ಕರ್ನಾಟಕ: ಭಾರತದ ಪ್ರಧಾನ ಮಂತ್ರಿಯಾಗಿದ್ದ ದೇವೇಗೌಡರು ತಮ್ಮ ಅಪಾರ ಅನುಭವದಿಂದ 1999 ರಲ್ಲಿ ಜಾತ್ಯತೀತ ಜನತಾದಳ ಪಕ್ಷವನ್ನು ಕಟ್ಟಿದರು, ಕರ್ನಾಟಕದಲ್ಲಿ ಒಕ್ಕಲಿಗ ವರ್ಗ ಹೆಚ್ಚಾಗಿರುವುದರಿಂದ ಪಕ್ಷಕ್ಕೆ ಆಗಿನ ಕಾಲದಲ್ಲಿ ಅಭೂತಪೂರ್ವ ಯಶಸ್ಸು ದೊರೆತಿತ್ತು, ಆದರೆ 2008ರ ನಂತರ ಜೆಡಿಎಸ್ ಪಕ್ಷ ತನ್ನ ವರ್ಚಸ್ಸನ್ನು ಕಳೆದುಕೊಂಡಿತಾ, ಎಂಬ ಪ್ರಶ್ನೆ ಎದುರಾಗುತ್ತದೆ..
ಕರ್ನಾಟಕದಲ್ಲಿ ಕುಮಾರಸ್ವಾಮಿಯವರ ನೆತೃತ್ವದ ಜಾತ್ಯತೀತ ಜನತಾದಳ ಪಕ್ಷ ಸದ್ಯ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ, ಹೀಗಾಗಿ ಒಂದಾನೊಂದು ಕಾಲದಲ್ಲಿ ಕಿಂಗ್ ಮೇಕರ್ ಆಗಿದ್ದ ಜೆಡಿಎಸ್ ಪಕ್ಷದ ವರ್ಚಸ್ಸು ಕಡಿಮೆ ಆಯ್ತಾ ಅನ್ನುವ ಪ್ರಶ್ನೆ ಈಗ ಎದ್ದು ಕಾಣುತ್ತಿದೆ ..Fflirtygo Men Graphic Print Cotton T-Shirt & Short Set for Men/Boys
ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ, ಪ್ರಾದೇಶಿಕ ಪಕ್ಷಗಳು ಭಾರಿ ಮುನ್ನಡೆಯೊಂದಿಗೆ ಆಯಾ ರಾಜ್ಯಗಳಲ್ಲಿ ಸರ್ಕಾರವನ್ನು ರಚಿಸಿ ಆಡಳಿತ ನಡೆಸುತ್ತಿದೆ, ಉದಾಹರಣೆಗೆ ತಮಿಳುನಾಡಿನ ಡಿಎಂಕೆ, ಆಂಧ್ರಪ್ರದೇಶದ ಟಿಡಿಪಿ, ಹೀಗೆ ಪ್ರಾದೇಶಿಕ ಪಕ್ಷಗಳು ಆಡಳಿತದ ಚುಕ್ಕಾಣಿ ಹಿಡಿದು ಮುನ್ನುಗ್ಗುತ್ತಿದೆ, ಆದರೆ ಕರ್ನಾಟಕದಲ್ಲಿದ್ದ ಜಾತ್ಯತೀತ ಜನತಾದಳ ಪಕ್ಷದ ಸ್ಥಿತಿಯ ಬಗ್ಗೆ ಯೋಚನೆ ಮಾಡುವ ಪರಿಸ್ಥಿತಿ ಕಾರ್ಯಕರ್ತರಿಗೆ ಎದುರಾಗಿದೆ.
2006 ರಲ್ಲಿ ಕಾಂಗ್ರೆಸ್ ಸರ್ಕಾರದ ಜೊತೆ ಮೈತ್ರಿ ಮಾಡಿಕೊಂಡ ಜೆಡಿಎಸ್ ಸರ್ಕಾರವನ್ನು ರಚಿಸಿತ್ತು. ನಂತರ,ಬಿನ್ನಾಬಿಪ್ರಾಯದ ಹಿನ್ನೆಲೆ, ಕೊಟ್ಟ ಬೆಂಬಲವನ್ನು ಹಿಂಪಡೆದುಕೊಂಡು ಬಿಜೆಪಿಯೊಂದಿಗೆ ಸರ್ಕಾರವನ್ನು ರಚಿಸಿತ್ತು, ಆದರೆ ಯಡಿಯೂರಪ್ಪ ಅವರ ಜೊತೆ 20-20 ಮಾದರಿಯ ಸರ್ಕಾರವನ್ನು ರಚಿಸಿದ ಜೆಡಿಎಸ್, ಕುಮಾರಸ್ವಾಮಿಯವರು ಅಷ್ಟೆ ಸಮಯದಲ್ಲಿ ಹಲವು ರೈತಪರ ಯೋಜನೆಗಳನ್ನು ನೀಡಿದರು, ಅದನ್ನು ಇಂದಿಗೂ ನಾವು ಸ್ಮರಿಸಲೇಬೇಕು, ನಂತರ ಮಾತು ನೀಡಿದ ಹಾಗೆ 20 ತಿಂಗಳ ನಂತರ ಅಧಿಕಾರವನ್ನು ಹಸ್ತಾಂತರಿಸಲಿಲ್ಲ, ಈ ಕಾರಣದಿಂದಾಗಿ ಬಿಜೆಪಿ, ಜೆಡಿಎಸ್‌ನ ಜೊತೆ ಮೈತ್ರಿಯನ್ನು ಮುರಿದುಕೊಂಡಿತು, ನಂತರ ಕರ್ನಾಟಕ ರಾಜ್ಯ ಮತ್ತೊಂದು ಚುನಾವಣೆಗೆ ಸಜ್ಜಾಗಿತ್ತು.
