ಮೈಸೂರು ಅರಸರಿಗೆ ಅಲಮೇಲಮ್ಮ ಶಾಪ ನೀಡಿದ್ದು ಯಾಕೆ, ಅಲಮೇಲಮ್ಮ ಶಾಪ ಕೊಡುವಂತದ್ದ ಮೈಸೂರು ಅರಸರು ಏನು ಮಾಡಿದ್ದರು, ಅಲಮೇಲಮ್ಮ ಯಾರು, ಅಲಮೇಲಮ್ಮ ಕಾವೇರಿ ನದಿಗೆ ಹಾರಿದ್ದಾದರೂ ಯಾಕೆ. ಅಲಮೇಲಮ್ಮನ ಶಾಪದ ಅರ್ಥವೇನು.? ಅವುಗಳೆಲ್ಲವೂ ಕೂಡ ಎಷ್ಟು ನಿಜ ಎಂದು ಈಗ ತಿಳಿದುಕೊಳ್ಳೋಣ.
ಅಲಮೇಲಮ್ಮ ಯಾರು ಗೊತ್ತಾ.? 1610 ರಲ್ಲಿ ಶ್ರೀರಂಗ ಪಟ್ಟಣ ಇನ್ನು ಮೈಸೂರು ಒಡೆಯರ ಆಳ್ವಿಕೆಗೆ ಒಳಪಟ್ಟಿರಲಿಲ್ಲ. ಅದು ವಿಜಯನಗರದ ಸಾಮಂತ ರಾಜ್ಯವಾಗಿತ್ತು, ತಿರುಮಲ ರಾಜ ಈ ಭಾಗದ ಆಳ್ವಿಕೆ ನಡೆಸುತ್ತಿದ್ದರು. ತಿರುಮಲ ರಾಜನಿಗೆ ಇಬ್ಬರು ರಾಣಿಯರಿದ್ದರೂ, ಅವರಲ್ಲಿ ಒಬ್ಬರು ಅಲಮೇಲಮ್ಮ. ಒಂದು ದಿನ ತಿರುಮಲ ರಾಜನಿಗೆ ಸಂಧಿವಾತ ಶುರುವಾಯಿತು, ಆಗ ಈ ಖಾಯಿಲೆ ಎಷ್ಟು ಭಯಾನಕವಾಗಿತ್ತು ಎಂದರೆ ಇದನ್ನು ರಾಜರ ಖಾಯಿಲೆ ಅಂತನೇ ಕರೆಯಲಾಗುತ್ತಿತ್ತು. ಇದು ಎಷ್ಟು ಜಾಸ್ತಿ ಆಯಿತು ಎಂದರೆ ಇನ್ನೇನು ಈ ಖಾಯಿಲೆ ಇಂದ ತಿರುಮಲ ರಾಜ ಬದುಕುವುದೇ ಇಲ್ಲ ಎನ್ನುವ ರೀತಿ ಆಗಿತ್ತು. ಆಗ ಕೆಲ ಜ್ಯೋತಿಷಿಗಳು ತಲಕಾಡಿಗೆ ಒಂದು ಸಲ ಭೇಟಿ ಕೊಟ್ಟು ಬನ್ನಿ ಆಗುವ ಎಲ್ಲ ತೊಂದರೆ ಮತ್ತು ರಾಜರಿಗೆ ಇರುವ ಖಾಯಿಲೆ ಸರಿಹೋಗುತ್ತದೆ ಎಂದು ಹೇಳಿದ್ದರು. ಆಗಾಗಿ ತಿರುಮಲ ರಾಜ ತನ್ನ ಮೊದಲ ಪತ್ನಿಯನ್ನು ಕರೆದುಕೊಂಡು ತಲಕಾಡಿಗೆ ಹೋಗುತ್ತಾರೆ.
