ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ತುಳಸಿ ಎಲೆಯನ್ನು ಸ್ವಲ್ಪ ನೀರಿನ ಜೊತೆಗೆ ಸೇವಿಸಿದರೆ ಜೀರ್ಣಕ್ರಿಯೆಯ ವ್ಯವಸ್ಥೆಯು ಆರೋಗ್ಯಕರ ವಾಗಿರುತ್ತದೆ. ಅದರ ಜೊತೆಗೆ ಬಾಯಿಯ ದುರ್ವಾಸನೆ ಕೂಡ ಬರುವುದಿಲ್ಲ.
ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇದ್ದರೂ ಬೇಗನೆ ನಿವಾರಣೆ ಆಗುತ್ತದೆ. ಹಾಗಾಗಿ ಪ್ರತಿ ನಿತ್ಯ ಎದ್ದ ತಕ್ಷಣ ಖಾಲಿ ಹೊಟ್ಟೆಗೆ 1 ರಿಂದ 5 ಎಲೆಯನ್ನು ಚೆನ್ನಾಗಿ ಅಗೆದು ತಿನ್ನಬೇಕು ಪ್ರತಿನಿತ್ಯ ಇದನ್ನು ಸೇವಿಸಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಯಾವುದೇ ಅನಾರೋಗ್ಯ ಸಮಸ್ಯೆಗಳು ನಮ್ಮನ್ನು ಹೆಚ್ಚಾಗಿ ಕಾಡುವುದಿಲ್ಲ ಹಾಗೆಯೇ ಭಾರತದಲ್ಲಿ ತುಳಸಿಗೆ ತುಂಬಾ ಪವಿತ್ರವಾದ ಸ್ಥಾನವಿದೆ.ಅದೇ ರೀತಿ ತುಳಸಿ ಎಲೆಯನ್ನು ಬಳಸಿ ಆಯುರ್ವೇದ ಔಷಧಿಗಳನ್ನು ತಯಾರಿಸುತ್ತಾರೆ. ತುಳಸಿ ಎಲೆಯಿಂದ ಸಾಕಷ್ಟು ವಿವಿಧ ರೀತಿಯಲ್ಲಿ ಪ್ರಯೋಜನಗಳು ಇವೆ ತುಳಸಿಯನ್ನು ದೇವರಿಗೆ ಅಲಂಕಾರ ಮಾಡಲು ಕೂಡ ಬಳಸುತ್ತಾರೆ. ಹಾಗೆಯೇ ಭಾರತದಲ್ಲಿ ಹಿಂದುಗಳು ತುಳಸಿಯನ್ನು ಪವಿತ್ರವೆಂದು ಭಾವಿಸುತ್ತಾರೆ.
ತುಳಸಿ ಎಲೆಯನ್ನು ಹೆಚ್ಚಾಗಿ ಭಾರತದಲ್ಲಿ ಮಾತ್ರ ಬೆಳೆಯುತ್ತಾರೆ. ತುಳುಸಿ ಎಲೆಯಿಂದ ಜ್ಯೂಸ್ ಅನ್ನು ಮಾಡಿ ಕುಡಿಯುತ್ತಾರೆ. ತುಳಸಿ ಎಲೆಗಳಲ್ಲಿ ಚಿಕಿತ್ಸ ಗುಣಗಳು ಇವೆ ಎಂದು ಹಿಂದಿನಿಂದಲೂ ಪರಿಗಣಿಸಲಾಗಿದೆ. ತುಳಸಿ ಎಲೆಗಳನ್ನು ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿದೆ. ಇದು ಸೋಂಕಿನ ವಿರುದ್ಧ ಹೋರಾಡುವುದು ತುಳಸಿ ಎಲೆ ಸೇವಿಸಿದರೆ ರಕ್ತದ ಸಂಚಾರ ಸುಧಾರಣೆ ಆಗುವುದು. ಪ್ರತಿ ಎರಡು ದಿನಕ್ಕೊಮ್ಮೆ ತುಳಸಿ ಎಲೆಯನ್ನು ಸೇವಿಸಬೇಕು.
