ಬೆಂಗಳೂರು:ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ವಸತಿ ಯೋಜನೆಯ ಕೋಟಾವನ್ನು ಶೇ.10 ರಿಂದ ಶೇ.15ಕ್ಕೆ ಹೆಚ್ಚಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಯಡಿಯೂರಪ್ಪ ಅವರು ಮಾತನಾಡುತ್ತಾ, "ನಾವು ಅಲ್ಪಸಂಖ್ಯಾತ ಸಮುದಾಯದ ವಿರುದ್ಧವಲ್ಲ. ಆದರೆ ಅತಿಯಾದ ಸವಲತ್ತುಗಳನ್ನು ನೀಡುವುದು ಖಂಡನೀಯ ಮತ್ತು ಕ್ಷಮಿಸಲಾಗದ ನಿರ್ಧಾರ," ಎಂದು ಆರೋಪಿಸಿದರು. ಈ ನಿರ್ಧಾರವು ಮತ ಬ್ಯಾಂಕ್ ರಾಜಕೀಯವನ್ನೇ ಸೂಚಿಸುತ್ತದೆ ಎಂದು ಅವರು ಹೇಳಿದರು.ಪರಿಶಿಷ್ಟ ಜಾ