Skip to main content
ವಿಡಿಯೋ
1/2
general

ಬೆಳ್ಳಿಗ್ಗೆ ಬೇಗ ಏಳೋದ್ರಿಂದ ಅನುಕೂಲಗಳೇನು ?

By pavithra. ganapathi baradavalli
ಬೆಳ್ಳಿಗ್ಗೆ ಬೇಗ ಏಳೋದ್ರಿಂದ ಅನುಕೂಲಗಳೇನು ?

ಮನುಷ್ಯನ ಜೀವನಶೈಲಿ ಬದಲಾಗುತ್ತಿದೆ. ಅನೇಕರು ರಾತ್ರಿ ಲೇಟ್‌ ಆಗಿ ಮಲಗುತ್ತಾರೆ. ಲೇಟಾಗಿ ಮಲಗುವುದು ಕೆಲವರಿಗೆ ಹವ್ಯಾಸ ಆಗಿ ಬಿಟ್ಟಿದೆ. ಅಲ್ಲದೇ ಅವರಿಗೆ ಅದು ಖುಷಿ ನೀಡುತ್ತದೆ.

ಮನುಷ್ಯನ ಜೀವನಶೈಲಿ ಬದಲಾಗುತ್ತಿದೆ. ಅನೇಕರು ರಾತ್ರಿ ಲೇಟ್‌ ಆಗಿ ಮಲಗುತ್ತಾರೆ. ಲೇಟಾಗಿ ಮಲಗುವುದು ಕೆಲವರಿಗೆ ಹವ್ಯಾಸ ಆಗಿ ಬಿಟ್ಟಿದೆ. ಅಲ್ಲದೇ ಅವರಿಗೆ ಅದು ಖುಷಿ ನೀಡುತ್ತದೆ. ಇದರಿಂದಾಗಿ ಬೆಳಿಗ್ಗೆ ತಡವಾಗಿ ಏಳುವ  ಹವ್ಯಾಸವು ಹೆಚ್ಚುತ್ತಿದೆ. ಫೋನ್‌ಗಳ ಬಳಕೆ, ಟಿವಿಗಳ ಬಳಕೆಯಿಂದಾಗಿ ಭಾರೀ ತಡವಾಗಿ ಏಳುವ ಅಭ್ಯಾಸದಿಂದ ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅನೇಕರು ರೋಗಕ್ಕೆ ತುತ್ತಾಗುತ್ತಾರೆ.


ನಿಮಗೊಂದು ಗೊತ್ತಾ ಬೆಳಿಗ್ಗೆ ಬೇಗ ಏಳುವುದರಿಂದ ಎಷ್ಟು ಒಳ್ಳೆಯದು ಎನ್ನುವುದು. ಹೌದು ನೀವು ಒಂದು ಭಾರಿ ಬೆಳಿಗ್ಗೆ ಬೇಗ ಎದ್ದು ನೋಡಿ ನಿಮ್ಮ ಆ ಇಡೀ ದಿನವೇ ಆನಂದದಿಂದ ತುಂಬಿರುತ್ತದೆ. ನಿಮ್ಮ ದಿನವೇ ಅಂದು ಫೆಂಟಾಸ್ಟಿಕ್‌ ಆಗಿರುತ್ತದೆ.  ದಿನಾಲು ಬೇಗ  ಏಳೋದ್ರಿಂದ ಆ ಇಡೀ ದಿ ಫೂರ್ತಿ ನಿಮ್ಮದಾಗಿರುತ್ತದೆ. ಬೆಳಿಗ್ಗೆ ಏಳೋದ್ರಿಂದ ಸಿಗುವ ತಾಜಾ ಗಾಳಿ ಹಕ್ಕಿಗಳ ಕಲರವ ನಿಶ್ಯಬ್ಧತೆ ನಿಜಕ್ಕೂ ನಮ್ಮನ್ನೂ ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ.