ಆಗ ಶ್ರೀರಂಗ ಪಟ್ಟಣವನ್ನು ನೋಡಿಕೊಳ್ಳೊವ ಹೊಣೆ 2ನೇ ಪತ್ನಿ ಅಲಮೇಲಮ್ಮನಾದಗಿತ್ತು. ಆಗ ಸಮಯ ನೋಡಿಕೊಂಡು ಶ್ರೀರಂಗ ಪಟ್ಟಣದ ಮೇಲೆ ದಾಳಿ ನಡೆಸಿದ್ದಾರೆ. ಅಂದು ರಾಜಾ ಒಡೆಯರ್ ಮಾಡಿದ್ದೇನು..? ಶ್ರೀರಂಗ ಪಟ್ಟಣವನ್ನು ವಶಪಡಿಸಿಕೊಳ್ಳಬೇಕು ಎಂದು ಮೈಸೂರು ಒಡೆಯರು ಮೊದಲಿನಿಂದಲು ಕಾಯುತ್ತಿದ್ದರು.
ಈಗ ತಿರುಮಲ ರಾಜ ತಲಕಾಡಿಗೆ ಹೋಗಿರುವ ವಿಚಾರ ರಾಜಾ ಒಡೆಯರಿಗೆ ಗೊತ್ತಾಯಿತು. ದಾಳಿ ಮಾಡೋಕೆ ಇದೆ ಒಳ್ಳೆಯ ಸಮಯ ಅಂತ ತಿಳಿದುಕೊಂಡರು. ನಂತರ ಶ್ರೀರಂಗ ಪಟ್ಟಣದ ಮೇಲೆ ದಾಳಿ ಮಾಡುತ್ತಾರೆ. ಆಗ ಶ್ರೀರಂಗ ಪಟ್ಟಣವನ್ನು ಪೂರ್ಣವಾಗಿ ತಮ್ಮ ವಶಕ್ಕೆ ಪಡೆದುಕೊಂಡರು.
ಆಗ ರಾಣಿ ಅಲಮೇಲಮ್ಮ ತಲಕಾಡಿಗೆ ಹೋಡಿ ಹೋದರು, ಅಲಮೇಲಮ್ಮನ ಬಳಿ ತುಂಬ ಚಿನ್ನಾಭರಣವಿತ್ತು ಅದನ್ನು ಅಲಮೇಲಮ್ಮ ರವರು ತುಂಬ ಇಷ್ಟ ಪಡುತ್ತಿದ್ದರು. ಅಲಮೇಲಮ್ಮ ಶ್ರೀರಂಗ ಪಟ್ಟಣ ದೇವಸ್ಥಾನದ ರಂಗನಾಥ ಸ್ವಾಮಿಯ ಮಡದಿ ರಂಗನಾಯಕಿಯ ಪರಮ ಭಕ್ತೆಯಾಗಿದ್ದರು. ಹಾಗಾಗಿ ವಾರದಲ್ಲಿ 2 ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರ ತಮ್ಮ ಬಳಿ ಇರುವ ಎಲ್ಲಾ ಚಿನ್ನಾಬರಣವನ್ನು ಪೂಜೆಗೆಂದು ಕೊಡುತ್ತಿದ್ದರು, 2 ದಿನದ ಪೂಜೆ ಮುಗಿದ ಮೇಲೆ ಆ ಎಲ್ಲ ಚಿನ್ನಾಭರಣವನ್ನು ಕೂಡ ಅಲಮೇಲಮ್ಮರಿಗೆ ನೀಡಲಾಗುತ್ತಿತ್ತು.
