ಅದೇ ಸಮಯದಲ್ಲಿ ಶಾಮಣ್ಣನವರ ಸಂಬಂಧಿಕರು ಒಂದು ಸಂಬಂಧವನ್ನು ಕರೆದುಕೊಂಡು ಸೀತಾಳ ಮನೆಗೆ ಬರುತ್ತಾರೆ, ಸೀತಾ ಬೆಳೆದು ದೊಡ್ಡವಳಾಗಿದ್ದಾಳೆ ಹುಡುಗನ ಮನೆಯವರು ಸಹ ಶ್ರೀಮಂತರು ಅವರಿಗೆ ನಿಮ್ಮ ಮಗಳನ್ನು ಕೊಡಿ ಎಂದು ಶಾಮಣ್ಣನವರನ್ನು ಕೇಳುತ್ತಾರೆ, ಆದರೆ ಶಾಮಣ್ಣನವರು ಸರಿ ಸೀತಾಳನ್ನು ಒಂದು ಮಾತು ಕೇಳುತ್ತೇನೆ ಒಂದು ನಿಮಿಷ ಎಂದು ಸೀತಾಳನ್ನು ಕೇಳುತ್ತಾರೆ ಆದರೆ ಸೀದಾ ಇಲ್ಲ ನನಗೆ ಅವರು ಇಷ್ಟವಾಗಿದ್ದಾರೆ ಹೀಗಾಗಿ ಇನ್ನು ಸ್ವಲ್ಪ ದಿಸ ಕಾಯುತ್ತೇನೆ ಎಂದು ಹೇಳುತ್ತಾಳೆ. ಹೀಗಾಗಿ ಅದೇ ಉತ್ತರವನ್ನು ಶಾಮಣ್ಣನವರು ಅವರ ನೆಂಟರಿಗೆ ಹೇಳಿ ಕಳುಹಿಸುತ್ತಾರೆ.Vogaan Men's Polo Shirt and Shorts Set | Summer Fashion Short Sleeve Solid Zipper 2 Pieces Outfits for Men
ಶಂಕರನ ಮನೆಯಲ್ಲಿ ಶಂಕರನ ಸಿಟ್ಟನ್ನು ತಾಳಲಾಗದೆ ಗುಂಡಪ್ಪನವರು ಒಂದು ನಿರ್ಣಯವನ್ನು ಮಾಡುತ್ತಾರೆ. ಸರಿ ಇನ್ನೂ ಇವನನ್ನು ಅವಳಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಪತ್ರವನ್ನು ಬರೆದು ಬಿಡೋಣ ಅಂತ ಹೇಳಿ ಶಾಮಣ್ಣನವರಿಗೆ ಮದುವೆ ಆಮಂತ್ರಣದ ಪತ್ರವನ್ನು ಬರೆದು ಶಂಕರನ ಕೈಲಿ ಪೋಸ್ಟ್ ಮಾಡಿಸುತ್ತಾರೆ. ಹೀಗಾಗಿ ಅಂದಿನಿಂದ ಶಂಕರ ಸಂತೋಷವಾಗಿರುತ್ತಾನೆ, ಒಂದು ತಿಂಗಳ ನಂತರ ಸೀತಾ ಮತ್ತು ಶಂಕರನ ಮದುವೆಯಾಗುತ್ತದೆ ಮದುವೆಯಾಗಿ ಇಬ್ಬರು ಬೆಂಗಳೂರು, ಮೈಸೂರು ಹೀಗೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ.
ಇಬ್ಬರಿಗೂ ಒಬ್ಬರನ್ನೊಬ್ಬರು ಕಂಡರೆ ಆತ್ಮೀಯತೆ ಪ್ರೀತಿ ಅದೇನೋ ಗೌರವ, ಇಬ್ಬರೂ ಸಹ ಪರಸ್ಪರ ಇಷ್ಟಪಟ್ಟಿದ್ದರು ಹೇಳಿಕೊಂಡಿರಲಿಲ್ಲ ಆದರೂ ಮನಸ್ಸಿನಲ್ಲಿ ಅಂದುಕೊಂಡಿದ್ದು ಮಾತ್ರ ಆಗಿತ್ತು ,ಇದು ದೇವರ ಆಶೀರ್ವಾದವೋ ಇಲ್ಲ ಅವರ ಭಾವನೆಗೆ ಸಿಕ್ಕ ಜಯವೋ ಗೊತ್ತಿಲ್ಲ, ನಂತರ ಇವರ ಪ್ರೀತಿಯ ಸಂಕೇತವಾಗಿ ಮೊದಲನೇದಾಗಿ ಗಂಡು ಮಗು ಜನಿಸಿತು ಎರಡು ವರ್ಷಗಳ ನಂತರ ಮತ್ತೊಂದು ಹೆಣ್ಣು ಮಗು ಜನಿಸಿತು ಅದಾದ ಕೆಲವು ವರ್ಷಗಳ ನಂತರ ಮತ್ತೊಂದು ಗಂಡು ಮಗುವಿಗೆ ಸೀತಾ ಜನ್ಮ ನೀಡಿದಳು, ಮೂರು ಮುದ್ದು ಮಕ್ಕಳ ಸಂಸಾರವಾಯಿತು ಇಬ್ಬರ ಕುಟುಂಬ.