Skip to main content
ವಿಡಿಯೋ
food

ಕಹಿಬೇವಿನ ಪ್ರಯೋಜನಗಳನ್ನು ತಿಳಿಯೋಣ ಬನ್ನಿ..!

By ಸುಶ್ಮಿತ ಆರ್‌
ಕಹಿಬೇವಿನ ಪ್ರಯೋಜನಗಳನ್ನು  ತಿಳಿಯೋಣ ಬನ್ನಿ..!

ಭಾರತೀಯ ಆಯುರ್ವೇದ ಪ್ರಕಾರ ಬೇವನ್ನು ಸೇವಿಸಿದರೆ ದೇಹದ ಅರ್ಧದಷ್ಟು ಕಾಯಿಲೆಗಳು ಗುಣವಾಗುತ್ತವೆ

ಭಾರತೀಯ ಆಯುರ್ವೇದ ಪ್ರಕಾರ ಬೇವನ್ನು ಸೇವಿಸಿದರೆ ದೇಹದ ಅರ್ಧದಷ್ಟು ಕಾಯಿಲೆಗಳು ಗುಣವಾಗುತ್ತವೆ. ಬೇವಿನ ರುಚಿ ಕಹಿಯಾಗಿದ್ದರೂ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು, ದೇಹದ ಅರ್ಧದಷ್ಟು ಕಾಯಿಲೆಗಳು ಗುಣವಾಗುತ್ತವೆ.

ಇದರ ಬೀಜದಿಂದ ಹಿಡಿದು ತೊಗಟೆಯವರೆಗೂ ಎಲ್ಲವೂ ಪ್ರಯೋಜನಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ . ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಯನ್ನು ಸೇವಿಸುದರಿಂದ ಹಲವಾರು ಪ್ರಯೋಜನೆಗಳು ಇವೆ .ಬೇವಿನ ಎಲೆಯನ್ನು ಸೇವಿಸುದರಿಂದ ಜ್ವರ ,ಕೆಮ್ಮು , ಆಯಾಸ ,ಸೋಂಕು ಮುಂತಾದ ಸಮಸ್ಯೆಗಳನ್ನು ನಿವಾರಿಸಬಹುದು.

Puma Unisex-Adult Polyester Cap

ರಕ್ತವನ್ನು ಸಂಪೂರ್ಣವಾಗಿ ಶುದ್ದಿಕರಿಸುವ ಶಕ್ತಿಯನ್ನು ಕೂಡ ಬೇವು ಹೊಂದಿದೆ. ಅಷ್ಟೇ ಅಲ್ಲದೆ ಚರ್ಮದ ರೋಗದಿಂದ ಬಳಲುತ್ತಿರುವವರು ಬೇವಿನ ಸೊಪ್ಪನ್ನು ನೀರಿನಲ್ಲಿ ಕುದಿಸಿ ಸ್ನಾನ ಮಾಡಿದರೆ ಸಮಸ್ಯೆಗಳು ದೂರವಾಗುತ್ತದೆ. ಕಹಿಬೇವನ್ನ ಹೆಚ್ಚಾಗಿ ಹಳ್ಳಿಗಳಲ್ಲಿ ಮದ್ದುಗಳಿಗೆ ಬಳಸುತ್ತಾರೆ.

ಕಹಿಬೇವಿನಿಂದ ಸಾಕಷ್ಟು ಲಾಭಗಳನ್ನು ಪಡೆದುಕೊಳ್ಳಬಹುದು ಕಹಿಬೇವು ಎಲ್ಲಾ ರೋಗಕ್ಕೂ ಮದ್ದಾಗಿರುತ್ತದೆ. ಯುಗಾದಿ ಹಬ್ಬದ ಸಮಯದಲ್ಲಿ ಕಹಿಬೇವನ್ನು ಬೇವು - ಬೆಲ್ಲದ ಸುಖ-ದುಃಖಗಳ ಸಂಕೇತವಾಗಿ ಬಳಸಲಾಗುತ್ತದೆ. ಹಿಂದಿನ ಕಾಲದಲ್ಲಿ ಯಾರು ಕೂಡ ಹಾಸ್ಪಿಟಲ್ ಗೆ ಹೋಗುತ್ತಿರಲಿಲ್ಲ ಅವರು ಮನೆಯಲ್ಲಿ ಕಹಿಬೇವಿನ ಎಲೆಯನ್ನು ಬಳಸಿ ಕಷಾಯ ಮಾಡಿ ಕುಡಿದು ತಮ್ಮ ರೋಗವನ್ನು ಗುಣಪಡಿಸಿಕೊಳ್ಳುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಕಹಿಬೇವು ಔಷಧಿಗಳು ಕಣ್ಮರೆಯಾಗುತ್ತಿವೆ.