Skip to main content
ವಿಡಿಯೋ
general

ಉತ್ತರಾಖಂಡದಲ್ಲಿ ಮಳೆಗೆ ತುಂಬಿದ ನಾಲೆ: ಸಂಕಷ್ಟಕ್ಕೆ ಸಿಲುಕಿದ್ದ 5 ಸಾವಿರಕ್ಕೂ ಅಧಿಕ ಯಾತ್ರಿಕರ ರಕ್ಷಣೆ ಮಾಡಲಾಗಿದೆ

By ಪವಿತ್ರ ಗಣಪತಿ ಬರದವಳ್ಳಿ
ಉತ್ತರಾಖಂಡದಲ್ಲಿ ಮಳೆಗೆ ತುಂಬಿದ ನಾಲೆ: ಸಂಕಷ್ಟಕ್ಕೆ ಸಿಲುಕಿದ್ದ 5 ಸಾವಿರಕ್ಕೂ ಅಧಿಕ ಯಾತ್ರಿಕರ ರಕ್ಷಣೆ ಮಾಡಲಾಗಿದೆ

ಉತ್ತರಾಖಂಡದಲ್ಲಿ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಪೂರ್ಣಗಿರಿ ಧಾಮದ ಯಾತ್ರಾ ಮಾರ್ಗದಲ್ಲಿ ಸಿಲುಕಿದ್ದ ಭಕ್ತರನ್ನು ರಕ್ಷಿಸಲಾಗಿದೆ.

ಚಂಪಾವತ್, ಉತ್ತರಾಖಂಡ: ಉತ್ತರಾಖಂಡದಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಟಿಸುತ್ತಿದೆ. ಈ ಮಧ್ಯೆ ಮಾ ಪೂರ್ಣಗಿರಿ ಧಾಮಕ್ಕೆ ಭೇಟಿ ನೀಡಲು ಬಂದ ಸಾವಿರಾರು ಯಾತ್ರಾರ್ಥಿಗಳು ಬಾಟನಗಡ ನಾಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಬಳಿಕ ಟನಕಪುರ್ ತಾಲೂಕು ಆಡಳಿತ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಯಾತ್ರಾ ಮಾರ್ಗದಲ್ಲಿ ಸಿಲುಕಿಕೊಂಡಿದ್ದ 5 ಸಾವಿರಕ್ಕೂ ಅಧಿಕ ಭಕ್ತರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.


ಭಾರೀ ಮಳೆ ಸಮಸ್ಯೆಯಾಗಿ ಪರಿಣಮಿಸಿದೆ: ಈ ಭಾಗದ ಪರ್ವತ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ, ಟನಕ್‌ಪುರ ಪೂರ್ಣಗಿರಿ ಯಾತ್ರೆ ಮಾರ್ಗದಲ್ಲಿರುವ ಬಾಟನಗಡ ನಾಲೆಯು ಮಳೆಗಾಲದಲ್ಲಿ ತುಂಬಿ ಹರಿಯುತ್ತಿದೆ. ಇದರಿಂದಾಗಿ ಯಾತ್ರಾ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ಪರಿಣಾಮ ಸಾವಿರಾರು ಯಾತ್ರಿಕರು ಮಾರ್ಗದಲ್ಲಿ ಸಿಲುಕಿಕೊಂಡಿದ್ದರು. ಮತ್ತೊಂದೆಡೆ, ಟನಕಪುರದ ಎಸ್‌ಡಿಎಂ ಆಕಾಶ್ ಜೋಶಿ ನೇತೃತ್ವದಲ್ಲಿ, ಎಸ್‌ಡಿಆರ್‌ಎಫ್, ಪೊಲೀಸ್, ಅಗ್ನಿಶಾಮಕ ಮತ್ತು ಕಂದಾಯ ತಂಡವು ಯಾತ್ರಾ ಮಾರ್ಗದಲ್ಲಿ 5 ಸಾವಿರಕ್ಕೂ ಹೆಚ್ಚು ಯಾತ್ರಿಕರನ್ನು ಸುರಕ್ಷಿತವಾಗಿ ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಆಹಾರ ವ್ಯವಸ್ಥೆ ಮಾಡಿತ್ತು.




