ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಐಸಿಸಿ ಒಬಿಸಿ ಸಲಹಾ ಮಂಡಳಿಯಲ್ಲಿ ಸ್ಥಾನ ಸಿಕ್ಕಿದ್ದು, ಇದನ್ನು ಕೆಲವರು ರಾಜಕೀಯವಾಗಿ ಬೇರೆ ರೀತಿ ಅರ್ಥೈಸುತ್ತಿದ್ದಾರೆ. ಆದರೆ, ಅವರ ಈ ಜವಾಬ್ದಾರಿಯ ಹಿಂದೆ ಯಾವುದೇ ಸಿಎಂ ಸ್ಥಾನ ಬದಲಾವಣೆ ಅಥವಾ ರಾಜೀನಾಮೆ ಎಂಬ ಮಾತುಗಳಲ್ಲಿ ತಾತ್ತ್ವಿಕತೆಯಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.ಸಚಿವ ಸತೀಶ್ ಜಾರಕಿಹೊಳಿ ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ಸಿದ್ದರಾಮಯ್ಯರನ್ನು ಎಐಸಿಸಿ ಒಬಿಸಿ ಸಲಹಾ ಮಂಡಳಿಗೆ ನೇಮಕ ಮಾಡಿದ ಪ್ರಕರಣವನ್ನು ಸಮರ್ಥಿಸಿದರು. ಅವರು ಒಬಿಸಿ ವರ್ಗದ ಪ್ರಬಲ ಮುಖಂಡರು. ಅವರಿಗಿರುವ ಅನುಭವ ಮತ್ತು ಗ್ರಾಸ್ ರೂಟ್