ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೆ ಹವಾಮಾನ, ತಾಂತ್ರಿಕ ಸಮಸ್ಯೆಗಳು ಅಥವಾ ಪೈಲಟ್ನ ಲೋಪ ಕಾರಣ ಆಗಿರಬಹುದು. ಈ ಅಪಘಾತದಲ್ಲಿ, ಹೆಲಿಕಾಪ್ಟರ್ನಲ್ಲಿ ಇದ್ದ ಏಳೂ ಮಂದಿ ಜೀವ ಕಳೆದುಕೊಂಡಿದ್ದಾರೆ. ಪ್ರಾಕೃತಿಕ ಹಾಗೂ ಮಾನವಕೃತ ವಿಕೋಪಗಳಿಗೆ ಬಹಳ ಸುಲಭವಾಗಿ ತುತ್ತಾಗುವ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಹಿಂದೆ-ಮುಂದೆ ಆಲೋಚಿಸದೆ ಉತ್ಸಾಹದಿಂದ ಕ್ರಮ ಕೈಗೊಳ್ಳುತ್ತಿರುವುದು ಈ ಅಪಘಾತಕ್ಕೆ ನಿಜವಾದ ಕಾರಣವೆಂಬಂತೆ ತೋರುತ್ತಿದೆ.ಬೆಲ್ 407 ಮಾದರಿಯ ಹೆಲಿಕಾಪ್ಟರ್ ಕೇದಾರನಾಥದಿಂದ ಗುಪ್ತ ಕಾಶಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಗೌರೀಕುಂಡದ ಬಳಿ ಅಪಘಾತಕ್ಕ