ಬೆಂಗಳೂರು; ಕನ್ನಡ ನಾಯಕನಟ ಮತ್ತು ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆಯ ಆರೋಪಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯ ಜಾಮೀನಿನ ಮೇಲೆ ತಮ್ಮ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ ಅವರು ಆರೋಪಿಯಾದ ದಿನದಿಂದಲೂ ಹಿಂದಿನ ಸೀಸನ್‌ನ ಬಿಗ್ ಬಾಸ್ ವಿನ್ನರ್ ಆದ ಪ್ರಥಮ್ ಅವರು, ದರ್ಶನ್ ಅವರ ವಿರುದ್ಧವಾದ ಮತ್ತು ರೇಣುಕಾ ಸ್ವಾಮಿ ಕುಟುಂಬಕ್ಕೆ ಹತ್ತಿರವಾದ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಇದಕ್ಕೆ ದರ್ಶನ್ ಫ್ಯಾನ್ಸ್ ಆಗಾಗ ವಿರೋಧ ವ್ಯಕ್ತಪಡಿಸುತ್ತಿದ್ದರು. ಕಾಲಾನಂತರ ಅದು ದರ್ಶನ್ ಫ್ಯಾನ್ಸ್ ಮತ್ತು ಒಳ್ಳೆ ಹುಡುಗ ಪ್ರಥಮ್ ಅವರ ನೇರ ನೇರ ಸಂಘರ್ಷಕ್ಕೆ ಕಾರಣವಾಯಿತು..Fflirtygo Men Graphic Print Cotton T-Shirt & Short Set for Men/Boys
ಇದೇ ನಿಟ್ಟಿನಲ್ಲಿ ರಮ್ಯಾ ಅವರು ಸಹ ಆಗಾಗ ರೇಣುಕಾ ಸ್ವಾಮಿ ಕೊಲೆ ಅರೋಪಿ ದರ್ಶನ್ ಅವರ ವಿರುದ್ಧ ಕೆಲವೊಂದು ಹೇಳಿಕೆಗಳು ಮತ್ತು ಪೋಸ್ಟ್ಗಳನ್ನು ಮಾಡುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರವಷ್ಟೇ ಮೋಹಕ ತಾರೆ ರಮ್ಯಾ ಅವರು ದರ್ಶನ್ ಅವರ ವಿರುದ್ಧವಾಗಿ ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನು ಬೆಂಬಲಿಸಿ, ಒಂದು ಪೋಸ್ಟನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿದ ದರ್ಶನ್ ಫ್ಯಾನ್ಸ್ ರಮ್ಯಾ ಅವರ ಸೋಶಿಯಲ್ ಮೀಡಿಯಾಗಳ ಅಕೌಂಟ್ ಗೆ ನುಗ್ಗಿ ಮನಬಂದಂತೆ ಕಮೆಂಟ್‌ಗಳ ಮಳೆಯನ್ನೇ ಸುರಿಸಿದ್ದರು. ಹೀಗಾಗಿ ರಮ್ಯಾ ಪೊಲೀಸ್ ಮೆಟ್ಟಿಲೇರುವ ಎಲ್ಲ ಸಾಧ್ಯತೆಗಳಿದೆ..
ಈ ಘಟನೆಯ ಹಿನ್ನೆಲೆಯಲ್ಲಿ ಬಿಗ್ ಬಾಸ್ ವಿನ್ನರ್ ಪ್ರಥಮ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಅದರ ಪ್ರಕಾರ ಇಷ್ಟೆಲ್ಲ ಆದರೂ ಹಿರಿಯ ಕಲಾವಿದರು ಮತ್ತು ಇನ್ನಿತರ ಕಲಾವಿದರು ನಟಿ ರಮ್ಯಾ ಅವರ ಬೆಂಬಲಕ್ಕೆ ನಿಲ್ಲುತ್ತಿಲ್ಲ ಹೀಗಾಗಿ ಕಂಡು ಕಾಣದಂತಿರುವ ನಿಮಗೆಲ್ಲಆ ದೇವರು ಆಯಸ್ಸು- ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಮಾರ್ಮಿಕವಾಗಿ ಒಂದು ಪೋಸ್ಟನ್ನು ಹಂಚಿಕೊಂಡಿದ್ದಾರೆ, ಈಗಲೂ ನಾವು ರಮ್ಯಾ ಅವರ ಪರ ಮತ್ತು ಆತ್ಮ ಗೌರವದಪರ ನಿಲ್ಲದೆ ಹೋದರೆ ನಾವು ಕಲಾವಿದರಾಗೋಕೆ ನಾಚಿಕೆ ಆಗಬೇಕು ಎಂದಿದ್ದಾರೆ ಮತ್ತು ಕನ್ನಡ ಚಿತ್ರರಂಗವನ್ನು ಭಯದಿಂದ ಮುಕ್ತಗೊಳಿಸೋಣ ಎಂದು ತಮ್ಮ ಅನಿಸಿಕೆಗಳನ್ನು ಎಕ್ಸ್ ಪೋಸ್ಟಿನ ಮೂಲಕ ಹಂಚಿಕೊಂಡಿದ್ದಾರೆ.. ಈ ಪೋಸ್ಟ್ ನೋಡಿದ ಹಲವಾರು ಜನರು ನಾವು ರಮ್ಯಾಪರ ನಿಂತಿದ್ದೇವೆ ಎಂದು ಪ್ರಥಮ್ ಅವರ ಪೋಸ್ಟ್ ಗೆ ರಿಪ್ಲೇ ಮಾಡಿದ್ದಾರೆ..