Skip to main content
ವಿಡಿಯೋ
politics

ರಾಜ್ಯಸಭೆಯಲ್ಲಿ ಇಂದು ಆಪರೇಷನ್‌ ಸಿಂದೂರ್‌ ಬಗ್ಗೆ ಚರ್ಚೆ : ಪ್ರಧಾನಿ ಮೋದಿ,ಅಮಿತ್‌ ಶಾ ಲೋಕಸಭೆಯಲ್ಲಿ ಚರ್ಚೆ..!

By Sushmitha R
ರಾಜ್ಯಸಭೆಯಲ್ಲಿ ಇಂದು ಆಪರೇಷನ್‌ ಸಿಂದೂರ್‌ ಬಗ್ಗೆ ಚರ್ಚೆ : ಪ್ರಧಾನಿ ಮೋದಿ,ಅಮಿತ್‌ ಶಾ ಲೋಕಸಭೆಯಲ್ಲಿ ಚರ್ಚೆ..!

ಇಂದು ರಾಜ್ಯಸಭೆಯಲ್ಲಿ  ನಡೆಯಲಿರುವ ಚರ್ಚೆಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಮತ್ತು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಭಾಗವಹಿಸಲಿದ್ದಾರೆ.

ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಭಾರತದ ಮಿಲಿಟರಿ ಪ್ರತಿಕ್ರಿಯೆಯಾದ ಆಪರೇಷನ್‌ ಸಿಂದೂರ್‌ ಕುರಿತು ಲೋಕಸಭೆಯು ಮಂಗಳವಾರ ಚರ್ಚೆಯನ್ನು ಮುಂದುವರಿಸಲಿದ್ದು, ರಾಜ್ಯಸಭೆಯು  ಅದರ ಕುರಿತು ಚರ್ಚೆಯನ್ನು ಪ್ರಾರಂಭಿಸಲಿದೆ. ನರೇಂದ್ರ ಮೋದಿಯವರು ಕೂಡ ಲೋಕಸಭೆಯಲ್ಲಿ  ಭಾಗವಹಿಸಲಿದ್ದಾರೆ.

ಇಂದು ರಾಜ್ಯಸಭೆಯಲ್ಲಿ  ನಡೆಯಲಿರುವ ಚರ್ಚೆಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಮತ್ತು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಭಾಗವಹಿಸಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಂಗಳವಾರ ಲೋಕಸಭೆಯನ್ನು ಉದ್ಧೇಶಿಸಿ ಮಾತನಾಡಿದ್ದಾರೆ.

ಗೃಹ ಸಚಿವ ಅಮಿತ್‌ ಶಾ ಮಧ್ಯಾಹ್ನ  12 ರಿಂದ 1 ಗಂಟೆಯವರೆಗೆ ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಆಪರೇಷನ್‌ ಸಿಂದೂರ್‌ ಬಗ್ಗೆ ಚರ್ಚೆಮಾಡಿದ್ದಾರೆ.

Lavie Women's Tinkle Framed Clutch | Ladies Purse Handbag

 

ರಾಜ್ಯಸಭೆಯ ಚರ್ಚೆಯಲ್ಲಿ ಭಾಗವಹಿಸುವ ಸಚಿವರಲ್ಲಿ ರಾಜನಾಥ್‌ ಸಿಂಗ್‌ ಮತ್ತು ಎಸ್‌ ಜೈಶಂಕರ್‌ ಭಾಗಿಯಾಗಿದ್ದಾರೆ. ಅದರ ಜೊತೆಗೆ ಪ್ರತಿಪಕ್ಷಗಳ ಮೇಲೆ ರಕ್ಷಣಾ ಸಚಿವ ರಾಜನಾಥ್‌  ಸಿಂಗ್‌ ವಾಗ್ದಾಳಿ ನಡೆಸಿದರು,

ಲೋಕಸಭೆಯಲ್ಲಿ  ಆಪರೇಷನ್‌ ಸಿಂದೂರ್‌ ಬಗ್ಗೆ  ಚರ್ಚೆಯ ಸಂದರ್ಭದಲ್ಲಿ ಎಸ್.‌ ಜೈಶಂಕರ್‌  ಅವರು  ಭಾರತದ  ಭಯೋತ್ಪಾದನಾ  ನಿಗ್ರಹ ಕಾರ್ಯತಂತ್ರದಲ್ಲಿ  ಪರಿವರ್ತನಾತ್ಮಕ ಬದಲಾವಣಿಯನ್ನು  ಪ್ರತಿಪಾದಿಸಿದರು.