ಸೀತಾಳನ್ನು ರಾಜಮ್ಮನವರು ತಮ್ಮ ಅಡುಗೆ ಮನೆಗೆ ಕರೆದುಕೊಂಡು ಹೋಗಿ ಮಾತನಾಡಿಸುತ್ತಾ ಕುಳಿತಿರುತ್ತಾರೆ. ದೇವರ ಮೇಲಿದ್ದ ಹೂವನ್ನು ಅವಳ ತಲೆಗೆ ಮುಡಿಸುತ್ತಾರೆ. ಸೀತಾ ಕಾಣದೆ ಇದ್ದ ಕಾರಣ ಶಂಕರನ ಹೃದಯ ಬಡಿತ ಜೋರಾಗುತ್ತಾ ಇರುತ್ತದೆ….. ಆದರೆ ಇಲ್ಲಿ ಸೀತ ಎಲ್ಲಿ ಎಂದು ಕೇಳುವಂತಿಲ್ಲ, ಕೇಳುವುದಕ್ಕೆ ನಾಚಿಕೆ ಶಂಕರನಿಗೆ, ತೋಳಿನಲ್ಲಿ ಎಷ್ಟು ಶಕ್ತಿ ಇದ್ದರೇನು,, ಗುಂಡಿಗೆ ಎಷ್ಟು ಗಟ್ಟಿ ಇದ್ದರೇನು ಎಂತಹ ಗಂಡಸೆ ಆದರೂ ಹೆಣ್ಣಿನ ಮುಂದೆ ಭಾವನೆಗಳನ್ನು ವ್ಯಕ್ತಪಡಿಸುವಾಗ ಬಲು ಕಷ್ಟ ಎಂಬುದು ಶಂಕರನಿಗೆ ಅರ್ಥವಾಗುತ್ತದೆ, ಆಗ ಶಂಕರ ಬಾಗಿಲಿನ ಪಕ್ಕದಲ್ಲಿದ್ದ ಪುಟ್ಟ ಟೇಬಲ್ ಮೇಲೆ ಕುಳಿತುಕೊಳ್ಳುತ್ತಾನೆ ಆಗ ಗುಡ್ಡಪ್ಪ ಮೇಷ್ಟ್ರು ನೋಡಿ ಇವನೆ ನನ್ನ ಕೊನೆಯ ಮಗ ಶಂಕರ, ಎಂದು ಶಾಮಣ್ಣನವರಿಗೆ ಮತ್ತು ಅವರ ಕುಟುಂಬದವರಿಗೆ ಪರಿಚಯ ಮಾಡಿಸುತ್ತಾರೆ, ಆಗ ಶಾಮಣ್ಣನವರು ಪ್ರೀತಿಯಿಂದ ನಮಸ್ಕಾರ ಎಂದು ಹೇಳುತ್ತಾರೆ, ಆಗ ಶಂಕರನೂ ಕೂಡ ನಮಸ್ಕಾರ ಎಂದು ಹಲ್ಲು ಗಿಂಜುತ್ತಾನೆ, ಆದರೂ ಶಂಕರನಿಗೆ ಸಮಾಧಾನವಿಲ್ಲ ಆಗ ಅಡಿಗೆ ಮನೆಯಿಂದ ಒಂದು ಧ್ವನಿ ಹೊರಬರುತ್ತದೆ ನಿಧಾನವಾಗಿ, ಅಲ್ಲಿ ಸೀತಾಳನ್ನು ಶಂಕರನ ಅಮ್ಮ ಮತ್ತು ಇನ್ನಿತರ ಹೆಂಗಸರು ರೇಗಿಸುತ್ತಿರುತ್ತಾರೆ, ಅಲ್ಲಿ ಸೀತಾ ನಾಚಿಕೊಂಡು ಇಲ್ಲ,,, BULLMER Trendy Clothing Set with Shirt & Pants Co-ords for Men
ಇಲ್ಲ, ಎಂದು ಹೇಳುತ್ತಿರುತ್ತಾಳೆ...ಆಗ ಶಂಕರ ನಿಧಾನಕ್ಕೆ ಎದ್ದು ಅಡಿಗೆ ಮನೆಯಕಡೆ ಹೋಗುತ್ತಾನೆ. ಇನ್ನೇನು ಹೋಗಿ ನೋಡಬೇಕು ಎನ್ನುವಷ್ಟರಲ್ಲಿ ಗುಂಡಪ್ಪ ಮೇಷ್ಟ್ರು ಏ ಬಾ ಇಲ್ಲಿ ಎಂದು ಕೂಗುತ್ತಾರೆ, ಆಗ ಶಂಕರ ಅಯ್ಯೋ ದೇವರೆ ಒಂದುಸಲನಾದ್ರು ನಾನು ಅವಳ್ನ ನೋಡೋಹಾಗೆ ಮಾಡು ಅಂತಾನೆ, ಒಲ್ಲದ ಮನಸ್ಸಿನಿಂದ ಅಪ್ಪನ ಹತ್ತಿರ ಬರುತ್ತಾನೆ, ಹೋಗಿ ಎಲ್ಲರಿಗೂ ತೋಟ ತೋರಿಸಿಕೊಂಡು ಕರ್ಕೊಂಡ್ ಬಾ ಅಂತಾರೆ ಗುಂಡಪ್ಪ.. ಆದರೆ ಅದಕ್ಕೆ ಯಾವುದೇ ಮರು ಮಾತನಾಡುವಂತಿಲ್ಲ ಎಂದು ಅವನಿಗೂ ಗೊತ್ತು, ಹೀಗಾಗಿ ಅಲ್ಲಿಂದ ಎಲ್ಲರನ್ನೂ ಕರೆದುಕೊಂಡು ಹೊರಡುತ್ತಾನೆ...ಶಂಕರ…
