Skip to main content
ವಿಡಿಯೋ
politics

ಪ್ರತಿ ಮನೆಗೂ 10 ಸಾವಿರ ಲಂಚ; ರೊಚ್ಚಿಗೆದ್ದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ

By ರಂಜಿತ್ ಡಿ ಶೆಟ್ಟಿ
ಪ್ರತಿ ಮನೆಗೂ 10 ಸಾವಿರ ಲಂಚ; ರೊಚ್ಚಿಗೆದ್ದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ

ಅಧಿಕಾರಿಗಳನ್ನು ಕರೆದು ರಾಜೀನಾಮೆ ಕೊಡಿಸುವ ಬದಲು ರಾಜ್ಯಸರ್ಕಾರ ಹಾಗೂ ಮುಖ್ಯಮಂತ್ರಿಗಳು, ಬಡವರ ಮನೆಯ ವಿಚಾರದಲ್ಲಿ ಕೂಡ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ಕೊಡುತ್ತಿರುವುದನ್ನು ಖಂಡಿಸುವುದಾಗಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ರಾಜೀವ್ ಗಾಂಧಿ ವಸತಿ ಯೋಜನೆಯ ಕುರಿತಾಗಿ ಕಾಂಗ್ರೆಸ್ ಶಾಸಕ ಬಿ. ಆರ್. ಪಾಟೀಲ್ ಅವರು ಆಡಿಯೋ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದು, ಈ ಕುರಿತಾಗಿ ಮಾತನಾಡಿದ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಅವರು ರಾಜ್ಯ ಸರ್ಕಾರ ನೇರವಾಗಿ ಗ್ರಾಮ ಪಂಚಾಯಿತಿಯ ಕಯ್ಯಲ್ಲೇ ಭ್ರಷ್ಟಾಚಾರ ಮಾಡಿಸುತ್ತಿದೆ ಅಂದು ಆರೋಪಿಸಿದ್ದಾರೆ.


"ಪ್ರಧಾನಮಂತ್ರಿ ವಸತಿ ಯೋಜನೆಯು ಸೇರಿದಂತೆ ಬಡವರಿಗೆ ಮನೆ ಕೊಡುವ ವಿಚಾರದಲ್ಲಿ ಪ್ರತಿ ಮನೆಗೂ 10 ಸಾವಿರ ರೂಪಾಯಿ ಲಂಚ ಕೇಳುತ್ತಿದ್ದಾರೆ, ರಾಜೀವ್ ಗಾಂಧಿ ವಸತಿ ನಿಗಮ ಭ್ರಷ್ಟಾಚಾರ ಮಾಡುತ್ತಿದೆ ಎಂದು ಬಿ. ಆರ್. ಪಾಟೀಲ್ ಅವರು ಆರೋಪ ಮಾಡಿದ್ದಾರೆ. ಆದರೆ ಉಪಮುಖ್ಯಮಂತ್ರಿ ನಮ್ಮ ಸರ್ಕಾರದಲ್ಲಿ ಹೀಗೆ ಆಗಿಲ್ಲ ಎಂದಿದ್ದಾರೆ.


ಇದು ಕೈಗನ್ನಡಿ ಇದ್ದಂತೆ. ಅಧಿಕಾರಿಗಳನ್ನು ಕರೆದು ರಾಜೀನಾಮೆ ಕೊಡಿಸುವ ಬದಲು ರಾಜ್ಯಸರ್ಕಾರ ಹಾಗೂ ಮುಖ್ಯಮಂತ್ರಿಗಳು, ಬಡವರ ಮನೆಯ ವಿಚಾರದಲ್ಲಿ ಕೂಡ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ಕೊಡುತ್ತಿರುವುದನ್ನು ನಾನು ಖಂಡಿಸುತ್ತೇನೆ." ಎಂದು ಆಕ್ರೋಶ ವ್ಯಕ್ತಪಡಿಸಿದರು.

Puma Unisex's Cap