ನಿದ್ರೆ ಎಂಬುದು ಮನುಷ್ಯನಿಗೆ ಸಹಜವಾಗಿ ಬೇಕಾಗಿರುವಂತಹ ಒಂದು ಭಾಗ ಖಂಡಿತವಾಗಿಯೂ ದೇಹ ಮತ್ತು ಮನಸ್ಸಿನ ಸಮತೋಲನಕ್ಕಾಗಿ ಅತ್ಯಂತ ಮುಖ್ಯವಾದ ಕ್ರಿಯೆಯಾಗಿರುತ್ತದೆ.

ನಿದ್ರೆ ಮನುಷ್ಯನಿಗೆ ಎಷ್ಟು ಮುಖ್ಯವೆಂದರೆ, ಒಬ್ಬ ಮನುಷ್ಯ ಬೆಳಿಗ್ಗೆಯಿಂದ ದುಡಿದು ರಾತ್ರಿ ಕಣ್ತುಂಬ ನಿದ್ರೆ ಮಾಡಿಲ್ಲ ಎಂದರೆ ಅವನು ಬೇಗ ಖಿನ್ನತಗೆ ಹೊಳಗಾಗುತ್ತಾನೆ.
ನಿದ್ರೆ ಮನುಷ್ಯನಿಗೆ ಏಕೆ ಬೇಕು ಎಂದರೆ ನಮ್ಮ ಮೆದುಳಿಗಾಗಿ ಮತ್ತು ಮೆದುಳು ಪುನರಾವರ್ತನೆಗೊಳಿಸಬೇಕೆಂದರೆ ನಿದ್ರೆಯ ಅವಶ್ಯಕತೆ ತುಂಬಾ ಇರಬೇಕಾಗುತ್ತದೆ.
ನಿದ್ರೆ ಸಮಯದಲ್ಲಿ ಮೆದುಳಿಗೆ ಸ್ವಲ್ಪ ವಿಶ್ರಾಂತಿ ಸಿಗುತ್ತದೆ, ನಂತರ ಎದ್ದ ಕೂಡಲೇ ಮೆದುಳಿಗೆ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ. ಮೆಮೊರಿ ಪತ್ತೆ ಹಚ್ಚುವುದು ಹಳೆಯ ನೆನಪುಗಳ ಜೋಡಣೆ ಮತ್ತು ಹೊಸ ಮಾಹಿತಿಯ ಶೇಖರಣೆಯನ್ನು ನಿದ್ರೆಯ ಸಮಯದಲ್ಲಿ ನಾವು ಅನುಭವಿಸಬಹುದು, ಗಾಢ ನಿದ್ರೆ ಸಂಭರ್ಭದಲ್ಲಿ ಸ್ಪಷ್ಟ ಚಿಂತನೆ ಮಾಡಲು ಮಾತ್ರ ಸಾಧ್ಯವಾಗುತ್ತದೆ.
ನಿದ್ರೆ ಎಂಬುದು ರೋಗನಿರೋಧಕ ಶಕ್ತಿಗೆ ಬಲ ನೀಡುತ್ತದೆ ನಿದ್ರೆ ಸಮಯದಲ್ಲಿ ದೇಹದಲ್ಲಿ ಸೈಡಾಕ್ಸೈಡ್ ಎಂಬ ತತ್ವ ಅಂಶಗಳು ಬಿಡುಗಡೆಯಾಗುತ್ತವೆ ಮತ್ತು ಇವು ಹಲವಾರು ರೋಗಗಳನ್ನು ಎದುರಿಸಲು ಸಹಾಯ ಮಾಡುತ್ತದೆ ನಿದ್ರೆ ಕೊರತೆಯು ಸಾಮಾನ್ಯವಾಗಿ ಜ್ವರದಿಂದ ಹಿಡಿದು ಅಪಾಯಕರ ಸೋಂಕುಗಳಿಗೆ ದಾರಿಮಾಡಿಕೊಡುತ್ತದೆ.

ನಿದ್ರೆ ಸರಿಯಾಗಿ ಆಗಿಲ್ಲ ಎಂದರೆ ಹೃದಯದ ಆರೋಗ್ಯ ಕೂಡ ಕೆಡಬಹುದು, ನಿದ್ರೆಯ ಕೊರತೆಯಿಂದ ರಕ್ತದ ಒತ್ತಡ, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಬೇಗ ತುತ್ತಾಗಬೇಕಾಗುತ್ತದೆ.
YOHO Bubbles Men Ortho slippers | Soft comfortable and stylish flip flop slippers for Men in exciting colors |Lightweight | Anti Skid | Daily Use Chappal
ಆಹಾರ ನಿಯಂತ್ರಣ ಮತ್ತು ತೂಕವನ್ನು ಇಳಿಕೆ ಮಾಡಲು ನಿದ್ರೆಯು ತುಂಬಾ ಸಹಕಾರಿಯಾಗುತ್ತದೆ, ನಿದ್ರೆ ಸರಿಯಾಗಿ ಮಾಡಿಲ್ಲ ಎಂದರೆ ಹಾರ್ಮೋನುಗಳ ಸಮತೋಲನ ಉಂಟಾಗಿ ಸರಿಯಾದ ಸಮಯಕ್ಕೆ ಊಟ ಬಿಡುವಂತಾಗುತ್ತದೆ. ಯಾವಾಗ ಬೇಕೋ ಆಗ ಊಟ ತಿನ್ನುವ ತರಹ ಆಗುತ್ತದೆ. ಆಗ ಮುಖದ ಕಾಂತಿ ಕುಗ್ಗಲು ಪ್ರಾರಂಭವಾಗುತ್ತದೆ, ತ್ವಚೆಯ ಲಾವಣ್ಯತೆ ಕಡಿಮೆಯಾಗಿ ತೂಕ ಹೆಚ್ಚಾಗುವುದು, ಒಬ್ಬ ಮನುಷ್ಯ ದಿನಕ್ಕೆ ಏಳರಿಂದ ಎಂಟು ಗಂಟೆ ನಿದ್ದೆ ಮಾಡಬೇಕು.
ಮನುಷ್ಯ ಸರಿಯಾಗಿ ನಿದ್ರೆ ಮಾಡಲಿಲ್ಲ ಎಂದರೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ ಮತ್ತು ಮಾನಸಿಕವಾಗಿ ಅಸ್ವಸ್ಥತೆಯಿಂದ ಬಳಲುತ್ತಾರೆ. ಹಾಗಾಗಿ ದಿನಕ್ಕೆ 7 ರಿಂದ 8 ಗಂಟೆ ನಿದ್ರೆ ಮಾಡಬೇಕು.
