ಕೈಲಾಸ ಪರ್ವತದ ಯಾತ್ರೆಯನ್ನು ಮಾಡುವುದರಿಂದ ಏನು ಪ್ರಯೋಜನ ಮತ್ತು ಧಾರ್ಮಿಕ ಮಹತ್ವದ ಬಗ್ಗೆ ತಿಳಿದುಕೊಳ್ಳಲು ಅನೇಕ ರೀತಿಯಲ್ಲಿ ದಾರಿಯಾಗಿದೆ, ಮನುಜ ಮಾಡಿರುವ ಪಾಪಗಳನ್ನೆಲ್ಲ ತೊಳೆದುಹಾಕುತ್ತದೆ.

ಹಿಂದೂ ಧರ್ಮದಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಅತ್ಯಂತ ಪವಿತ್ರ ತೀರ್ಥಯಾತ್ರೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಆದರೆ ಈ ತೀರ್ಥಯಾತ್ರೆ ಕೇವಲ ದೈಹಿಕ ಸವಾಲು ಮಾತ್ರವಲ್ಲದೆ ಆಧ್ಯಾತ್ಮಿಕ ಅನುಭವ ಕೂಡ ನೀಡುತ್ತದೆ.
ಕೈಲಾಸ ಪರ್ವತವು ಶಿವನ ವಾಸಸ್ಥಾನ ಎಂದು ಪ್ರತಿಯೊಬ್ಬರೂ ಸಹ ನಂಬಲಾಗಿದೆ, ಮಾನಸ ಸರೋವರ ತೀರದಲ್ಲಿ ಸ್ನಾನ ಮಾಡುವುದರಿಂದ ವ್ಯಕ್ತಿಯು ಹಿಂದಿನ ಜನ್ಮದಲ್ಲಿ ಏನೇ ಪಾಪ ಮಾಡಿದ್ದರು ಸಹ ಸ್ನಾನ ಮಾಡಿದ ಕೂಡಲೇ ಆ ಪಾಪಗಳಿಂದ ಮುಕ್ತನಾಗುತ್ತಾನೆ ಎಂಬ ನಂಬಿಕೆ ಇದೆ. ಇದರಿಂದ ತಮ್ಮ ಆತ್ಮವನ್ನು ಶುದ್ಧೀಕರಣಗೊಳ್ಳುತ್ತದೆ ಎಂಬ ಮಹತ್ವಪೂರ್ಣವಾದ ನಂಬಿಕೆ ಇಡಲಾಗಿದೆ.

ಇದು ಹೊಸ ಜೀವನವನ್ನು ಅನುಭವಿಸುವ ಅವಕಾಶವನ್ನು ನೀಡಲು ಸಹಾಯಮಾಡುತ್ತದೆ, ಇದರಿಂದ ಒಬ್ಬ ವ್ಯಕ್ತಿ ತನ್ನೊಳಗಿರುವ ಶುದ್ಧತೆಯನ್ನು ಅನುಭವಿಸಬಹುದು ಎಂದು ನಂಬಲಾಗಿದೆ.
ಈ ಮಾನಸ ಸರೋವರ ಯಾತ್ರೆಯು ಹಿಂದೂ ಧರ್ಮದಲ್ಲಿ ಮಾತ್ರವಲ್ಲವೇ ಬೌದ್ಧ ಧರ್ಮ ಮತ್ತು ಜೈನ ಧರ್ಮಕ್ಕೂ ಮುಖ್ಯವಾಗಿದೆ. ಈ ಕೈಲಾಸ ಮಾನಸ ಸರೋವರವನ್ನು ಮೋಕ್ಷದ ಸ್ಥಳವೆಂದು ಕೂಡ ಪರಿಗಣಿಸಲಾಗಿದೆ, ಕೈಲಾಸ ಪರ್ವತವನ್ನು ಪ್ರದಕ್ಷಿಣೆಯಾಕಿ, ಕೈಲಾಸ ಮಾನಸ ಸರೋವರದಲ್ಲಿ ಸ್ನಾನ ಮಾಡುವುದರಿಂದ ನಮ್ಮ ಆತ್ಮಕ್ಕೆ ಮುಕ್ತಿ - ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ.
ಬೌದ್ಧ ಗುರುಗಳು ಈ ಸ್ಥಳಕ್ಕೆ ಬರುವ ಮೂಲಕ ಮೋಕ್ಷವನ್ನು ಪಡೆಯುತ್ತಾರೆ ಎಂಬುದು ನಂಬಿಕೆಗೆ ಅರ್ಹವಾಗಿದೆ, ಈ ಪವಿತ್ರ ಸ್ಥಳವು ಬೆಳಕಿನ ಅಲೆಗಳು ಮತ್ತು ಧ್ವನಿ ತರಂಗಗಳ ಸಂಗಮವಾಗಿದೆ ಎಂದು ಹೇಳಲಾಗಿದೆ, ಇವು ʼಓಂʼ ಶಬ್ದದೊಂದಿಗೆ ಪ್ರತಿನಿಧಿಸುತ್ತಿರುತ್ತದೆ.
YOHO Bubbles Men Ortho slippers | Soft comfortable and stylish flip flop slippers for Men in exciting colors |Lightweight | Anti Skid | Daily Use Chappal
ಇದು ಆಳವಾದ ಆಧ್ಯಾತ್ಮಿಕ ಅನುಭವವನ್ನು ನೀಡುತ್ತದೆ ಎಂದು ಹೇಳಲಾಗಿದೆ, ಮನಸ್ಸಿನ ಶಾಂತಿ ಮತ್ತು ಸ್ಥಿರತೆಯನ್ನು ಹಿಡಿದಿಟ್ಟುಕೊಳ್ಳಲು ಸಹಾಯಮಾಡುತ್ತದೆ. ಮಾನಸ ಸರೋವರವನ್ನು ಬ್ರಹ್ಮ ಸೃಷ್ಟಿಸಿದ್ದಾನೆ ಎಂಬುದು ನಂಬಿಕೆಯಾಗಿದೆ.
ಕೈಲಾಸ ಪರ್ವತದ ಯಾತ್ರೆಯನ್ನು ಕೈಗೊಳ್ಳುವುದರಿಂದ ಶಿವಭಕ್ತರು ಶಿವನಿಂದ ವಿಶೇಷವಾದ ಆಶೀರ್ವಾದವನ್ನು ಪಡೆಯುತ್ತಾರೆ ಎಂಬುದು ಇಲ್ಲಿನ ಮಾತಾಗಿದೆ. ಈ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದರಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ದೃಢತೆಯನ್ನು ಹೆಚ್ಚು ಮಾಡುತ್ತದೆ ಎಂದು ನಂಬಿಕೆಯಾಗಿದೆ.
