ಇನ್‌ಸೈಟ್‌ರಷ್: ಈಗಂತೂ ಎಲ್ಲಿ ನೋಡಿದರು ಎಲೆಕ್ಟ್ರಿಕ್ ಸ್ಕೂಟರ್/ಕಾರುಗಳದ್ದೆ ಕಾರುಬಾರು, ಬಂದು ಪಕ್ಕದಲ್ಲಿ ನಿಂತಮೇಲೆಯೆ ಎಲೆಕ್ಟ್ರಿಕ್ ಸ್ಕೂಟರ್ ಅಥವ ಕಾರು ಎಂದು ಪಾದಚಾರಿಗಳಿಗೆ ತಿಳಿಯುತ್ತದೆ, ಅಷ್ಟು ನಿಶ್ಯಬ್ದವಾಗಿರುತ್ತವೆ ಈ ಎಲೆಕ್ಟ್ರಿಕ್ ವಾಹನಗಳು. ಈ ಹಿಂದೆ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ಎಲೆಕ್ಟ್ರಿಕ್ ವಾಹನಗಳು ಈಗ ಹಳ್ಳಿಗಳಿಗೂ ವ್ಯಾಪಿಸಿದೆ, ಎಲೆಕ್ಟ್ರಿಕ್ ವಾಹನಗಳ ಬಗ್ಗೆ ವಿಮರ್ಶಿಸುವುದಾದರೆ ಮೊದಮೊದಲು ಕೆಲವೊಂದು ಕಂಪನಿಗಳು ಮಾತ್ರ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಕೆ ಮಾಡುತ್ತಿತ್ತು, ಆದರೆ ಈಗ ಸುಮಾರು 30ಕ್ಕೂ ಅಧಿಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್/ಬೈಕ್ ಮತ್ತು ಕಾರುಗಳ ನಿರ್ಮಾಣ ಮಾಡುತ್ತಿದೆ.Safari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women
ಇನ್ನು ಪೆಟ್ರೋಲ್ ಬೈಕ್, ಸ್ಕೂಟರ್, ಮತ್ತು ಕಾರ್‌ಗಳು, ಅದೆಷ್ಟೇ ಎಲೆಕ್ಟ್ರಿಕ್ ವಾಹನಗಳು ಬಂದರೂ ಪೆಟ್ರೋಲ್ ಅವಲಂಬಿತ ವಾಹನಗಳು ಇಂದಿಗೂ ಮಾರುಕಟ್ಟೆಯಲ್ಲಿ ಅಧಿಕವಾಗಿ ಚಲಾವಣೆಯಲ್ಲಿದೆ. ಅದಕ್ಕೆ ಕಾರಣಗಳು ಹಲವಾರು ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಇಲ್ಲಿ ನೋಡೋಣ.
ಎಲೆಕ್ಟ್ರಿಕ್ ಸ್ಕೂಟರ್/ಬೈಕ್-
ಅಂಕಿ ಅಂಶಗಳ ಪ್ರಾಕಾರ 2023 ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಹಿವಾಟು 1.7 ಮಿಲಿಯನ್ ಇದ್ದು 2024 ರಲ್ಲಿ 2 ಮಿಲಿಯನ್ ಸ್ಕೂಟರ್ಗಳು ಖರೀದಿಯಾಗಿದೆ, ಎಲೆಕ್ಟ್ರಿಕ್‌ಸ್ಕೂಟರ್‌ಗಳ ಬೆಲೆ ತುಸು ಹೆಚ್ಚಿದ್ದರು(ಸುಮಾರು 80000 ಸಾವಿರದಿಂದ ಶುರು) ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರುಕಟ್ಟಯಲ್ಲಿ ಜನಪ್ರಿಯವಾಗಿ ಮುನ್ನುಗ್ಗುತ್ತಿದೆ ಅದಕ್ಕೆ ಕಾರಣ ಹಲವಾರು, ಅದರಲ್ಲಿ ಪ್ರಮುಖವಾದವುಗಳೆಂದರೆ.
– ಒಮ್ಮೆ ಖರೀದಿಸಿದರೆ ಸಾಕು, ಕಡಿಮೆ ನಿರ್ವಹಣಾ ವೆಚ್ಚ.
-ಆರಾಮಧಾಯಕ ಡ್ರೈವಿಂಗ್.
-ಶಬ್ದ ಮಾಲಿನ್ಯವಿಲ್ಲ.
-ಕಡಿಮೆ ಖರ್ಚಿನಲ್ಲಿ ಹೆಚ್ಚು ದೂರ ಕ್ರಮಿಸುವಿಕೆ.
