ಅಮೆರಿಕಾ: ಕೊಲ್ಕತ್ತಾದ ಲಕ್ನೋ ಮೂಲದ, ಭಾರತೀಯ ವಾಯುಪಡೆಯ ಅಧಿಕಾರಿ ಶುಭಾಂಶು ಶುಕ್ಲಾ, ಇತ್ತೀಚೆಗೆ ಉಡಾವಣೆಗೊಂಡ ಆಕ್ಸಿಯಂ-4 (Ax-4) ಮಿಷನ್‌ನಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸಿ ಇತಿಹಾಸ ನಿರ್ಮಿಸಿದ್ದಾರೆ. SpaceX Falcon 9 ರಾಕೆಟ್ ಮೂಲಕ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ತಲುಪುವ ಈ ಮಿಷನ್, ಭಾರತ ಸೇರಿದಂತೆ ನಾಲ್ಕು ರಾಷ್ಟ್ರಗಳ ಸಹಭಾಗಿತ್ವದಲ್ಲಿ ನಡೆದ ಮಾನವ ಬಾಹ್ಯಾಕಾಶಯಾನವಾಗಿದೆ.
.png)
Fflirtygo Men Graphic Print Cotton T-Shirt & Short Set for Men/Boys
✨ ಪರಿಚಯ ಮತ್ತು ಹಿನ್ನೆಲೆ:
ಹೆಸರು: ಶುಭಾಂಶು ಶುಕ್ಲಾ.
ಹುಟ್ಟು: 10 ಅಕ್ಟೋಬರ್ 1985 (39 years), ಲಕ್ನೋ.
ಮೂಲತಃ: ಲಕ್ನೋ, ಉತ್ತರ ಪ್ರದೇಶ.
ವೃತ್ತಿ: ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್.
ಪ್ರಮುಖ ಪಾತ್ರ: ಆಕ್ಸಿಯಂ-4 ಮಿಷನ್‌ನ ಪೈಲಟ್.
ಎಜುಕೇಶನ್(ಶಿಕ್ಷಣ): BSC from NDA(National Defence Academy) Khadakwasla (2005), Maharashtra.
M-tech - Indian Institute of Science (Bengaluru).
ಅಂತರರಾಷ್ಟ್ರೀಯ ಮಿಷನ್: ಭಾರತದಿಂದ ಭಾಗವಹಿಸುವ ಮೊದಲ ಖಾಸಗಿ ಮಾನವ ಬಾಹ್ಯಾಕಾಶ ಮಿಷನ್‌ನಲ್ಲಿ
ಶುಭಾಂಶು ಶುಕ್ಲಾ ಅವರ ಪಾಲ್ಗೊಳ್ಳುವಿಕೆ ಮಾತ್ರವಲ್ಲದೆ, ಈ ಮಿಷನ್ ಭಾರತದ ಬಾಹ್ಯಾಕಾಶ ಕನಸುಗಳಿಗೆ ಮಹತ್ವದ ಹೆಜ್ಜೆ, ವಿಶೇಷವಾಗಿ ಇಸ್ರೋ 2027 ರ ಗಗನಯಾನ್ ಯೋಜನೆಗೆ ಉತ್ಸಾಹ ತುಂಬುವ ಘಟನೆ ಎಂದು ಪರಿಗಣಿಸಲಾಗಿದೆ.
ಲಕ್ನೋ, ಜೂನ್ 25 – ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿ ಶುಭಾಂಶು ಶುಕ್ಲಾ ಅವರು ಇತಿಹಾಸ ನಿರ್ಮಿಸಿದ್ದಾರೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ತಲುಪಲು ಭಾರತದ ಪರವಾಗಿ ಭಾಗವಹಿಸಿದ ಮೊದಲ ಅಂತರಿಕ್ಷಯಾತ್ರಿಕರಾಗಿದ್ದಾರೆ.
ಈ ಮಿಷನ್ ಅನ್ನು ಖಾಸಗಿ ಸಂಸ್ಥೆ Axiom Space, SpaceX ಮತ್ತು NASA ಸಂಯುಕ್ತವಾಗಿ ನಡೆಸುತ್ತಿದ್ದು, ಭಾರತ, ಅಮೆರಿಕ, ಹಂಗೇರಿ ಮತ್ತು ಪೋಲಂಡ್ ದೇಶಗಳ ಅಂತರಿಕ್ಷಯಾತ್ರಿಕರು ಒಂದೇ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಭಾರತದ ಗಗನಯಾನ ಕನಸಿಗೆ ಹೆಜ್ಜೆ:
ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಹುದ್ದೆಯಲ್ಲಿರುವ ಶುಭಾಂಶು ಶುಕ್ಲಾ ಅವರು, ಕಳೆದ ಹಲವು ವರ್ಷಗಳಿಂದ ವೈಮಾನಿಕ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದು, ಬಾಹ್ಯಾಕಾಶ ಪೈಲಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಅವರ ಈ ಪಯಣವು ಭಾರತದ ಗಗನಯಾನ್ ಮಾನವ ಬಾಹ್ಯಾಕಾಶ ಮಿಷನ್ (2027) ಗಾಗಿ ಭವಿಷ್ಯ ನಿರ್ಮಿಸುವಂತಹ ಮಹತ್ವದ ಹೆಜ್ಜೆಯಾಗಿದ್ದು, ಇದು ಖಾಸಗಿ ಮತ್ತು ಸಾರ್ವಜನಿಕ ಬಾಹ್ಯಾಕಾಶ ಸಂಸ್ಥೆಗಳ ನಡುವಿನ ಸಹಕಾರದ ಯಶಸ್ವಿ ಮಾದರಿಯಾಗಿದೆ.
.png&w=3840&q=75)