ಬೆಳಿಗ್ಗೆ ಭೇಗ ಏಳೋದ್ರಿಂದ ಇಡೀ ದಿನ ಸಕ್ರಿಯವಾಗಿರುತ್ತೀರಿ ಸೂರ್ಯನ ಆಶೀರ್ವಾದವೂ ನಮಗೆ ಸಿಗುತ್ತದೆ. ಸಾಮಾನ್ಯವಾಗಿ ಬೆಳಿಗ್ಗೆ ಅಂದ್ರೆ ತುಂಬಾ ಜನ ಸೋಮಾರಿತನದಿಂದ ಬೆಳಿಗ್ಗೆ ಲೇಟಾಗಿ ಏಳೋದು ಅಭ್ಯಾಸ ಮಾಡ್ಕೋಂಡಿರ್‌ತಾರೆ. ಆದರೆ ಬೆಳಿಗ್ಗೆ ಬೇಗ ಏಳೋದ್ರಿಂದ ಎಷ್ಟೆಲ್ಲಾ ಪ್ರಯೋಜನ ಅಂತ ತಿಳ್ಕೊಂಡ್ರೆ ಒಂದ್‌ ಸರಿ ಶಾಕ್‌ ಆಗದಂತೂ ನಿಜ. ಬೆಳಿಗ್ಗೆ ಬೇಗ ಎದ್ರೆ ಮೂಡ್‌ ಪ್ರೆಶ್‌ ಆಗೋದ್ರು ಜೊತೆಗೆ ಹಾಯಾಗೂ ಇರುತ್ತೆ. ಇದಿಷ್ಟೇ ಅಲ್ಲದೇ ಸೋಮಾರಿತದಿಂದ ತುಂಬಾ ಬೇಗ ಬೇಗ ಹೊರಗ್‌ ಬರುತ್ತೀರಿ ಅಷ್ಟೇ ಅಲ್ಲದೇ ರಿಫ್ರೆಶಮೆಂಟ್‌ ಫೀಲ್‌ ಸಿಗುತ್ತೆ .


ಹಾಗಾಗಿ ಬೆಳಿಗ್ಗೆ ಏಳೋಕೆ ಆದಷ್ಟು ಅಭ್ಯಾಸ ಮಾಡ್ಕೋಳ್ಳಿ ಹಾಗೇನೇ ಬೆಳಿಗ್ಗೆ ಬೇಗ ಏಳೋದ್ರಿಂದ ದಿನದ ಕೆಲ್ಸಾನೆಲ್ಲಾ ಬೇಗ ಬೇಗ ಮುಗ್ಸಿ ಕೆಲಸಕ್ಕೆ ಹೋಗೋರು ಬೇಗನೇ ಹೋಗಬಹುದು. ತಾಜಾತನ ದೊರೆಯುತ್ತದೆ. ತಾಜಾ ಗಾಳಿ ಮನಸ್ಸಿಗೆ ಮುದ ನೀಡುತ್ತದೆ.ಸಂಪೂರ್ಣ ಏಕಾಗ್ರತೆ ಕೆಲಸದ ಮೇಲೆಯೇ ಇರುತ್ತದೆ. ನೋಡಿ ಎಷ್ಟಲ್ಲಾ ಪ್ರಯೋಜನಗಳು ದೊರೆಯುತ್ತೆ ಅಂತ ಇವನೆಲ್ಲಾ ಸುಮ್ನೆ ಬಿಡಬೇಕಾ ಇಲ್ಲಾ ಅಲ್ವಾ ಹಾಗಿದ್ರೆ ಬೇಗ ಏಳೋದಕ್ಕೆ ಅಭ್ಯಾಸ ಮಾಡಿಕೊಳ್ಳಿ.

RENEE Midnight Mascara with Unique 360-Degree Wand | Darkest Black | Clump-Free | Long-Lasting Formula | Volumizes | Lengthens | Nourishes | Infused with Vitamin E | 8ml