ಅಮೆರಿಕ: 4 ಗಗನಯಾನಿಗಳ, ಬಹು ನಿರೀಕ್ಷಿತ ಗಗನಯಾನವಾದ ಮಿಷನ್ ”ಆಕ್ಸಿಯಂ-4" (Ax‑4) (Axiom-4), SpaceX Falcon-9 ರಾಕೆಟ್ ಅನ್ನು ಜೂನ್ 25 ರ ಮುಂಜಾನೆ 2.31 ಕ್ಕೆ ಅಮೆರಿಕಾದ, ಫ್ಲೋರಿಡಾದ ಜಾನ್ ಎಫ್ ಕೆನಡಿ ಉಡಾವಣ ಕೇಂದ್ರದಿಂದ ಉಡಾಯಿಸಲಾಗಿದೆ. ಈ ಮಿಷನ್ ನಾಲ್ವರು ಸಿಬ್ಬಂದಿಯನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ISS) ಕರೆದೊಯ್ಯಲಿದ್ದು. ಈ ಮಿಷನ್ ಅಮೆರಿಕಾದ ಬಾಹ್ಯಾಕಾಶಯಾನ ಮತ್ತು ಭಾರತಕ್ಕೆ ಹೆಚ್ಚು ಪ್ರಮುಖವಾಗಿದೆ.
Safari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women
.png)
ಆಕ್ಸಿಯಂ ಮಿಷನ್ 4 (Ax‑4) ಎಂಬುದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ಕ್ಕೆ ತೆರಳಲು ನಡೆದ ಖಾಸಗಿ ಬಾಹ್ಯಾಕಾಶ ಯಾನವಾಗಿದ್ದು, ಇದನ್ನು Axiom Space ಸಂಸ್ಥೆ, SpaceX ಮತ್ತು NASA ಸಹಭಾಗಿತ್ವದಲ್ಲಿ ನಡೆಯುತ್ತಿದೆ.
ಈ ಮಿಷನ್ನಲ್ಲಿ SpaceX Falcon 9 Block 5 ರಾಕೆಟ್ ಅನ್ನು ಬಳಸಿದ್ದು, Crew Dragon Grace ಬಾಹ್ಯಾಕಾಶ ಯಾನಿಕೆಯನ್ನು ಭೂಮಿಗೆ ಸಮೀಪದ ಕಕ್ಷೆಗೆ (Low Earth Orbit) ತಲುಪಿಸುವ ಯೋಜನೆಯಾಗಿದೆ.
ಭಾರತ, ಪೋಲ್ಯಾಂಡ್ ಮತ್ತು ಹಂಗೇರಿ, ಅಮೆರಿಕ ದೇಶಗಳ ಗಗನಯಾನಿಗಳ ಮಾನವ ಬಾಹ್ಯಾಕಾಶ ಪ್ರಯಾಣ ಇದಾಗಿದ್ದು, 40 ವರ್ಷಗಳ ನಂತರ ಭಾರತ, ಪೋಲ್ಯಾಂಡ್ ಮತ್ತು ಹಂಗೇರಿ ದೇಶಗಳ ಸರ್ಕಾರಗಳು ಮೊದಲ ಬಾರಿಗೆ ಮಾನವ ಸಹಿತ ಬಾಹ್ಯಾಕಾಶಯಾನವನ್ನು ಪ್ರಾಯೋಜಿಸುತ್ತಿದೆ.
ಆಕ್ಸಿಯಂ -4 (Axiom-4) ವಾಣಿಜ್ಯ ಮಿಷನನ್ನು ಅನುಭವಿ ಅಂತರಿಕ್ಷಯಾತ್ರಿಕರಾದ ಪೆಗ್ಗಿ ವಿಟ್ಸನ್ ಅವರು ನಾಯಕತ್ವ ವಹಿಸಿದ್ದಾರೆ. ಭಾರತೀಯ ಅಂತರಿಕ್ಷಯಾತ್ರಿಕರಾದ ಶುಭಾಂಶು ಶುಕ್ಲಾ ಪೈಲಟ್ ಆಗಿದ್ದು, ಹಂಗೇರಿಯ ಟಿಬೋರ್ ಕಾಪು ಮತ್ತು ಪೋಲಂಡಿನ ಸ್ಲಾವೊಸ್ ಉಜ್ನಾನ್ಸ್ಕಿ ಮಿಷನ್ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶುಭಾಂಶು ಶುಕ್ಲಾಅವರು ಭಾರತದ ಏರ್ ಫೋರ್ಸ್ನ ಗ್ರೂಪ್ ರೇಂಜನ ಅಧಿಕಾರಿಯಾಗಿದ್ದು ಆಕ್ಸಿಯಂ -4 ಮಿಷನ್ನಲ್ಲಿ ಪೈಲೆಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ, ಇದು ಭಾರತೀಯರೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.
