ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು, 2028 ಕ್ಕೆ ಜೆಡಿಎಸ್ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನಾನೇ ಬಟ್ಟೆ ಹೊಲಿಸಿ ಕೊಡುತ್ತೇನೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ಕೊಟ್ಟಿದ್ದು, “ಅವರಿಂದ ಬಟ್ಟೆ ಹೊಲಿಸಿಕೊಳ್ಳುವ ದಾರಿದ್ರ್ಯವನ್ನ ನಮ್ಮ ನಾಡಿನ ಜನತೆ ನನಗೆ ಇನ್ನೂ ಕೊಟ್ಟಿಲ್ಲ” ಎಂದರು.“ಜನರಿಂದ ಕೊಳ್ಳೆ ಹೊಡೆದ ಆ ಪಾಪದ ಹಣದಿಂದ ನಾನು ಬಟ್ಟೆ ಹೊಲಿಸಿಕೊಳ್ಳಬೇಕಾ? ನನಗೆ ಬಟ್ಟೆ ಬೇಕಾದರೆ ನಮ್ಮ ನಾಡಿನ ಜನತೆಯೇ ತಂದು ಕೊಡುತ್ತಾರೆ. ದಾರಿದ್ರ್ಯ ಇರುವುದು ಆ ವ್ಯಕ್ತಿಗೆ. ಅವರಿಗಿರುವುದು ಮನುಷ್ಯತ್ವದ ದಾರಿದ್ರ್ಯ” ಎಂದು ಗುಡುಗಿದರು.Marine