ತಾಲೂಕು ಆಡಳಿತದಿಂದ ಯಾತ್ರಿಕರ ರಕ್ಷಣೆ: ಮಳೆಗಾಲದ ನಾಲೆ ಉಕ್ಕಿ ಹರಿಯುವುದರಿಂದ ಮತ್ತು ರಸ್ತೆಯಲ್ಲಿ ಭಾರಿ ಅವಶೇಷಗಳಿಂದಾಗಿ ಪೂರ್ಣಗಿರಿ ಮಾರ್ಗವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅವಶೇಷಗಳನ್ನು ತೆರವುಗೊಳಿಸಿ ಪೂರ್ಣಗಿರಿ ಯಾತ್ರಾ ಮಾರ್ಗವನ್ನು ತೆರೆಯಲು ತಾಲೂಕು ಆಡಳಿತವು ಎಲ್ಲ ಪ್ರಯತ್ನಗಳನ್ನು ಪ್ರಾರಂಭಿಸಿದೆ ಎಂದು ಟನಕಪುರದ ಎಸ್‌ಡಿಎಂ ಆಕಾಶ್ ಜೋಶಿ ಹೇಳಿದರು. ಯಾತ್ರೆ ಮಾರ್ಗವನ್ನು ತೆರೆಯುವವರೆಗೆ, ಭಕ್ತರು ಮತ್ತು ಸ್ಥಳೀಯ ಜನರು ತಾಲೂಕು ಆಡಳಿತದ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.



ಮಳೆಗಾಲದ ಕಾರಣ ಜೂನ್ 15 ರಂದು ಜಾತ್ರೆ ಸಂಪನ್ನಗೊಂಡಿದ್ದರೂ, ಉತ್ತರ ಪ್ರದೇಶ ಸೇರಿದಂತೆ ವಿವಿಧ ಪ್ರದೇಶಗಳಿಂದ ಯಾತ್ರಿಕರು ಪೂರ್ಣಗಿರಿ ಧಾಮಕ್ಕೆ ಭೇಟಿ ನೀಡಲು ಆಗಮಿಸುತ್ತಿದ್ದಾರೆ. ಮತ್ತೊಂದೆಡೆ, ಪರ್ವತಗಳಲ್ಲಿ ಮಳೆ ಸುರಿಯುತ್ತಿರುವುದರಿಂದ ಕನಕಪುರ ಪೂರ್ಣಗಿರಿ ಮಾರ್ಗದಲ್ಲಿ ಬರುವ ಮಳೆಗಾಲದ ನಾಲೆಗಳಲ್ಲಿ ಭಕ್ತರ ಸುರಕ್ಷತೆಗಾಗಿ ಪೊಲೀಸ್ ಮತ್ತು ತಾಲೂಕಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಸ್ಥಳೀಯ ಜನರು ಮತ್ತು ಭಕ್ತರಿಗೆ ಯಾವುದೇ ಹಾನಿಯಾಗಿಲ್ಲ.



Campus Sutra Men's Denim Shorts for Casual Wear | Dark-Wash | Regular Fit | Button Closure | Cotton Denim Shorts Crafted with Comfort Fit for Everyday Wear


ಉತ್ತರಾಖಂಡ ದಲ್ಲಿ ಮಳೆಗಾಲ ಬಂತು ಎಂದರೆ ಭೂಕುಸಿತಗಳು ಕಾಮನ್​ ಎನ್ನುವಂತಾಗಿದೆ. ಅಲ್ಲಿನ ಸರ್ಕಾರ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು ಅಲ್ಲಲ್ಲಿ ಭಾರಿ ಅನಾಹುತಗಳು ವರದಿಯಾಗುತ್ತಲೇ ಇರುತ್ತದೆ.