2008ರಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿಯಿತು, ಅದಕ್ಕೆ ಕಾರಣವೇ ಜೆಡಿಎಸ್‌ನ ಅಂದಿನ ನಿರ್ಧಾರ ಎಂದರೆ ತಪ್ಪಿಲ್ಲ. ಸದ್ಯದ ರಾಜ್ಯ ರಾಜಕಾರಣದಲ್ಲಿ ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಆದರೆ ಕರ್ನಾಟಕದಲ್ಲಿದ್ದು ಪಕ್ಷ ಸಂಘಟನೆ ಮಾಡಬೇಕಿದ್ದ ಅವರು ರಾಜ್ಯದಲ್ಲಿಲ್ಲ, ಹೀಗಾಗಿ ರಾಜ್ಯದ ಜೆಡಿಎಸ್ ಕಾರ್ಯಕರ್ತರಲ್ಲಿ ಏಕಾಂಗಿತನ ಮನೆ ಮಾಡಿರಬಹುದು. ಜೆಡಿಎಸ್‌ನಲ್ಲಿದ್ದ ಅದೆಷ್ಟೋ ನಾಯಕರು ಕಾಂಗ್ರೆಸ್ನತ್ತ ಮುಖ ಮಾಡಿದ್ದರು, ಈಗ ಅಲ್ಲಿ ಸಚಿವರಾಗಿ, ಶಾಸಕರಾಗಿ ಆಡಳಿತ ನಡೆಸುತ್ತಿದ್ದಾರೆ, ಹೀಗೆ ಪ್ರಮುಖ ನಾಯಕರ ಪಕ್ಷ ಬದಲಾವಣೆಯನ್ನು ತಡೆಯುವಲ್ಲಿ ಕುಮಾರಸ್ವಾಮಿಯವರು ಎಡವಿದರು ಎನ್ನುವ ಮಾತುಗಳು ಸಹ ಇವೆ.
ಇನ್ನೂ ಪ್ರಾದೇಶಿಕ ಪಕ್ಷದ ಪ್ರಾಮುಖ್ಯತೆಯ ಬಗ್ಗೆ ಹೇಳುವುದಾದರೆ, ಪ್ರತಿಯೊಂದು ನಿರ್ಧಾರಕ್ಕೂ ಹೈಕಮಾಂಡ್ನ ಆಜ್ಞೆಗಾಗಿ ಕಾಯುವ ರಾಷ್ಟ್ರೀಯ ಪಕ್ಷಗಳಿಗಿಂತ, ಪ್ರಾದೇಶಿಕ ಪಕ್ಷಗಳು ರಾಜ್ಯದ ಅಭಿವೃದ್ಧಿಗೆ ಉತ್ತಮ ಎಂದು ಜನರ ಅಭಿಪ್ರಾಯ, ಆದರೆ ಕರ್ನಾಟಕದಲ್ಲಿ ಸದ್ಯಕ್ಕೆ ಅದು ಸಾಧ್ಯವಿಲ್ಲದಂತಾಗಿದೆ.
ಒಂದು ಪಕ್ಷ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದೇ ಇದ್ದಲ್ಲಿ, ತನ್ನ ಅಸ್ತಿತ್ವವನ್ನು ಕರ್ನಾಟಕದಲ್ಲಿ ಕಳೆದುಕೊಳ್ಳುತ್ತಿತ್ತು ಎಂಬುವ ಮಾತುಗಳು ಸಹ ಕೇಳಿಬಂದಿದೆ. ಅದೇನೇ ಇರಲಿ 3 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ ಅನುಭವವಿರುವ ನಿಖಿಲ್ ಕುಮಾರಸ್ವಾಮಿ ಅವರು ಕರ್ನಾಟಕ ರಾಜ್ಯದಲ್ಲಿ ಜೆಡಿಎಸ್‌ನ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ನಿಖಿಲ್ ಅವರಿಗೆ ಅನುಭವದ ಕೊರತೆ ಇರಬಹುದು, ಆದರೆ ಅವರು ಯುವನಾಯಕ ಆದ್ದರಿಂದ ಮನಸ್ಸಿಟ್ಟು ಪಕ್ಷ ಸಂಘಟನೆ ನಡೆಸಿದ್ದೇ ಆದಲ್ಲಿ, ಮುಂದಿನ ಕೆಲವು ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ, ಆಡಳಿತದ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ನಂಬಿಕೆ, ಹಠ, ಛಲ ಇರಲೇಬೇಕು ಅಷ್ಟೆ…