ಹರಿಯಾಣ: ಬುಧವಾರದಂದು ಹರಿಯಾಣಾದ ಕೆಲವು ಭಾಗಗಳಲ್ಲಿ ಹೆಚ್ಚಿನ ಮಟ್ಟದ ಭೂಕಂಪ ಸಂಭವಿಸಿದೆ, ಇದರಿಂದ ಡೆಲ್ಲಿ–ನ್ಯಾಷನಲ್ ಕ್ಯಾಪಿಟಲ್ ರಿಜಿಯನ್ (NCR) ಪ್ರದೇಶದ ಸ್ಥಳೀಯರಲ್ಲಿ ಆತಂಕ ಮೂಡಿದೆ. ಭೂಕಂಪದ ಮಟ್ಟವು ಎತ್ತರದ ಕಟ್ಟಡಗಳು ಮತ್ತು ಮನೆಗಳು ಭೂಕಂಪಕ್ಕೆ ನಲುಗಿಹೋಗಿದ್ದವು. ಕೆಲವೇ ಸೆಕೆಂಡುಗಳ ಕಾಲ ಭೂಕಂಪದ ಅನುಭವವಾಗಿದ್ದು, ಡೆಲ್ಲಿ, ಗುರುಗ್ರಾಮ, ನೋಯ್ಡಾ ಹಾಗೂ ಸುತ್ತಲಿನ ಪ್ರದೇಶದ ಜನರು ಭಯದಿಂದ ತಮ್ಮ ಮನೆಗಳು ಮತ್ತು ಕಚೇರಿಗಳಿಂದ ಹೊರಗೆ ಓಡಿದರು.
ಭೂಕಂಪನ ಶಾಸ್ತ್ರೀಯ ಸಂಸ್ಥೆಗಳ ಮಾಹಿತಿಯಂತೆ, ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.8 ರಿಂದ 6.2 ರಷ್ಟು ಕಂಡುಬಂದಿದೆ, ಭೂಕಂಪದ ಕೇಂದ್ರಬಿಂದು ಉತ್ತರ ಹರಿಯಾಣದ ಬಳಿ ಇದೆ. ಭೂಕಂಪದ ಅನುಭವವು ಪಂಜಾಬ್, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಕೂಡ ಕಂಡುಬಂದಿರುವುದು ವರದಿಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸಾವು-ನೋವು ಅಥವಾ ಯಾವುದೇ ರೀತಿಯ ಕಟ್ಟಡಗಳ ನಾಶವಾಗಿಲ್ಲ, ಹಲವಾರು ವಾಸಸ್ಥಳಗಳು ಮತ್ತು ಕಮರ್ಷಿಯಲ್ ಕಟ್ಟಡಗಳಲ್ಲಿ ಆತಂಕ ಮತ್ತು ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ceiling fanಗಳು ನಡುಗಿರುವ ದೃಶ್ಯ, ಮನೆಯಲ್ಲಿ-ಕಛೇರಿಗಳಲ್ಲಿ ಇದ್ದಂತಹ ವಸ್ತುಗಳು ನಡುಗಿ ಚೆಲ್ಲಾ-ಪಿಲ್ಲಿಯಾಗಿರುವ ದೃಶ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ..
ಜನರಲ್ಲಿ ಆತಂಕ ಮತ್ತು ಭಯದ ವಾತಾವರಣ ಮೂಡಿರುವುದರಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜನರಿಗೆ ಶಾಂತ ರೀತಿಯಲ್ಲಿ ವರ್ತಿಸುವಂತೆ ಮತ್ತು ದುರ್ಬಲವಾಗಿರುವ ಕಟ್ಟಡಗಳಲ್ಲಿ ಉಳಿದುಕೊಳ್ಳಬೇಕೆಂದು ಮತ್ತು ಬೇಕಾದ ಎಲ್ಲಾ ರೀತಿಯ ಆಹಾರಗಳನ್ನು ಹಾಗೂ ಮೂಲಸೌಕರ್ಯಗಳನ್ನು ನೀಡುವಂತೆ ಸಲಹೆ ನೀಡಿದೆ.