Skip to main content
ವಿಡಿಯೋ
science

ಪಕ್ಷಿ ಡಿಕ್ಕಿ ಹೊಡೆದ ಆತಂಕ: ಪಾಟ್ನಾದ ವಿಮಾನ ನಿಲ್ದಾಣಕ್ಕೆ ಮರಳಿದ ಇಂಡಿಗೋ ವಿಮಾನ..!

By ವಿನುತ ಯು
ಪಕ್ಷಿ ಡಿಕ್ಕಿ ಹೊಡೆದ ಆತಂಕ: ಪಾಟ್ನಾದ ವಿಮಾನ ನಿಲ್ದಾಣಕ್ಕೆ ಮರಳಿದ ಇಂಡಿಗೋ ವಿಮಾನ..!

ಪಟ್ನಾದ ಜಯಪ್ರಕಾಶ್ ನಾರಾಯಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಇಂಡಿಗೋ ಏರ್‌ಲೈನ್ಸ್‌ ಪಟ್ನಾದಿಂದ ದೆಹಲಿ ಕಡೆಗೆ ಹೋಗುತ್ತಿದಂತಹ ವಿಮಾನವು, ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಪಕ್ಷಿ ಡಿಕ್ಕಿ ಹೊಡೆದಿದೆ, ಈ ಹಿನ್ನೆಲೆಯಲ್ಲಿ ವಿಮಾನವನ್ನು ಟೇಕ್‌ಆಫ್ ಮಾಡಬೇಕಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆ ಮಂಗಳವಾರ ಪಟ್ನಾದ ಜಯಪ್ರಕಾಶ್ ನಾರಾಯಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ವಿಮಾನವು ಹಾರಾಟ ಮಾಡಲು ಆರಂಭಿಸಿದ ಮರುಕ್ಷಣವೇ ಪಕ್ಷಿಯೊಂದು ವಿಮಾನಕ್ಕೆ ಡಿಕ್ಕಿ ಹೊಡೆದಿದೆ, ಈ ವಿಷಯವನ್ನು ವಿಮಾನ ಚಾಲನೆ ಮಾಡುವವರ ಗಮನಕ್ಕೆ ಬಂದ ತಕ್ಷಣವೇ ವಿಮಾನ ಸಂಚಾರ ನಿಯಂತ್ರಣ ಕೇಂದ್ರಕ್ಕೆ ತಿಳಿಸಿದ್ದಾರೆ. ಆ ತಕ್ಷಣವೇ ವಿಮಾನದಲ್ಲಿದ್ದ ಜನರ ಜೀವರಕ್ಷಣಾ ಕ್ರಮವನ್ನು ಗಮನದಲ್ಲಿಟ್ಟುಕೊಂಡು ವಿಮಾನವನ್ನು ಪಾಟ್ನಾಗೆ ಮರಳಿಸಿ ಸುಕ್ಷಿತವಾಗಿ ಇಳಿಸಿದ್ದಾರೆ.

ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಯವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸುರಕ್ಷಿತವಾಗಿದ್ದಾರೆ. ಈ ಘಟನೆಯಿಂದ ಆತಂಕಗೊಂಡಿದ್ದ ಪ್ರಾಯಣಿಕರನ್ನು ವಿಮಾನ ಸಿಬ್ಬಂದಿಯವರು ಶಾಂತಿಯುತವಾಗಿ ರಕ್ಷಿಸಿದ್ದಾರೆ. ವಿಮಾನ ಸಿಬ್ಬಂದಿಯವರ ಶಾಂತ ರೀತಿಯ ವರ್ತನೆ ಮತ್ತು ತೊಂದರೆಯಾದ ಸಂದರ್ಭದಲ್ಲಿ ಅವರ ಸಾಹಸಕ್ಕೆ ಪ್ರಯಾಣಿಕರು ಹೊಗಳಿದ್ದಾರೆ.

YOHO Bubbles Men Ortho slippers | Soft comfortable and stylish flip flop slippers for Men in exciting colors |Lightweight | Anti Skid | Daily Use Chappal

ಇಂಡಿಗೋ ಸಂಸ್ಥೆಯು ತಕ್ಷಣವೇ ಮತ್ತೊಂದು ವಿಮಾನ ವ್ಯವಸ್ಥೆ ಮಾಡಿದ್ದಾರೆ ಮತ್ತು ಎಲ್ಲಾ ರೀತಿಯ ಪರಿಶೀಲನೆಗಳನ್ನು ಹಾಗೂ ಸುರಕ್ಷತಾ ಕ್ರಮಗಳನ್ನು ನಡೆಸಿ ನಂತರ ದೆಹಲಿ ವಿಮಾನಯಾನವನ್ನು ಪುನರಾರಂಭಗೊಳಿಸಿದೆ.