ಬೆಳಗಾವಿ : ಇನ್ಸ್ಟಾ ಗ್ರಾಂ ನಲ್ಲಿ ಪತ್ನಿಗೆ ಅಶ್ಲೀಲ ಮೆಸೇಜ್ ಕಳಿಸಿದ ಕಾಲೇಜು ಯುವಕನಿಗೆ ಹಾಸ್ಯನಟ ಸಂಜು ಬಸಯ್ಯ ಸಮಾಜಕ್ಕೆ ಮಾದರಿಯಾಗುವಂತೆ ಬುದ್ದಿವಾದ ಹೇಳಿದ್ದಾರೆ.
ವಿಜಯನಗರ ಮೂಲದ ಯುವಕನೊಬ್ಬ ಸಂಜು ಬಸಯ್ಯ ಅವರ ಪತ್ನಿ ಪಲ್ಲವಿಗೆ ಇನ್ಸ್ಟಾಗ್ರಾಂ ನಲ್ಲಿ ಅಶ್ಲೀಲ ಮೆಸೇಜ್ ಮತ್ತು ಫೋಟೋ ಕಳಿಸುತ್ತಿದ್ದ. ಈ ವಿಷಯ ಗಮನಕ್ಕೆ ಬಂದರೂ ಸಂಜು ಬಸಯ್ಯ ತ ಕಳೆದುಕೊಂಡಿರಲಿಲ್ಲ. ಈ ವಿಷಯ ಗಮನಕ್ಕೆ ಬಂದರೂ ಕೂಡ ಸಂಜು ಬಸಯ್ಯ ತಾಳ್ಮೆಯನ್ನು ಕಳೆದುಕೊಂಡಿರಲಿಲ್ಲ.
ಪೊಲೀಸರ ಬಳಿ ದೂರು ನೀಡಿದ್ದ ದಂಪತಿಗಳು ಆರೋಪಿಯಿಂದ ಮುಕ್ತಿ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಪೊಲೀಸರು ಯುವಕನನ್ನು ಬಂಧಿಸಿ ಕರೆತಂದಾಗ ತಾಳ್ಮೆಯಿಂದ ನಡೆದುಕೊಂಡ ಸಂಜು ಬಸಯ್ಯ, ಕಾಲೇಜು ವಿದ್ಯಾರ್ಥಿಯಾಗಿರುವುದರಿಂದ ಆತನ ಭವಿಷ್ಯ ಹಾಳಾಗಬಾರದೆಂದು ಯುವಕನಿಗೆ ಬುದ್ದಿವಾದ ಹೇಳಿ ಕಳಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಲಿವಿನ್ ರಿಲೇಷನ್ ಶಿಪ್ ಗೆಳತಿ ಪವಿತ್ರಾಗೌಡ ಗೆ ಅಶ್ಲೀಲ ಮೆಸೇಜ್ ಕಳಿಸಿದ್ದನೆಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ನಟ ದರ್ಶನ್ ಗ್ಯಾಂಗ್ ಅಪಹರಿಸಿ ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಲೆಮಾಡಿರುವ ಆರೋಪದ ಮೇಲೆ ಜೈಲು ಸೇರಿದ್ದರು. ಇದನ್ನು ಆದರ್ಶವಾಗಿ ತೆಗೆದುಕೊಂಡು ಹಲವು ಯುವಕರು ಇತ್ತೀಚಿಗೆ ಇದನ್ನೇ ಪ್ರೇರಣೆಯಾಗಿ ಪಡೆದುಕೊಂಡು ಹಲವಡೆ ಹಲ್ಲೆ ನಡೆಸಿದ ಪ್ರಕರಣಗಳು ವರದಿಯಾಗಿವೆ.