ಕೆಲವೊಂದು ನಕಾರಾತ್ಮಕ ಅಂಶಗಳನ್ನು ನಾವು ನೊಡುವುದಾದರೆ-
-ಬ್ಯಾಟರಿ ಚಾಲಿತವಾಗಿರುವುದರಿಂದ ಶಾರ್ಟ್‌ಸರ್ಕ್ಯೂಟ್ ಆಗುವ ಸಂಭವವಿದೆ.
-ಬಿಸಿಲು ತಾಪಮಾನ ಹೆಚ್ಚಿರುವ ಕಡೆ ಬ್ಯಾಟರಿಗಳು ಸಿಡಿಯುವ ಸಂಭವ.
-ಕೆಟ್ಟುಹೋದ ಬ್ಯಾಟರಿ ಬದಲಿಸಲು ಹೆಚ್ಚು ಹಣವನ್ನು ತೆರಬೇಕು.
-ಒಮ್ಮೆ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್‌ಮಾಡಲು ಸುಮಾರು 2-3 ಘಂಟೆಯ ಸಮಯ ಹಿಡಿಯತ್ತದೆ.
-ಬ್ಯಾಟರಿಯನ್ನು ಚಾರ್ಜ್‌ಮಾಡಲು ಸಮಯದ ಆಭಾವದ ಜೊತೆ ಚಾರ್ಜ್ ಪಾಯಿಂಟ್‌ಗಳ ಕೊರತೆ ಇದೆ
-ಆದ್ದರಿಂದ ದೂರದ ಪ್ರಯಾಣ ಕಷ್ಟ.
ಮಾಲಿನ್ಯದ ವಿಚಾರವನ್ನು ವಿಮರ್ಶಿಸುವುದಾದರೆ- ಎಲೆಕ್ಟ್ರಿಕ್‌ಸ್ಕೂಟರ್‌ಗಳಲ್ಲಿ ಬಳಸುವ ಬ್ಯಾಟರಿಗಳನ್ನು ಮರುಬಳಕೆ ಮಾಡುವುದರಿಂದ ಪರಿಸರ ಮಾಲಿನ್ಯವನ್ನು ಕಡಿಮೆಮಾಡಬಹುದು..ಹಾಗೂ ಬೈಕ್‌ಗಳ ಚಾಲನೆಯಲ್ಲಿ ವಾಯುಮಾಲಿನ್ಯದ ಅಂಶ ತುಂಬಾ ಕಡಿಮೆ ಇದೆ ಎಂದು ಅಧ್ಯಯನದಲ್ಲಿ ತಿಳಿದಿದೆ.
ಎಲೆಕ್ಟ್ರಿಕ್ ಕಾರುಗಳು-
ಇನ್ನೂ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ತಿಳಿಯುವುದಾದರೆ, ಎಲೆಕ್ಟ್ರಿಕ್ ಕಾರುಗಳು ಸಹ ಬ್ಯಾಟರಿ ಚಾಲಿತವಾಗಿವೆ, ಪೆಟ್ರೋಲ್/ಗ್ಯಾಸೋಲಿನ್ ಕಾರುಗಳನ್ನು ತಯಾರುಮಾಡುತ್ತಿರುವ ಎಲ್ಲ ಕಂಪನಿಗಳು ಸದ್ಯ ಎಲೆಕ್ಟ್ರಿಕ್ ಕಾರುಗಳನ್ನು ತಯಾರು ಮಾಡುತ್ತಿವೆ, ಒಮ್ಮೆ ಬ್ಯಾಟರಿಯನ್ನು ಚಾರ್ಜ್‌ಮಾಡಿದರೆ ಸುಮಾರು 250-300 ಕಿ.ಮೀ ತನಕ ಚಾಲನೆ ಮಾಡಬಹುದು.
ಎಲೆಕ್ಟ್ರಿಕ್‌ಬೈಕ್‌ಗಳಂತೆ ಎಲೆಕ್ಟ್ರಿಕ್ ಕಾರುಗಳು ಸಹ ಬೆಲೆಯಲ್ಲಿ ಹೆಚ್ಚಿದ್ದು, ಸರಾಸರಿ 200 ಕಿ.ಮೀ ಕ್ರಮಿಸುವ ಒಂದು ಕಾರಿನ ಬೆಲೆ ಸುಮಾರು 11 ಲಕ್ಷವಾಗುತ್ತದೆ,
– ಒಮ್ಮೆ ಖರೀದಿಸಿದರೆ ಸಾಕು, ಕಡಿಮೆ ನಿರ್ವಹಣಾ ಮೊತ್ತ.
