Skip to main content
ವಿಡಿಯೋ
1/2
business

ಟೆಸ್ಲಾ ಭಾರತ ಪ್ರವೇಶ: ಮುಂಬೈನಲ್ಲಿ ಮೊದಲ ಶೋರೂಮ್ ಉದ್ಘಾಟನೆ, ಮಾಡೆಲ್‌ Y ಕಾರಿನ ಬೆಲೆ ₹61 ಲಕ್ಷ!

By ಶ್ರವಂತಿ. ಆರ್‌
ಟೆಸ್ಲಾ ಭಾರತ ಪ್ರವೇಶ: ಮುಂಬೈನಲ್ಲಿ ಮೊದಲ ಶೋರೂಮ್ ಉದ್ಘಾಟನೆ, ಮಾಡೆಲ್‌ Y ಕಾರಿನ ಬೆಲೆ ₹61 ಲಕ್ಷ!

ಟೆಸ್ಲಾ ತನ್ನ ಭಾರತೀಯ ಎಕ್ಸ್ ಖಾತೆಯಲ್ಲಿ "Coming soon" ಎಂಬ ಸಂದೇಶದೊಂದಿಗೆ ಜುಲೈ 2025ರಲ್ಲಿ ಭಾರತ ಪ್ರವೇಶದ ಸೂಚನೆ ನೀಡಿತ್ತು.

ಇನ್‌ಸೈಟ್‌ರಶ್‌: ಎಲಾನ್ ಮಸ್ಕ್ ನೇತೃತ್ವದ ಎಲೆಕ್ಟ್ರಿಕ್ ವಾಹನ ತಯಾರಿಕಾ ದೈತ್ಯ ಟೆಸ್ಲಾ ಇಂದು ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿಲಿದೆ. ಮುಂಬೈ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಮೇಕರ್ ಮ್ಯಾಕ್ಸಿಟಿ ಮಾಲ್‌ನಲ್ಲಿ ಟೆಸ್ಲಾ ತನ್ನ ಮೊದಲ ಶೋರೂಮ್ ಉದ್ಘಾಟಿಸುತ್ತಿದೆ.


Beats Powerbeats Pro - BluetoothWireless Earbuds - Up to 9H Battery Life, Up to 24H w Charging Case, Sweat Resistant, Apple H1 Chip, Built in Microphone, Apple & Android Compatible - Black

ಈ ಶೋರೂಮ್ ಉದ್ಘಾಟನೆಯ ಜೊತೆಗೆ ಟೆಸ್ಲಾ ಭಾರತದಲ್ಲಿ ಮಾರಾಟಕ್ಕೆ ತರಲಿರುವ ಬಹುನಿರೀಕ್ಷಿತ ಮಾಡೆಲ್‌ Y ಕಾರಿನ ಬೆಲೆಯನ್ನೂ ಪ್ರಕಟಿಸಿದೆ. ಮಾಡೆಲ್‌ Y ಕಾರಿನ ಆನ್-ರೋಡ್ ಬೆಲೆ ₹61 ಲಕ್ಷ ಆಗಿದ್ದು, ರಿಯರ್-ವೀಲ್‌ ಡ್ರೈವ್ ಮಾದರಿಯ ನಗದು ಬೆಲೆ ₹59.89 ಲಕ್ಷ ಎಂದು ಕಂಪನಿ ಪ್ರಕಟಿಸಿದೆ. ಈ ತಿಂಗಳ ಆರಂಭದಲ್ಲಿ ಟೆಸ್ಲಾ ತನ್ನ ಭಾರತೀಯ ಎಕ್ಸ್  ಖಾತೆಯಲ್ಲಿ "Coming soon" ಎಂಬ ಸಂದೇಶದೊಂದಿಗೆ ಜುಲೈ 2025ರಲ್ಲಿ ಭಾರತ ಪ್ರವೇಶದ ಸೂಚನೆ ನೀಡಿತ್ತು. ಇದು ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯ ಬೆಳವಣಿಗೆಯತ್ತ ಟೆಸ್ಲಾ ಕಂಪನಿಯ ಮೊದಲ ಹೆಜ್ಜೆಯಾಗಿದೆ.

ಶೋರೂಮ್ ಉದ್ಘಾಟನೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಟೆಸ್ಲಾಗೆ ಆತ್ಮೀಯವಾಗಿ ಸ್ವಾಗತ ಕೋರಿದ್ದಾರೆ. "ಇದು ಕೇವಲ ಶೋರೂಮ್ ಉದ್ಘಾಟನೆಯಲ್ಲ, ಇದು ಭಾರತಕ್ಕೆ ಅದು ಕೂಡ ಮುಂಬೈ, ಮಹಾರಾಷ್ಟ್ರ ಅಂದರೆ ಅನ್ವೇಷಣೆ ಹಾಗು ಅಭಿವೃದ್ದಿಯ ಸ್ಥಳಕ್ಕೆ  ಆಗಮನಿಸಿದೆ. ಟೆಸ್ಲಾ ಕೇವಲ ಕಾರ್ ಕಂಪನಿಯಲ್ಲ, ಅದು ನಾವೀನ್ಯತೆ ಮತ್ತು ಸುಸ್ಥಿರತೆಯ ಸಂಕೇತವಾಗಿದೆ," ಎಂದು ಫಡ್ನವೀಸ್ ಹೇಳಿದರು.


ಟೆಸ್ಲಾದ ಭವಿಷ್ಯದ ಯೋಜನೆಗಳ ಬಗ್ಗೆ ಸಾಕಷ್ಟು ಊಹಾಪೋಹಗಳ ನಡುವೆ, ಕಳೆದ ತಿಂಗಳು ಕೇಂದ್ರ ಭಾರಿ ಕೈಗಾರಿಕೆಗಳ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, "ಟೆಸ್ಲಾ ಈ ಹೊತ್ತಿಗೆ ಭಾರತದಲ್ಲಿ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಆಸಕ್ತಿ ತೋರಿಸಿರುವುದಿಲ್ಲ. ಅವರು ಕೇವಲ ತಮ್ಮ ಕಾರುಗಳನ್ನು ಇಲ್ಲಿ ಮಾರಾಟ ಮಾಡಲು ಬಯಸುತ್ತಿದ್ದಾರೆ," ಎಂದು ಸ್ಪಷ್ಟಪಡಿಸಿದರು.