Skip to main content
ವಿಡಿಯೋ
general

ಹೈರ್‌ ಕ್ಲಿಪ್‌ ಮತ್ತು ಪಾಕೆಟ್‌ ನೈಫ್ ಬಳಸಿ ಮಹಿಳೆಯ ಹೆರಿಗೆ ಮಾಡಿಸಿದ‌ ಆರ್ಮಿ ಆಫಿಸರ್‌!

By ಗಿರೀಶ್‌ ವಸಿಷ್ಟ ಬಿ.ಎಸ್‌
ಹೈರ್‌ ಕ್ಲಿಪ್‌ ಮತ್ತು ಪಾಕೆಟ್‌ ನೈಫ್ ಬಳಸಿ ಮಹಿಳೆಯ ಹೆರಿಗೆ ಮಾಡಿಸಿದ‌ ಆರ್ಮಿ ಆಫಿಸರ್‌!

ಅಬ್ಬಾ ಇದು ಹೇಗೆ ಸಾಧ್ಯ..?

ಲಕ್ನೋ: ರೈಲ್ವೆ ನಿಲ್ದಾಣದಲ್ಲಿ ಒಂದು ಜೀವ ಉಳಿಸಿದ ಸಾಹಸಮಯ ಘಟನೆ ನಡೆದಿದೆ. ಭಾರತೀಯ ಸೇನೆಯ ವೈದ್ಯಾಧಿಕಾರಿ ಲೆಫ್ಟಿನಂಟ್ ಕರ್ನಲ್ ಡಾ.ರೋಹಿತ್‌ ಬಚ್‌ವಾಲಾ, ತುರ್ತು ಪರಿಸ್ಥಿತಿಯಲ್ಲಿ ಹೆರಿಗೆ ಮಾಡಿಸಿ, ತಾಯಿ ಮತ್ತು ಮಗುವಿನ ಜೀವ ಉಳಿಸಿದ್ದಾರೆ.


ಘಟನೆ ಆಗುವ ವೇಳೆಗೆ ಹತ್ತಿರದ ಆಸ್ಪತ್ರೆ ಅಥವಾ ವೈದ್ಯಕೀಯ ನೆರವು ಲಭ್ಯವಿಲ್ಲದ ಕಾರಣ,  ಡಾ.ರೋಹಿತ್‌ ಅವರು ಪಾಕೆಟ್ ನೈಫ್, ಹೇರ್ ಕ್ಲಿಪ್ ಹಾಗೂ ಸೆನಿಟೈಜರ್‌ನ ನೆರವಿನಿಂದ ಪ್ಲಾಟ್‌ಫಾರ್ಮ್‌ನಲ್ಲಿಯೇ ಹೆರಿಗೆ ಮಾಡಿಸಿದರು. ಅವಶ್ಯಕವಾದ ಎಲ್ಲಾ ಮುನ್ನೆಚ್ಚರಿಕೆಗಳೊಂದಿಗೆ ಅವರು ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದರೆಂಬುದು ವರದಿಯಾಗಿದೆ.Vogaan Men's Polo Shirt and Shorts Set | Summer Fashion Short Sleeve Solid Zipper 2 Pieces Outfits for Men

“ಸಮಯವೇ ಇಲ್ಲದ ಪರಿಸ್ಥಿತಿ. ಮಗು ತುರ್ತು ಸ್ಥಿತಿಯಲ್ಲಿ ಜನಿಸಿತು. ನನ್ನ ಪಾಕೆಟ್‌ನಲ್ಲಿದ್ದ ಎಲ್ಲವನ್ನೂ ಉಪಯೋಗಿಸಿ ಹೆರಿಗೆ ಮಾಡಿದೆ,” ಎಂದು ಡಾ. ರೋಹಿತ್‌ ಹೇಳಿದ್ದಾರೆ. ತಾಯಿ ಮತ್ತು ಜನಿಸಿದ ಹೆಣ್ಣು ಮಗು ಇಬ್ಬರೂ ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಈ ಸಾಹಸ ಕಾರ್ಯಕ್ಕಾಗಿ ಡಾ. ರೋಹಿತ್‌ ಅವರಿಗೆ ಎಲ್ಲೆಡೆಯಿಂದ ಶ್ಲಾಘನೆ ಲಭಿಸುತ್ತಿದೆ.


ಹೀಗಾಗಿ ಭಾರತೀಯ ಸೇನೆಯ ವೈದ್ಯರು ಎಲ್ಲ ಸಮಯದಲ್ಲೂ ತಮ್ಮ ನಿಸ್ವಾರ್ಥ ಸೇವೆಯನ್ನು ನೀಡುತ್ತಿದ್ದಾರೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ.