗಳು ಕಡಿಮೆಯಾಗುತ್ತವೆ. ಹಾಗಾಗಿ ಹಲಸಿನ ಬೀಜಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಅವು ದೇಹವನ್ನು ಚೈತನ್ಯಗೊಳಿಸುತ್ತದೆ ಮತ್ತು ದೃಷ್ಟಿ, ಚರ್ಮ ಮತ್ತು ಮನಸ್ಥಿತಿ ಸೇರಿದಂತೆ ಯೋಗ ಕ್ಷೇಮವನ್ನು ಕಾಪಾಡುತ್ತದೆ.