-ಆರಾಮಧಾಯಕ ಡ್ರೈವಿಂಗ್
-ಶಬ್ದ ಮಾಲಿನ್ಯವಿಲ್ಲ.
-ಕೆಲವೊಂದು ನಕಾರಾತ್ಮಕ ಅಂಶಗಳನ್ನು ನಾವು ನೊಡುವುದಾದರೆ.
-ಖರೀದಿ ಮಾಡುವ ಬೆಲೆ ಬಲು ದುಬಾರಿ..!
-ಪೆಟ್ರೋಲ್/ಗ್ಯಾಸೋಲಿನ್ ಕಾರುಗಳಂತೆ ಬಿಸಿಲಿನಲ್ಲಿ ಎಸಿಯ ಬಳಕೆ ಹೆಚ್ಚು ಸಾಧ್ಯವಿಲ್ಲ.
-ಒಮ್ಮೆ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್‌ಮಾಡಲು ಸುಮಾರು 1 ಘಂಟೆಯಿಂದ-11 ಘಂಟೆಯ ತನಕ ಸಮಯ ಹಿಡಿಯತ್ತದೆ.
-ಬ್ಯಾಟರಿಯನ್ನು ಚಾರ್ಜ್‌ಮಾಡಲು ಸಮಯದ ಆಭಾವದ ಜೊತೆ ಚಾರ್ಜ್ ಪಾಯಿಂಟ್‌ಗಳ ಕೊರತೆ ಇದೆ
–ದೂರದ ಪ್ರಯಾಣ ಕಷ್ಟ
-ಆದ್ದರಿಂದ ಮದ್ಯಮ ವರ್ಗದವರಿಗೆ ಈ ಕಾರುಗಳು ಕೈಗೆ ಎಟುಕದ ದ್ರಾಕ್ಷಿಯಾಗಿದೆ ಆದರೆ ವಾಣಿಜ್ಯ ಕ್ಷೇತ್ರದಲ್ಲಿ ಅದರಲ್ಲೂ ನಗರದ ಪ್ರದೇಶದಲ್ಲಿ ಎಲೆಕ್ಟ್ರಿಕ್ ಟ್ಯಾಕ್ಸಿಗಳ ಬಳಕೆ ಹೆಚ್ಚುತ್ತಲೆ ಇದೆ.
ಮಾಲಿನ್ಯದ ವಿಷಯವನ್ನು ವಿಮರ್ಶಿಸುವುದಾದರೆ ಎಲೆಕ್ಟ್ರಿಕ್ ಕಾರ್‌ಗಳಲ್ಲಿ “ಪಾರ್ಟಿಕಲ್ ಪೊಲ್ಯೂಶನ್” ಎಂಬ ಮಾಲಿನ್ಯ ಕಾರಕ ಇದೆ ಎಂಬುದು ಬೆಳಕಿಗೆ ಬಂದಿದೆ, “ಪಾರ್ಟಿಕಲ್ ಪೊಲ್ಯೂಶನ್” ಎಂದರೆ ಕಾರಿನ ಚಲಿಸುವಿಕೆಯ ಪರಿಣಾಮ ಬ್ರೇಕ್ ಮತ್ತು ಟೈರ್‌ನ ಬಳಸುವಿಕೆಯಿಂದ ಬಿಡುಗಡೆಗೊಳ್ಳುವ ದ್ರವ ರೂಪದ ಸಣ್ಣ ಕಣಗಳು, ಗಾಳಿಯಲ್ಲಿರುವ ಸಣ್ಣ ಕಣಗಳ ಜೊತೆ ಮಿಶ್ರಣ ಹೊಂದಿ ಪರಿಸರಕ್ಕೆ ಸೇರುವ ಕ್ರಿಯೆಯನ್ನು “ಪಾರ್ಟಿಕಲ್‌ಪೊಲ್ಯೂಶನ್” ಎನ್ನಬಹುದು, ಇದರಿಂದ ಮಾನವನಿಗೆ ಆಸ್ತಮ, ಕ್ಯಾನ್ಸರ್, ಶ್ವಾಸಕೋಶ ತೊಂದರೆಗಳು ಬರುವ ಸಾದ್ಯತೆ ಇದೆ, ಒಂದು ಅಧ್ಯಯನದ ಪ್ರಾಕಾರ 1850 ಪಟ್ಟು ಎಲೆಕ್ಟ್ರಿಕ್ ಕಾರ್‌ಗಳಲ್ಲಿ “ಪಾರ್ಟಿಕಲ್‌ಪೊಲ್ಯೂಶನ್” ಬಿಡುಗಡೆ ಗೊಳ್ಳುತ್ತವೆ ಎಂದು ಅಧ್ಯಯನ ವರದಿ ಮಾಡಿದೆ, ಹೀಗೆ ಹಲವಾರು ಸಾಧಕ-ಭಾದಕಗಳ ನಡುವೆಯೂ ಎಲೆಕ್ಟ್ರಿಕ್ ಕಾರು ನಿಧಾನವಾಗಿ ತನ್ನ ಸಾಮ್ರಾಜ್ಯವನ್ನು ಸ್ತಾಪಿಸುತ್ತಿದೆ.