ಶ್ರೀರಂಗ ಪಟ್ಟಣವನ್ನು ಮೈಸೂರು ಒಡೆಯರು ಪೂರ್ತಿಯಾಗಿ ಆಕ್ರಮಿಸಿಕೊಂಡರು, ಆ ಸಂದರ್ಭದಲ್ಲಿ ಅಲಮೇಲಮ್ಮ ನವರು ತಮ್ಮ ಎಲ್ಲಾ ಒಡವೆಯನ್ನು ಗಂಟು ಕಟ್ಟಿಕೊಂಡು ಹೋಡಿಹೋಗುತ್ತಾರೆ. ನಂತರದಲ್ಲಿ ಅನಾರೋಗಕ್ಕೆ ತುತ್ತಾಗಿದ್ದ ತಿರುಮಲ ರಾಜರು ತಲಕಾಡಿನಲ್ಲಿ ಸಾವನ್ನಪ್ಪುತ್ತಾರೆ. ಇದರಿಂದ ಅಲಮೇಲಮ್ಮ ವಿಧವೆಯಾಗುತ್ತಾರೆ, ಹಿಂದಿನ ಕಾಲದಲ್ಲಿ ಯಾವ ವಿಧವೆಯರು ಕೂಡ ಗಂಡ ಸತ್ತ ನಂತರ ಒಡವೆಯನ್ನು ಧರಿಸುವಂತಿಲ್ಲ ಎನ್ನುವ ಪದ್ದತಿ ಇತ್ತು. ಹೀಗಾಗಿ ದೇವಸ್ಥಾನದವರ ಮನಸ್ಸಿನಲ್ಲಿ ಒಂದು ಕೆಟ್ಟ ಯೋಚನೆ ಬಂತು. ಅಲಮೇಲಮ್ಮ ಇನ್ನು ಒಡವೆಯನ್ನು ಧರಿಸುವಂತಿಲ್ಲ, ಉತ್ತರಾಧಿಕಾರಿಗೆ ಆ ಒಡವೆ ಸೇರುತ್ತೆ ಎಂದರೆ ಆಕೆಗೆ ಮಕ್ಕಳು ಇಲ್ಲ. ಹೀಗಾಗಿ ಆ ಎಲ್ಲಾ ಒಡವೆಗಳು ಕೂಡ ದೇವಸ್ಥಾನದ ವಶ ಮಾಡಿಕೊಳ್ಳಬೇಕೆಂದು ಯೋಚಿಸುತ್ತಾರೆ.
ಹೀಗಾಗಿ ದೇವಸ್ಥಾನದವರು ನೇರವಾಗಿ ಮೈಸೂರು ಒಡೆಯರಾದ ರಾಜಾ ಒಡೆಯರ ಬಳಿ ಹೋಗಿ ಇದರ ಬಗ್ಗೆ ಮಾತನಾಡುತ್ತಾರೆ, ಇವರು ಹೇಳಿದ ಮಾತು ಒಡೆಯರಿಗೂ ಕೂಡ ಸರಿ ಅನ್ನಿಸಿತು. ಆಗ ತಮ್ಮ ರಾಜಾಭಟರನ್ನು ಕರೆದು ಅಲಮೇಲಮ್ಮನ ಬಳಿ ಹೋಗಿ ಮನವಿ ಮಾಡಿ ಆ ಒಡವೆಗಳನ್ನು ತೆಗೆದುಕೊಂಡು ಬನ್ನಿ ಎಂದು ಹೇಳುತ್ತಾರೆ. ರಾಜನ ಮಾತಿನಂತೆ ರಾಜಾಭಟರು ಅಲಮೇಲಮ್ಮ ವಾಸಿಸುತ್ತಿದ್ದ ತಲಕಾಡಿಗೆ ಹೋಗಿ ಅಲಮೇಲಮ್ಮನ ಬಳಿ ಮನವಿ ಮಾಡಿಕೊಂಡರು , ರಾಜರು ಹೇಳಿದ್ದಾರೆ ನಿಮ್ಮೆಲ್ಲ ಒಡವೆಗಳನ್ನು ದೇವಸ್ಥಾನಕ್ಕೆ ಕೊಡಬೇಕಂತೆ ಎಂದು ಹೇಳುತ್ತಾರೆ. ಆದರೆ ಆ ಒಡವೆಗಳ ಮೇಲೆ ವಿಶೇಷವಾದ ಪ್ರೀತಿ ಹೊಂದಿದ್ದ ಅಲಮೇಲಮ್ಮ ಒಡವೆಗಳನ್ನು ಕೊಡಲು ನಿರಾಕರಿಸಿದ್ದಳು.
ಈ ವಿಷಯ ತಿಳಿದ ಒಡೆಯರು ಸೈನಿಕರನ್ನು ಕರೆದು ಅಲಮೇಲಮ್ಮನ ಬಳಿ ಬಲವಂತವಾಗಿ ಆ ಒಡವೆಗಳನ್ನು ಕಿತ್ತುಕೊಂಡುಬನ್ನಿ ಅಂತ ಆಜ್ಞೆ ಮಾಡುತ್ತಾರೆ. ಒಡೆಯರ ಮಾತಿನಂತೆ ಸೈನಿಕರು ಅಲಮೇಲಮ್ಮನ ಬಳಿ ಒಡವೆ ಕಿತ್ತುಕೊಳ್ಳಲು ಹೋದಾಗ ಅಲಮೇಲಮ್ಮ ತಪ್ಪಿಸಿಕೊಂಡು ಓಡಿ ಹೋಗುತ್ತಾರೆ. ಓಡುತ್ತಾ ಓಡುತ್ತಾ ಒಡವೆಯನ್ನು ತಮ್ಮ ಸೀರೆಯಲ್ಲಿ ಕಟ್ಟಿಕೊಂಡು ಮಾಲಿಂಗಿಯ ತನಕ ಓಡುತ್ತಾರೆ. ಆದರೆ ಕಾವೇರಿ ನದಿ ತೀರದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಇನ್ನ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ಅಲಮೇಲಮ್ಮನಿಗೆ ತಿಳಿಯಿತು, ಆದರೆ ಒಡವೆ ಕೊಡಲು ಕೂಡ ಅಲಮೇಲಮ್ಮನವರು ತಯಾರಿರಲಿಲ್ಲ.
ಹೀಗಾಗಿ ಒಡವೆ ಜೊತೆಗೆ ಕಾವೇರಿ ನದಿಗೆ ಹಾರುತ್ತಾರೆ, ನದಿಗೆ ಹಾರಬೇಕಾದರೆ ಒಂದು ಶಾಪವನ್ನು ನೀಡುತ್ತಾರೆ. ಆ ಶಾಪ ಏನೆಂದರೆ ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮತ್ತು ಮೈಸೂರು ರಾಜರಿಗೆ ಮಕ್ಕಳಾಗದಿರಲಿ ಎಂದು ಶಾಪ ನೀಡುತ್ತಾರೆ. ಒಂದು ವೇಳೆ ನಾನು ರಂಗನಾಯಕಿಯ ನಿಜವಾದ ಭಕ್ತೆಯಾಗಿದ್ದರೆ ನಾನು ನಿಜವಾದ ಪತಿವ್ರತೆ ಆಗಿದ್ದರೆ, ಈ ಶಾಪ ನಿಜವಾಗಲಿ ಎಂದು ಕೇಳಿಕೊಂಡು ನದಿಗೆ ಹಾರಿ ತಮ್ಮ ಪ್ರಾಣವನ್ನು ಬಿಡುತ್ತಾರೆ.
ಆರಂಭದಲ್ಲಿ ಮೈಸೂರು ಒಡೆಯರು ಸೇರಿದಂತೆ ಯಾರು ಕೂಡ ಸೂಕ್ಷ್ಮವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಕಾಲ ಕಳೆದಂತೆ ಅಲಮೇಲಮ್ಮನ ಶಾಪ ನಿಜವಾಗೋಕೆ ಶುರುವಾಯಿತು. ಒಂದು ಸಮಯದಲ್ಲಿ ಸಂಪತ್ ಭರಿತವಾಗಿದ್ದ ತಲಕಾಡು ಮರಳಿನಿಂದ ಆವೃತವಾಗಿ ಮಾರ್ಪಾಡಾಗುತ್ತಾ ಹೋಗಿತು.
