Skip to main content
ವಿಡಿಯೋ
food

ದಿನ ಬೆಳಗ್ಗೆ ಆಮ್ಲಾ ಜ್ಯೂಸ್ ಕುಡಿದ್ರೆ ನಿಮ್ಮ ದೇಹದಲ್ಲಿ ಆಗುವ ಮ್ಯಾಜಿಕ್ ನೋಡಿ..!

By ಸುಶ್ಮಿತ ಆರ್‌
ದಿನ ಬೆಳಗ್ಗೆ ಆಮ್ಲಾ ಜ್ಯೂಸ್ ಕುಡಿದ್ರೆ ನಿಮ್ಮ ದೇಹದಲ್ಲಿ ಆಗುವ ಮ್ಯಾಜಿಕ್ ನೋಡಿ..!

ಪ್ರತಿಯೊಬ್ಬರೂ ಆರೋಗ್ಯವಾಗಿರಬೇಕು ಅನ್ನೋ ಆಸೆ ಇರುತ್ತದೆ. ಬೆಳಗಿನ ವೇಳೆ ನಮ್ಮ ದೇಹ ನವೀಕರಣಕ್ಕೆ ಸಿದ್ಧವಾಗಿರುತ್ತದೆ. ಅಂತಹ ಸಮಯದಲ್ಲಿ ಆಮ್ಲಾ (ನೆಲ್ಲಿಕಾಯಿ) ಜ್ಯೂಸ್‌ ಕುಡಿಯುವುದು ಆರೋಗ್ಯಕ್ಕೆ ತುಂಬಾ ಲಾಭದಾಯಕ. ಇದನ್ನು ಸೂಪರ್‌ ಜ್ಯೂಸ್‌ ಎನ್ನುತ್ತಾರೆ.

ಪ್ರತಿದಿನ ಈ ಜ್ಯೂಸ್ ಸೇವಿಸಿದರೆ ದೇಹದಲ್ಲಿ ವಾಸ್ತವವಾಗಿ ಮ್ಯಾಜಿಕ್ ಆಗುತ್ತದೆ.ನೆಲ್ಲಿಕಾಯಿಯಲ್ಲಿ ವಿಟಮಿನ್ C ಅತಿಯಾಗಿ ಸಿಗುತ್ತದೆ. ಇದಲ್ಲದೇ ಕ್ಯಾಸಿಯಂ, ಐರನ್, ಫೈಬರ್, ಮತ್ತು ಪಾಂಚ ಭೌತಿಕ ತತ್ವಗಳ ಸಮತೋಲನ ಇದರಲ್ಲಿ ಇದೆ. ಇದು ದೇಹಕ್ಕೆ ಮರು ಜೀವ ನೀಡುವಂತೆ ಆಮ್ಲಾ ಜ್ಯೂಸ್‌ನಲ್ಲಿರುವ ವಿಟಮಿನ್ C ದೇಹದ ಇಮ್ಯೂನ್ ಸಿಸ್ಟಂನ್ನು ಬಲಗೊಳಿಸುತ್ತದೆ.

ಋತು ಬದಲಾಗುವ ಸಮಯದಲ್ಲಿ ಸೊಳ್ಳೆ ಕಾಟ, ಜ್ವರ, ಕೆಮ್ಮು, ಕೆಳಗೆ ಇಳಿಯುವ ಆರೋಗ್ಯ ಸಮಸ್ಯೆಗಳಿಗೆ ತಡೆಯಲಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಆಮ್ಲಾ ಜ್ಯೂಸ್ ಸೇವಿಸಿದರೆ ಹೊಟ್ಟೆಯ ಎಸಿಡಿಟಿ ನಿಯಂತ್ರಣವಾಗುತ್ತದೆ. ತೂಕ ಕಡಿಮೆ ಮಾಡಬೇಕು ಅಂದರೆ ಇದು ಉತ್ತಮ ಆಯ್ಕೆ.ಆಮ್ಲಾ ದೇಹದ ಒಳಗಿನಿಂದ ಡಿಟಾಕ್ಸ್ ಮಾಡುತ್ತದೆ.

ಚರ್ಮ ಪ್ರಕಾಶವಾಗಿ ಹೊಳೆಯುತ್ತದೆ, ಕೂದಲು ಬಿಳುಪಾಗದಂತೆ ತಡೆಯುತ್ತದೆ, ಬೆಳವಣಿಗೆ ಹೆಚ್ಚಿಸುತ್ತದೆ. ಕೂದಲಿಗೆ ನೈಸರ್ಗಿಕ ಶೈನ್ ಕೊಡುತ್ತದೆ. ಈ ಮೂಲಕ ಬ್ಲಡ್ ಶುಗರ್ ಲೆವೆಲ್ ನಿಯಂತ್ರಣವಾಗುತ್ತದೆ. ಅಂತಃಕರಣಕ್ಕೆ ಪೋಷಣೆಯಾದ ಆಮ್ಲಾ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

The Tie Hub Fedora Hats for Men

ಹೃದಯ ರೋಗಗಳಿಗೆ ತಡೆಯಾಗಿ ಕಾರ್ಯನಿರ್ವಹಿಸುತ್ತದೆ. ಹೆಣ್ಣುಮಕ್ಕಳಿಗೆ ಇದು ಹೆಚ್ಚಿನ ಉಪಯೋಗ 2 ಚಮಚ ಆಮ್ಲಾ ಜ್ಯೂಸ್ ಅನ್ನು ಅರ್ಧ ಲೀಟರ್ ಉಗುರು ಬಿಸಿ ನೀರಿಗೆ ಮಿಶ್ರಿಸಿ ಖಾಲಿ ಹೊಟ್ಟೆಗೆ ಸೇವಿಸಬೇಕು ತುಂಬಾ ಒಳ್ಳಯದು.

ಬೆಳ್ಳುಳ್ಳಿ ಅಥವಾ ಹುಣಸೆಹಣ್ಣು ಜ್ಯೂಸ್‌ ಜತೆ ಸೇರಿಸದಂತೆ.ಶುದ್ಧ ಪ್ರಾಕೃತಿಕ ಜ್ಯೂಸ್ ಉಪಯೋಗಿಸಿ. ಬಾಟಲಿಯಲ್ಲಿ ಸಿಗುವ ಜ್ಯೂಸ್‌ ತಪ್ಪಿಸಬೇಕು. ಜಠರದ ತೊಂದರೆ ಇರುವವರಿಗೆ ಮೊದಲು ವೈದ್ಯರ ಸಲಹೆ ಅಗತ್ಯ ಗರ್ಭಿಣಿಯರು ಮತ್ತು ತಿನ್ನುವ ಔಷಧಿ ಇರುವವರು ಪ್ರಮಾಣದಲ್ಲಿ ಸೇವಿಸಬೇಕು. ನಿರಂತರ ಸೇವನೆಯಿಂದ ನಿಮ್ಮ ದೇಹವೇ ಹೊಸ ಜೀವನ ಪಡೆದುಕೊಳ್ಳುತ್ತದೆ. ಪ್ರಕೃತಿಯ ಈ ಆರೋಗ್ಯದ ವರವನ್ನು ನಿಮ್ಮ ದಿನ ಚರಿಯಲ್ಲಿ ಸೇರಿಸಿ, ಆರೋಗ್ಯದ ಹಾದಿಯಲ್ಲಿ ಸಾಗಿರಿ.