ಪೆಟ್ರೋಲ್ ಬೈಕ್ ಮತ್ತು ಕಾರುಗಳು-
ಪೆಟ್ರೋಲ್ ಕಾರುಗಳು ಮತ್ತು ಬೈಕ್‌ಗಳು ಪೆಟ್ರೋಲ್ ಆಧಾರಿತ ಇಂಟರ್ನಲ್ ಕಂಬಷನ್ ಎಂಜಿನ್ ಬಳಸುತ್ತವೆ. ಮತ್ತು ಸಧಾರಣವಾಗಿ ಕಡಿಮೆ ಬೆಲೆಯಲ್ಲಿ ಸಿಗುವ ಕಾರಣದಿಂದಾಗಿ ಹೆಚ್ಚು ಬಳಕೆಯಲ್ಲಿದೆ.
ಪೆಟ್ರೋಲ್ ಕಾರುಗಳು ಮತ್ತು ಬೈಕ್‌ಗಳ ಪ್ರಯೋಜನಗಳು:
-ನಿತ್ಯ ಪ್ರಯಾಣ ಅಥವಾ ದೂರದ ಪ್ರಯಾಣಕ್ಕೆ ಉತ್ತಮ. ಕಡಿಮೆ ವೆಚ್ಚದಲ್ಲಿ ಲಭ್ಯವಿದೆ.
-ಹೆಚ್ಚು ಆಯ್ಕೆಗಳಿರುವ ಕಾರು/ಬೈಕ್‌ಗಳು ಹಲವು ಮಾದರಿಗಳಲ್ಲಿ ಲಭ್ಯವಿವೆ.
-ಕೆಲವೊಂದು ಕಾರುಗಳಲ್ಲಿ ಸುರಕ್ಷಿತ ಸೌಲಭ್ಯಗಳು ಉತ್ತಮವಾಗಿದೆ.
-ನಗರ ಹಾಗೂ ಹೆದ್ದಾರಿ ಎರಡಕ್ಕೂ ಸೂಕ್ತ.
- ಎಲ್ಲಕಡೆಯೂ ಪೆಟ್ರೋಲ್ ಸಿಗುವ ಕಾರಣ ಯಾವುದೇ ಚಿಂತೆಯಲ್ಲ.
ನಕಾರಾತ್ಮಕ ಅಂಶಗಳು-
-ಎಲೆಕ್ಟ್ರಿಕ್ ಬೈಕ್/ಕಾರ್‌ಗಳಿಗೆ ಹೋಲಿಸಿದರೆ ಇಂಧನ ವೆಚ್ಚ ಹೆಚ್ಚು. ಮತ್ತು ಶಬ್ದ ಹೆಚ್ಚು.
-ನಗರ ಟ್ರಾಫಿಕ್ನಲ್ಲಿ ಚಾಲನ ಸಮಸ್ಯೆಗಳು.(ಗೇರ್‌ಗಳ ಶಿಫ್ಟಿಂಗ್)
-ನಿರ್ವಹಣಾ ವೆಚ್ಚ ಹೆಚ್ಚಾಗಬಹುದು.
- ಟ್ರಿಪ್‌ಗಳಿಗೆ ಉತ್ತಮ, ಆದರೆ ಟ್ರಾಫಿಕ್‌ನಲ್ಲಿ ಪೆಟ್ರೋಲ್ ಬಳಕೆಯಿಂದ ಖರ್ಚು ಹೆಚ್ಚು.
ಹೀಗೆ ಎಲೆಕ್ಟ್ರಿಕ್ ಕಾರುಗಳು, ಬೈಕ್‌ಗಳು ಮತ್ತು ಪೆಟ್ರೋಲ್ ಬೈಕ್, ಕಾರುಗಳು ಅದರ ಪ್ರಾಮುಖ್ಯತೆಯನ್ನು ಹೊಂದಿದೆ ಆದರೆ ಪರಿಸರ ಮಾಲಿನ್ಯದ ಬಗ್ಗೆ ಕಾಳಜಿ ಇರುವವರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದರೆ ಪರಿಸರಕ್ಕೂ ಉತ್ತಮ ಅವರ ಜೇಬಿಗೂ ಉತ್ತಮ.