ಚಿಕ್ಕಮಗಳೂರು: ಸಮವಸ್ತ್ರ ಧರಿಸದೇ ಶಾಲೆಗೆ ಹೋದರೆ ಶಿಕ್ಷಕರು ಬೈಯುತ್ತಾರೆ ಎಂದು ಬಾಲಕಿ ಆತ್ಮಹತ್ಯೆ ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿದೆ.
ಪ್ರತಿಯೊಂದು ವಿದ್ಯಾರ್ಥಿಗಳು ಕೂಡ ಶಿಸ್ತಿನಿಂದ ಸಮವಸ್ತ್ರ ಧರಿಸಿಕೊಂಡು ಮತ್ತು ಏಕತೆಯ ಮನೋಭಾವ ಬೆಳೆಯಲಿ ಎಂಬ ಭಾವನೆಯಿಂದ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರವನ್ನು ಕಡ್ಡಾಯ ಮಾಡಲಾಗಿದೆ.

ಇದೀಗ, ಶಾಲೆಗಳು ಆರಂಭವಾಗಿದ್ದು, ಮಕ್ಕಳು ಸಮವಸ್ತ್ರ ಧರಿಸಿಕೊಂಡು ನಲಿದಾಡುತ್ತಾ, ಸಂತೋಷದಿಂದ ಶಾಲೆಗೆ ಹೋಗಬೇಕು ಎಂಬ ಆಸೆ ಪ್ರತಿಯೊಂದು ಮಕ್ಕಳಲ್ಲಿಯೂ ಸಹ ಇರುತ್ತದೆ. ಆದರೆ ಸಮವಸ್ತ್ರ ಧರಿಸುವ ವಿಚಾರಕ್ಕೆನೇ ಚಿಕ್ಕಮಗಳೂರಿನ ಓರ್ವ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಆಶ್ಚರ್ಯಕರವಾದ ಸಂಗತಿಯಾಗಿದೆ.
ಲಿಂಗದಹಳ್ಳಿ ಗ್ರಾಮದ 13 ವರ್ಷದ ನಿವೇದಿತಾ ಎಂಬ ವಿದ್ಯಾರ್ಥಿಗೆ ಸಮವಸ್ರ್ತವನ್ನು ನೀಡಿದ್ದರು.ಸೋಮವಾರದಿಂದ ಸಮವಸ್ತ್ರ ಧರಿಸಿಕೊಂಡು ಬರುವಂತೆ ಹೇಳಿದ್ದರು. ಸಮವಸ್ತ್ರವನ್ನು ಹೊಲಿಸಲು ಪೋಷಕರು ಟೈಲರ್ಗೆ ನೀಡಿದ್ದರು. ಆದರೆ, ಟೈಲರ್ ಇನ್ನೂ ಸಮವಸ್ತ್ರ ಹೊಲಿದಿರಲಿಲ್ಲ ಎಂಬ ಕಾರಣದಿಂದಾಗಿ ಬಾಲಕಿ ಭಯಪಟ್ಟು ಸಮವಸ್ತ್ರ ಧರಿಸದೆ ಶಾಲೆಗೆ ಹೋದರೆ ಶಿಕ್ಷಕರು ಹೋಡೆಯುತ್ತಾರೆಂದು ಬಾಲಕಿ ಮನೆಯಲ್ಲಿ ವಿಷವನ್ನ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇಂದಿನ ಮಕ್ಕಳಲ್ಲಿ ದೈರ್ಯವಿಲ್ಲ, ಎದುರಿದಿ ನಿಲ್ಲುತ್ತೇನೆ ಎಂಬ ಮನಸ್ಸು ಇಲ್ಲ, ಯಾರೇ ಏನೇ ಹೇಳಿದರೂ ತಮ್ಮ ಕಣ್ಣ ಮುಂದೆ ಸಾವು ಮುಂದೆ ಬರುತ್ತದೆ. ಯಾವುದೇ ರೀತಿಯ ತೊಂದರೆಯಾದರೂ ಕೂಡ ದೈರ್ಯವಾಗಿ ಎದುರಿಸಿ ನಿಲ್ಲಬೇಕು ಎಂಬ ಮನಸ್ಸು ಮಾಡಿ ಬದುಕಬೇಕು ಇಲ್ಲವಾದರೆ ಈ ಸಮಾಜದಲ್ಲಿ ಜೀವನ ಮಾಡಲು ಸಾಧ್ಯವಿಲ್ಲ.
