Skip to main content
ವಿಡಿಯೋ
1/2
health

ಅತಿಯಾದ ಸಕ್ಕರೆ – ದೇಹದ ದ್ವಂಸಕ್ಕೆ ತ್ವರಿತ ದಾರಿ!

By ಪ್ರಣಮ್ಯ.ಟಿ.ಯಾದವ್
ಅತಿಯಾದ ಸಕ್ಕರೆ – ದೇಹದ ದ್ವಂಸಕ್ಕೆ ತ್ವರಿತ ದಾರಿ!

ಸಕ್ಕರೆ ಅಂಶ ಹೊಂದಿರುವ ಆಹಾರ ಪದಾರ್ಥಗಳ ದಿನನಿತ್ಯ ಸೇವನೆ ಅನಾರೋಗ್ಯಕ್ಕೆ ದಾರಿ

ಸಕ್ಕರೆಯ ಮೋಹಕ್ಕೆ ತುತ್ತಾಗಿದ್ರೆ ದೇಹವೇ ನಷ್ಟ!

ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಸಕ್ಕರೆ ಸೇವನೆ ಆರೋಗ್ಯವನ್ನು ಕೆಡಿಸಬಹುದು. ಇತ್ತೀಚಿನ ದಿನಗಳಲ್ಲಿ ಅತಿಯಾದ ಸಕ್ಕರೆ ಸೇವನೆಯಿಂದ ಹಲವಾರು ಜನರು ಖಾಯಿಲೆಗಳಿಗೆ ತುತ್ತಾಗಿದ್ದಾರೆ. ಬೆಳಗಿನ ಟೀ-ಕಾಫಿಗೆ ಹೆಚ್ಚು ಸಕ್ಕರೆ ಹಾಕಿ ಕುಡಿಯುವುದು, ಸಿಹಿಯಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುವುದು, ಬೇಕರಿ ತಿಂಡಿಗಳಾದ ಕೇಕ್, ಬಿಸ್ಕೆಟ್ ಗಳು, ಐಸ್ ಕ್ರೀಮ್ ಮುಂತಾದ ಸಕ್ಕರೆಯಾಂಶ ಹೊಂದಿರುವ ಆಹಾರ ಪದಾರ್ಥಗಳನ್ನು ದಿನನಿತ್ಯ ಸೇವನೆ ಮಾಡುವುದು, ಪ್ಯಾಕೆಟ್ ನಲ್ಲಿ ಸಿಗುವಂತಹ ಪಾನೀಯಗಳ ಸೇವನೆ ಇಂತಹ ಹಲವಾರು ವಸ್ತುಗಳಲ್ಲಿ ಸಕ್ಕರೆಯಾಂಶ ಬಳಕೆ ಹೇರಳವಾಗಿ ಕಂಡುಬರುತ್ತದೆ. ಇಂತಹ ಪದಾರ್ಥಗಳನ್ನು ದಿನನಿತ್ಯ ಸೇವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ದೇಹದಲ್ಲಿ ಕೊಬ್ಬಿನಾಂಶ ಪ್ರಮಾಣ ಹೆಚ್ಚಾಗಿ, ತೂಕ ಹೆಚ್ಚಾಗುವುದರ ಜೊತೆಗೆ ಮಧುಮೇಹ, ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹಾಗು ಇನ್ನಿತರ ಕಾಯಿಲೆಗಳು ಬರುವಂತ ಸಾಧ್ಯತೆ ಹೆಚ್ಚಾಗಿದೆ. ಕೆಲವು ದಿನಗಳ ಕಾಲ ಸಕ್ಕರೆಯಿಂದ ದೂರವಿದ್ದರೆ ನಮ್ಮ ದೇಹದಲ್ಲಿ ಹಲವಾರು ಬದಲಾವಣೆಗಳನ್ನು ಗಮನಿಸಬಹುದು .

MarinersApp Merchant Navy White Uniform Half Sleeve Shirt with Shoulder Flaps - Royal Cotton


ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದರಿಂದ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.ವಿಶೇಷವಾಗಿ ಪ್ರೋಟೀನ್ ಮತ್ತು ಫೈಬರ್‌ನಿಂದ ತುಂಬಿದ ಆಹಾರವನ್ನು ಸೇವಿಸಬೇಕಾಗುತ್ತದೆ.ಸಕ್ಕರೆಯನ್ನು ಕಡಿತಗೊಳಿಸುವುದು ರಕ್ತದಲ್ಲಿನ ಸಕ್ಕರೆ ಮತ್ತುಇನ್ಸುಲಿನ್ ಮಟ್ಟವನ್ನು ಸಮತೋಲನಗೊಳಿಸಲು ಉತ್ತಮ ಮಾರ್ಗವಾಗಿದೆ.

ಆರೋಗ್ಯಕರ ಕೊಬ್ಬಿಗೆ, ಮೊಟ್ಟೆಯ ಹಳದಿ ಲೋಳೆ, ಆವಕಾಡೊ, ಬೀಜಗಳು, ಆಲಿವ್ ಎಣ್ಣೆ ಮತ್ತು ಸಿಹಿಗೊಳಿಸದ ಮೊಸರುಗಳನ್ನು ಸೇರಿಸಬಹುದು. ಇದರ ಹೊರತಾಗಿ, ಕಿಡ್ನಿ ಬೀನ್ಸ್, ಕ್ವಿನೋವಾ, ಸಿಹಿ ಗೆಣಸು, ಬಟರ್‌ನಟ್ ಸ್ಕ್ವ್ಯಾಷ್ ಮತ್ತು ಬ್ರೌನ್ ರೈಸ್ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಾಗಿ ಉತ್ತಮ ಆಯ್ಕೆಗಳಾಗಿವೆ. ಅದೇ ಸಮಯದಲ್ಲಿ, ಸಾಕಷ್ಟು ನೀರು, ಹಾಗು ಇನ್ನಿತರ ಆರೋಗ್ಯಕರ ಪಾನೀಯಗಳನ್ನು ಸೇವಿಸಿ. ಸಕ್ಕರೆಯಿಂದ ದೂರವಿದ್ದು ಆರೋಗ್ಯವನ್ನ ಕಾಪಾಡಿಕೊಳ್ಳಿ .