ಈ ಆಕ್ಸಿಯಂ - 4 (Axiom-4) ಮಿಷನ್ ಉಡಾವಣಾ ದಿನಾಂಕದಿಂದ 14 ದಿನಗಳು ನಡೆಯುವ ನಿರೀಕ್ಷೆಯಿದೆ. ಮೂಲತಃ ಈ ಮಿಷನ್ ಜೂನ್ 10 ರಂದು ಉಡಾಯಿಸಲು ಯೋಜಿಸಲಾಗಿತ್ತು, ಆದರೆ ಹಲವು ಬಾರಿ ವಿಳಂಬವಾಗಿದೆ.
1. ವಾಣಿಜ್ಯ ಬಾಹ್ಯಾಕಾಶ ಪ್ರಾಯೋಗಿಕ ಯೋಜನೆ (Commercial Space Initiative):
-Ax-4 ಮಿಷನ್ ಖಾಸಗಿ ಬಾಹ್ಯಾಕಾಶ ಸ್ಥಾನಗಳು ಮತ್ತು ಮಿಷನ್ಗಳ ಸಾಧ್ಯತೆಯನ್ನು ತೋರಿಸುವ ಮೂಲಕ ಬೆಳೆಯುತ್ತಿರುವ ವಾಣಿಜ್ಯ ಬಾಹ್ಯಾಕಾಶ ಉದ್ಯಮಕ್ಕೆ ಸಹಕಾರ ನೀಡುತ್ತದೆ.
-ಇದು ಭೂಮಿಗೆ ಸಮೀಪದ ಕಕ್ಷೆಯಲ್ಲಿ (low Earth orbit) ಬಾಹ್ಯಾಕಾಶ ಪ್ರವಾಸೋದ್ಯಮ ಮತ್ತು ಬಾಹ್ಯಾಕಾಶ ಆಧಾರಿತ ಉದ್ಯಮಗಳಂತಹ ವಾಣಿಜ್ಯ ಚಟುವಟಿಕೆಗಳನ್ನು ನೆರವಿನೊಡನೆ ನಡೆಸಲು ಅವಕಾಶ ಮಾಡಿಕೊಡುತ್ತದೆ.
2. ವೈಜ್ಞಾನಿಕ ಸಂಶೋಧನೆ:
-ಈ ಮಿಷನ್ ಮಾನವ ಆರೋಗ್ಯ, ಬಾಹ್ಯಾಕಾಶ ಜೀವನ ಮತ್ತು ಪದಾರ್ಥ, ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಶೂನ್ಯಾಕರ್ಷಣಾ ಪರಿಸ್ಥಿತಿಯಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ಕೇಂದ್ರೀಕೃತವಾಗಿದೆ.
-ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಅಗತ್ಯವಿರುವ ಮಿಷನ್ಗಳಿಗಾಗಿ ಮಾಹಿತಿ ಸಂಗ್ರಹಿಸುವುದನ್ನು ಈ ಮಿಷನ್ ಉದ್ದೇಶಿಸುತ್ತದೆ.
3. ಅಂತರರಾಷ್ಟ್ರೀಯ ಸಹಕಾರ:
-Ax-4 ಬಾಹ್ಯಾಕಾಶ ಅನ್ವೇಷಣೆಯಲ್ಲಿ ವಿವಿಧ ರಾಷ್ಟ್ರಗಳು ಮತ್ತು ಸಂಸ್ಥೆಗಳ ನಡುವಿನ ಸಹಕಾರವನ್ನು ಉತ್ತೇಜಿಸುತ್ತದೆ.
-ಇದರಲ್ಲಿ ಬಹುರಾಷ್ಟ್ರೀಯ ತಂಡಗಳು ಮತ್ತು ಬಾಹ್ಯಾಕಾಶ ಏಜೆನ್ಸಿಗಳ ಸಹಭಾಗಿತ್ವವಿದ್ದು, ಜಾಗತಿಕ ಮಟ್ಟದಲ್ಲಿ ಬಾಹ್ಯಾಕಾಶ ಸಂಬಂಧಿತ ಕಾರ್ಯಗಳಲ್ಲಿ ಸಹಭಾಗಿತ್ವವನ್ನು ಬೆಳೆಸುತ್ತದೆ.
ಒಟ್ಟಾರೆ ಆಕ್ಸಿಯಂ - 4 ಮಿಷನ್ ಭಾರತಕ್ಕೆ ಅತಿ ಮುಖ್ಯವಾಗಿದ್ದು, ಭಾರತದ ಇಸ್ರೋನ 2027 ರ ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಅತಿ ಮುಖ್ಯವಾದದ್ದು ಎಂದು ಭಾವಿಸಲಾಗಿದೆ.
.png&w=3840&q=75)