ಅಭಿಮಾನಿಗಳ ನಡುವಿನ ಚರ್ಚೆಗೆ ಹೊಸ ಉರಿಯನ್ನು ಹಚ್ಚುವಂತಾಯಿತು ನಟಿ ರುಕ್ಮಿಣಿ ವಸಂತ್ ಇತ್ತೀಚೆಗೆ ಹಂಚಿಕೊಂಡಿರುವ ಇನ್ಸ್ಟಾಗ್ರಾಮ್ ಪೋಸ್ಟ್. ಈ ರಹಸ್ಯಮಯ ಚಿತ್ರ ಮತ್ತು ಶೀರ್ಷಿಕೆ, ಅವರು ಜೂನಿಯರ್ ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಅವರ ಬಹು ನಿರೀಕ್ಷಿತ ಪ್ರಾಜೆಕ್ಟ್ಗೆ ಸೇರ್ಪಡೆಯಾಗಿರುವ ಸಾಧ್ಯತೆ ಎಂಬ ಗಟ್ಟಿಯಾದ ಊಹೆಗಳಿಗೆ ಕಾರಣವಾಗಿದೆ. "Tiger Tiger Burning Bright..." ಎಂಬ ಸಾಲು ಕನ್ನಡಿಗರಿಗೆ ಕವಿತೆಯ ಸಾಲು ಅನ್ನಿಸಬಹುದು. ಆದರೆ ಎನ್ಟಿಆರ್ ಅಭಿಮಾನಿಗಳಿಗೆ ಇದು ಉತ್ಸವದ ಘೋಷಣೆಯಂತಾಗಿದೆ. 'ಟೈಗರ್' ಎಂಬ ಶಬ್ದವನ್ನೇ ಎನ್ಟಿಆರ್ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಕರೆಯುತ್ತಾರೆ. ಹೀಗಾಗಿ