ನಂತರ ಎಲ್ಲರು ಊಟಕ್ಕೆ ಕೂಡುತ್ತಾರೆ, ಆಗಲು ಮಾತುಕತೆ ಇಲ್ಲ, ಭಯ, ಅದೇನೋ ಭಯ ಹೀಗಾಗಿ ಸಂಜೆಯ ಸಮಯ ಆಗಿ ಅವರು ಹೊರಡಲು ತಯಾರಾಗುತ್ತಾರೆ. ಆಗಲು ಮಾತುಕತೆ ಇಲ್ಲ ಏಕೆಂದರೆ ಇಬ್ಬರಿಗೂ ಮೊದಲ ಜೋಡಿಯ ಹುಡುಕಾಟ ಅಲ್ಲವೇ, ಹೀಗಾಗಿ ಇಬ್ಬರಲ್ಲೂ ಪ್ರಶ್ನಾರ್ಥಕ ಚಿನ್ಹೆ ಮನೆ ಮಾಡಿರುವುದು ಸಹಜ, ನಂತರ ಏನಾದರೂ ಮಾತನಾಡಲೇಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ ಅವರಿಗೆ ಎಲ್ಲರ ಮುಂದೆ ಮಾತನಾಡುವುದಕ್ಕೆ ಭಯ ಮತ್ತು ನಾಚಿಕೆ, ಸಮಯಕ್ಕೋಸ್ಕರ ಕಾಯೋಣ ಎಂದುಕೊಂಡು ಅವರು ಹೊರಡುವ ತನಕ ಕಾಯುತ್ತಾನೆ, ಆದರೆ ಅವನಿಗೆ ಮಾತನಾಡಲು ಸಮಯವೇ ಸಿಗುವುದಿಲ್ಲ, ಆಗ ವಿಳಾಸದ ವಿನಿಮಯ ಆಗಿ ನಿಮ್ಮ ಅಭಿಪ್ರಾಯವನ್ನು ಕಾಗದದ ಮೂಲಕ ತಿಳಿಸಿ ಎಂದು ಹೇಳಿ ಶಾಮಣ್ಣನವರು ಅಲ್ಲಿಂದ ಹೊರಡುತ್ತಾರೆ, ನಂತರ ಗುಂಡಪ್ಪ ಮೇಷ್ಟ್ರು ಮತ್ತು ರಾಜಮ್ಮನವರ ನಡುವೆ ಶಾಮಣ್ಣನವರ ಮಗಳಾದ ಸೀತಾಳ ಬಗ್ಗೆ ಮಾತುಕತೆ ಶುರುವಾಗುತ್ತದೆ ಈ ಮಾತುಕತೆಗಳು ಸಂಬಂಧವನ್ನು ಬಿಡುವ ಸಲುವಾಗಿರುತ್ತದೆ. ಇದನ್ನು ಕೇಳಿದ ಶಂಕರನ ಮನಸಲ್ಲಿ ವಿಭಿನ್ನ ಆಲೋಚನೆ ಶುರುವಾಗುತ್ತದೆ.Handcuffs Backpacks Vegan Leather Casual Backpack Multipurpose Travelling Bags Daypacks For Men And Women
ಆಗ ಶಂಕರ ಚಿಂತಾಕ್ರಾಂತನಾಗಿ ಹಸುಗಳನ್ನು ಕೊಟ್ಟಿಗೆಗೆ ಕಟ್ಟಲು ಹೋಗುತ್ತಾನೆ. ಶಂಕರ ಸೀತಾಳ ಯೋಚನೆಯಿಂದ ಹಸುವಿನಲ್ಲಿದ್ದ ಹಾಲನ್ನು ಕರೆಯಲು ಮರೆತು ಹೋಗುತ್ತಾನೆ. ಆಗ ಸಮಯ ರಾತ್ರಿ 9:00 ಗಂಟೆಯಾಗಿರುತ್ತದೆ. ರೂಂಗೆ ಹೋದ ಮೇಲೆ ಹಣೆಯ ಮೇಲೆ ಕೈಹೊತ್ತು, ಶಂಕರ ತನ್ನ ರೂಮಿನಲ್ಲಿ ಮಲಗುತ್ತಾರೆ ಇಷ್ಟು ದಿನ ದಿಂಬಿಗೆ ತಲೆಕೊಟ್ಟರೆ ನಿದ್ದೆ ಬರುತ್ತಿದ್ದ ಅವನಿಗೆ.
ಅಂದು ನಿದ್ದೆಯೇ ಬರುವುದಿಲ್ಲ, ಹೀಗಾಗಿ ಅತ್ತಿಂದಇತ್ತ ಹೊರಳಾಡುತ್ತಿರುತ್ತಾನೆ. ಆದರೆ ಅವನಿಗೆ ಸೀತಾಳ ಚಿಂತೆ ಹೆಚ್ಚಾಗುತ್ತಿರುತ್ತದೆ, ಅವಳ ಮುಗ್ದ ಕಣ್ಣು, ಹಾಗೂ ಅವಳ ಕಣ್ಣೋಟ, ಅವಳ ದುಂಡನೆಯ ಮುಖ ಎಲ್ಲವೂ ಶಂಕರನನ್ನು ಎಡಬಿಡದೆ ಕಾಡುತ್ತಿರುತ್ತದೆ, ಅಪ್ಪ-ಅಮ್ಮ ಏನಾದರೂ ಇವಳನ್ನು ಬೇಡ ಎಂದರೆ ಏನು ಮಾಡುವುದು ಎಂದು..? ಇಲ್ಲ ಅವರಿಗೂ ಈ ಸಂಬಂಧ ಇಷ್ಟವಾಗಿರಬಹುದು ಎಂದು ಅಂದುಕೊಳ್ಳುತ್ತಾನೆ ಅಂದುಕೊಂಡು ಮಲಗುತ್ತಾನೆ ಅಷ್ಟೊತ್ತಿಗೆ ಸಮಯ ರಾತ್ರಿ 2 ಗಂಟೆ ಆಗಿರುತ್ತದೆ...ಮುಂಜಾನೆ ಸೀತಾಳ ಅಣ್ಣ ಸೀತಾಳನ್ನು ಕೇಳುತ್ತಾನೆ. ಏನೇ ಪುಟ್ಟಿ ನಿನಗೆ ಇಷ್ಟ ಆದ್ರ ಅವರು ಎಂದು, ಅದಕ್ಕೆ ಏನು ಮಾತನಾಡದೆ ಸೀತಾ ಒಳಗಡೆ ಓಡಿ ಹೋಗುತ್ತಾಳೆ..
ಮುಂದುವರೆಯುತ್ತದೆ..