ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತದ ಅಧಿಕೃತ ತನಿಖಾ ವರದಿಗೆ ಭಾರತೀಯ ಕಾಮರ್ಶಿಯಲ್ ಪೈಲಟ್‌ಗಳ ಸಂಘ (ICPA) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. "ತಂತ್ರಪೂರ್ಣ ಹಾಗೂ ಕಾರ್ಯಪದ್ಧತಿಗಳ ಪರಿಶೀಲನೆಯಿಲ್ಲದೆ ಪೈಲಟ್‌ಗಳಿಗೆ ನೇರವಾಗಿ ಹೊಣೆಹೊರಿಸುವ ಪ್ರಯತ್ನ ಈ ವರದಿಯಲ್ಲಿ ಕಂಡು ಬರುತ್ತಿದೆ" ಎಂದು ಸಂಘ ಆರೋಪಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ICPA, ಪೈಲಟ್‌ಗಳನ್ನು ಮಾತ್ರ ನಿಂದಿಸುವುದು ನ್ಯಾಯವಲ್ಲ ಎಂದು ಹೇಳಿದ್ದಾರೆ, ವಿಮಾನ ನಿಲ್ದಾಣದ ಮೂಲಸೌಕರ್ಯ, ವಿಮಾನ ಸಂಸ್ಥೆಯ ನಿರ್ವಹಣಾ ದೋಷಗಳು, ನಿಯಂತ್ರಣಾಧಿಕಾರಿಗಳ ನಿರ್ಧಾರಗಳು ಹಾಗೂ ಶಿಸ್ತಿನ ಕೊರತೆಯಂತಹ ಅಂಶಗಳೂ ಸಮಾನವಾಗಿ ಪರಿಶೀಲನೆಯಲ್ಲಿರಬೇಕು ಎಂದು ಹೇಳಿಕೆ ನೀಡಿದ್ದಾರೆ.
ಅದರಲ್ಲೂ ಹೆಚ್ಚು ಮಹತ್ವದ ವಿಷಯವೆಂದರೆ, ಈ ರೀತಿಯ ಏಕಪಕ್ಷೀಯ ವರದಿಗಳು ವಿಮಾನಯಾನ ಭದ್ರತಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಕುಗ್ಗಿಸಬಹುದೆಂಬ ಆತಂಕವನ್ನು ICPA ವ್ಯಕ್ತಪಡಿಸಿದೆ. "ಈ ಪ್ರಕ್ರಿಯೆಗಳು ಪಾಠ ಕಲಿಯುವ ಅವಕಾಶವನ್ನೇ ಕಿತ್ತುಕೊಳ್ಳುತ್ತವೆ" ಎಂದು ಎಚ್ಚರಿಕೆ ನೀಡಿದೆ.
ಈ ಹಿನ್ನೆಲೆಯಲ್ಲಿ, ಈ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ತಜ್ಞರ ಸಲಹೆಗಳನ್ನು ಪರಿಗಣಿಸಿ, ವರದಿಯನ್ನು ಮರುಪರಿಶೀಲಿಸುವಂತೆ ವಿಮಾನಯಾನ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. "ಸತ್ಯವನ್ನು ಗೊತ್ತುಮಾಡುವ ಪ್ರಾಮಾಣಿಕ ಪ್ರಯತ್ನವೇ ಭದ್ರತಾ ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ರೂಪಿಸಬಲ್ಲದು" ಎಂದು ಅದು ಸ್ಪಷ್ಟಪಡಿಸಿದೆ.