ಸುಮಾರು 30ಕ್ಕೂ ಹೆಚ್ಚು ದೇವಸ್ಥಾನಗಳು ಮರಳಿನಿಂದ ತುಂಬಿ ಹೋಗಿವೆ. ಅಲಮೇಲಮ್ಮ ನದಿಗೆ ಹಾರಿದ ಮಾಲಂಗಿಯ ಬಳಿ ಕಾವೇರಿ ನದಿಯಲ್ಲಿ ದೊಡ್ಡ ದೊಡ್ಡ ಸುಳಿಗಳು ನಿರ್ಮಾಣವಾದವು, ಇಂದಿಗೂ ಕೂಡ ಆ ಸುಳಿಗಳು ಹಾಗೆಯೇ ಇದೆ. ಅದೇ ರೀತಿ 3ನೇ ಶಾಪದಂತೆ ಮೈಸೂರು ರಾಜರಿಗೆ ಮಕ್ಕಳು ಆಗಲೇ ಇಲ್ಲ. ಹೀಗಾಗಿ ಮಕ್ಕಳನ್ನು ದತ್ತು ಪಡೆಯುವ ಸಂಪ್ರಾದಾಯ ಮುಂದುವರೆದುಕೊಂಡು ಬಂದಿದೆ. ಈಗ ಶ್ರೀಕಂಠ ದತ್ತ ಒಡೆಯರಿಗೆ ಮಕ್ಕಳಿರಲಿಲ್ಲ ಎಂದು ಯದುವೀರ್ ನನ್ನು ದತ್ತು ಪಡೆಯಲಾಗಿದೆ, ಅವರಿಗೆ ಮಗು ಕೂಡ ಆಗಿದೆ.
ಆದರೆ ಆ ಮಗು ಮುಂದೆ ಒಡೆಯರಾದಾಗ ಅವರಿಗೆ ಮಗುವಾಗುವುದಿಲ್ಲ ಎನ್ನುವುದು ಸಂಪ್ರಾದಾಯ. ಮೊದಲು ಅಲಮೇಲಮ್ಮನವರ ಶಾಪವನ್ನು ನಂಬಿರಲಿಲ್ಲ. ಆದರೆ ನಂತರದಲ್ಲಿ ಈ ಶಾಪದ ಪರಣಾಮ ಬೀರುವುದನ್ನು ನಂಬುತ್ತ ಹೋಗುತ್ತಾರೆ. ಇದಕ್ಕಾಗಿಯೇ ಅಲಮೇಲಮ್ಮನ ಒಂದು ಬಂಗಾರದ ವಿಗ್ರಹಮಾಡಿಸಿದ್ದರು, ಶಾಪ ವಿಮೋಚನೆಗಾಗಿ ಆ ವಿಗ್ರಹಕ್ಕೆ ಪೂಜೆ ಮಾಡಲು ಶುರುಮಾಡಿದರು. ದಸರಾ ಸಮಯದಲ್ಲು ಅಲಮೇಲಮ್ಮನ ವಿಗ್ರಹಕ್ಕೆ ಪೂಜೆ ಮಾಡಲಾಗುತ್ತದೆ. ಈಗಲೂ ಕೂಡ ಈ ಸಂಪ್ರದಾಯ ಮುಂದುವರೆದುಕೊಂಡು ಬಂದಿದೆ. ಮೈಸೂರು ಅರಮನೆಯಲ್ಲಿ ಈ ವಿಗ್ರಹ ಇದೆ. ವಿಜ್ಞಾನದ ಪ್ರಕಾರ ಶಾಪಗಳು ಪರಿಣಾಮ ಬೀರುತ್ತದೆ ಎಂಬುದು ಸುಳ್ಳು, ಆದರೆ ಒಡೆಯರ ವಂಶವೃಕ್ಷ ನೋಡಿದರೆ 17ನೇ ಶತಮಾನದಿಂದ ಇದುವರೆಗೂ 7 ಒಡೆಯರು ದತ್ತು ಪುತ್ರರೇ ಹಾಗಿದ್ದಾರೆ, ಆಗಾಗಿ ಒಡೆಯರು ಶಾಪವನ್ನು ನಂಬುತ್ತಾರೆ.