ಆದರೆ ಶಂಕರನಿಗೆ ಹೋಗುವ ಮನಸ್ಸಿರಲಿಲ್ಲ ಆದರೂ ಹೋಗಲೇ ಬೇಕಲ್ಲವೇ, ಇದು ಅವರ ಅಪ್ಪನ ಆಜ್ಞೆ ಆಗ ಎಲ್ಲರನ್ನು ಕರೆದುಕೊಂಡು ತೋಟದ ಕಡೆಗೆ ಹೊರಡುತ್ತಾನೆ, ಆದರೆ ಹೇಗೆ ಮಾತನಾಡಬೇಕು ಎಂಬುದು ಶಂಕರನಿಗೆ ತಿಳಿದಿಲ್ಲ, ಅವನಿಗೆ ಹೇಗಾದರೂ ಮಾಡಿ ಸೀತಾಳನ್ನು ನೋಡುವ ಬಯಕೆ ಆದರೂ ಯಾಕೋ ಸಮಯ ಕೂಡಿ ಬರುತ್ತಿಲ್ಲ, ಅದು ಅವನ ದೊಡ್ಡ ಚಿಂತೆಗೆ ಕಾರಣವಾಗಿತ್ತು, ಆಗ ಮಾತು ಶುರು ಮಾಡಿದ ಶಾಮಣ್ಣನವರು ನೀವೇ ತೋಟನೆಲ್ಲ ನೋಡಿಕೊಳ್ಳುವುದಾ ಎಂದು ಕೇಳುತ್ತಾರೆ, ಆಗ ಶಂಕರ ಹೌದು ನಾನು, ನಮ್ಮ ಅಣ್ಣ ಇಬ್ಬರು ನೋಡಿಕೊಳ್ಳುತ್ತೇವೆ ಅಂತಾನೆ ಶಂಕರ, ಹಸು ಎಷ್ಟಿದೆ ಎನ್ನುತ್ತಾರೆ ಶಾಮಣ್ಣ ,10 ಹಸುಗಳಿವೆ ಅದನ್ನೆಲ್ಲ ನಾನೇ ನೋಡಿಕೊಳ್ಳುವುದು ಅಂತಾನೆ ಶಂಕರ, ಅವರ ಜೊತೆ ಬರುತ್ತಿದ್ದ ಸೀತಾಳ ಅಣ್ಣ ಸೀತಾಳನ್ನು ನೋಡಿದ್ರಾ ನೀವು ಎಂದು ಕೇಳುತ್ತಾನೆ,
ಅದಕ್ಕೆ ಶಂಕರ ಇಲ್ಲ ನೋಡಕ್ಕೆ ಆಗ್ತಿಲ್ಲ ಎಂದು ಹೇಳುತ್ತಾನೆ, ಹೌದಾ, ಸರಿ ಬನ್ನಿ ಹಾಗಾದ್ರೆ ಹೋಗೋಣ ನಾನು ಕರ್ಕೊಂಡು ಬರ್ತೀನಿ ಅವಳ್ನ ಎಂದು ಶಂಕರ್ ನನ್ನ ಅವರ ಮನೆ ಹತ್ತಿರ ಕರೆದುಕೊಂಡು ಹೋಗುತ್ತಾನೆ, ಶಂಕರನಿಗೆ ಆಗ ಎಲ್ಲಿರದ ಖುಷಿ, ಆದರೆ ಒಂದು ಕಡೆ ಗಾಬರಿ, ಹಾಗೆ ಮೆಲ್ಲಗೆ ಮನೆಯ ಕಡೆ ಹೋಗುತ್ತಾರೆ, ಶ್ಯಾಮಣ್ಣನವರು ಹಿಂದೆ ತಿರುಗಿ ನೋಡುತ್ತಾರೆ, ಆದರೆ ಅಲ್ಲಿ ಶಂಕರ ಮತ್ತು ಸೀತಾಳ ಅಣ್ಣ ಇಬ್ಬರು ಇರುವುದಿಲ್ಲ, ಎಷ್ಟೆ ಆದರೂ ಸೀತಾಳ ಅಣ್ಣ ಮದುವೆ ಆದವರು ಅವರಿಗೆ ಮದುವೆಯಾಗುವ ಗಂಡಿನ ಭಾವನೆಗಳು ಅರ್ಥವಾಗುವುದು ಸಹಜ….ನಂತರ..
ಮುಂದುವರೆಯುವುದು……..